ನವದೆಹಲಿ: ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವಂತಹ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಕಾಣ ಸಿಗುತ್ತವೆ. ಅದು ಪ್ರಾಣಿ-ಪಕ್ಷಿಗಳಾಗಿರಬಹುದು ಅಥವಾ ವಸ್ತುಗಳನ್ನು ಪತ್ತೆ ಹಚ್ಚುವುದಾಗಿರಬಹುದು ಆದರೆ, ನೆಟ್ಟಿಗರ ತಲೆಗೆ ಹುಳ ಬಿಡುವುದಂತೂ ನಿಜ. ಅಂಥದ್ದೇ ಮತ್ತೊಂದು ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೇಟ್ ಹಿಂಡ್ಸ್ ಎಂಬಾಕೆಯು ತಮ್ಮ ಟ್ವಿಟರ್ ಖಾತೆಯಲ್ಲಿ ಚಿತ್ರವೊಂದನ್ನು ಪೋಸ್ಟ್ ಮಾಡಿಕೊಂಡಿದ್ದು, ಈ ಚಿತ್ರದಲ್ಲಿರುವ ಬೆಕ್ಕನ್ನು ಪತ್ತೆಹಚ್ಚಿರಿ ಎಂದು ನೆಟ್ಟಿಗರಿಗೆ ಸವಾಲು ಎಸೆದಿದ್ದಾರೆ. ಚಿತ್ರದಲ್ಲಿ ಕೇಟ್ ಹಿಂಡ್ಸ್ ಮನೆಯ ಬಹುದೊಡ್ಡ ಪುಸ್ತಕದ ಕಪಾಟುವಿನಲ್ಲಿ ಬೆಕ್ಕೊಂದು ಅಡಗಿ ಕುಳಿತಿದ ಅದನ್ನು ನೆಟ್ಟಿಗರು ದಿಟ್ಟಿಸಿ ಪತ್ತೆ ಹಚ್ಚಬೇಕಾಗಿದೆ.
ರಾಶಿ ರಾಶಿ ಪುಸ್ತಕ, ಟಿವಿ ಸೇರಿದಂತೆ ವಸ್ತುಗಳಿಂದಲೇ ತುಂಬಿರುವ ಬಹುದೊಡ್ಡ ಕಪಾಟುವಿನಲ್ಲಿ ಬೆಕ್ಕು ಪತ್ತೆ ಹಚ್ಚುವುದು ಸುಲಭ ಅಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು. ಬೇಕಿದ್ದರೆ ಒಮ್ಮೆ ನೀವೇ ಕಣ್ಣಾಡಿಸಿ ಬೆಕ್ಕು ಪತ್ತೆಯಾದರೆ ನೀವು ಸವಾಲಿನಲ್ಲಿ ಗೆದ್ದಂತೆ. ಪತ್ತೆಯಾಗಲಿಲ್ಲವೆಂದರೆ ಉತ್ತರವೂ ನಿಮ್ಮ ಕಣ್ಣ ಮುಂದಿದೆ.
ಅಂದಹಾಗೆ ಚಿತ್ರವನ್ನು ಜೂನ್ 7 ರಂದು ಶೇರ್ ಮಾಡಲಾಗಿದ್ದು, ಈವರೆಗೂ ಎರಡು ಲಕ್ಷಕ್ಕೂ ಹೆಚ್ಚು ಲೈಕ್ಸ್ಗಳನ್ನು ಗಿಟ್ಟಿಸಿಕೊಂಡಿದೆ. 50 ಸಾವಿರಕ್ಕೂ ಹೆಚ್ಚು ರೀಟ್ವೀಟ್ಗಳಾಗಿವೆ. ಸಾಕಷ್ಟು ಫನ್ನಿ ಕಮೆಂಟ್ಗಳು ಹರಿದುಬಂದಿದ್ದು, ಅದನ್ನೂ ನೀವಿಲ್ಲಿ ಕಾಣಬಹುದಾಗಿದೆ. ಚಿತ್ರ ನೋಡಿ ನಿಮಗೆ ಏನು ಅನಿಸುತ್ತದೆಯೋ ಅದನ್ನು ಸಹ ಕಾಮೆಂಟ್ ಮೂಲಕ ಹಂಚಿಕೊಳ್ಳಬಹುದು. (ಏಜೆನ್ಸೀಸ್)