ದೇಶದಲ್ಲಿ ದಿನನಿತ್ಯ ಸಂಭವಿಸುವ ನೂರಾರು ರಸ್ತೆ ಅಪಘಾತ ಪ್ರಕರಣಗಳು ಜನರನ್ನು ಅಕ್ಷರಶಃ ಕಂಗಾಲಾಗಿಸಿದೆ. ಹೆಲ್ಮೆಟ್ ರಹಿತ ಚಾಲನೆ, ಅತೀ ವೇಗದ ಹಾಗೂ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವುದರಿಂದ ಇಂತಹ ಅಪಘಾತ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಇದೀಗ ಕೇಂದ್ರ ಸರ್ಕಾರ ಅಪಘಾತದ ಸಂತ್ರಸ್ತರಿಗೆ ನಗದು ರಹಿತ ಚಿಕಿತ್ಸೆಯನ್ನು ಜಾರಿಗೊಳಿಸಿದೆ.
ಇದನ್ನೂ ಓದಿ: ಏನಿದು ರಾಹುಲ್ ಗಾಂಧಿ ಮತಗಳ್ಳತನ ಆರೋಪ? ಚುನಾವಣಾ ಆಯೋಗದ ಸವಾಲೇನು? ಇಲ್ಲಿದೆ ಕಂಪ್ಲೀಟ್ ಚಿತ್ರಣ | Rahul Gandhi
ಹೌದು, ಅಪಘಾತಕ್ಕೀಡಾಗಿ ಬಳಲುತ್ತಿರುವವರಿಗೆ ಕೇಂದ್ರ ಸರ್ಕಾರ ಕ್ಯಾಶ್ಲೆಸ್ ಚಿಕಿತ್ಸೆಯನ್ನು ಕೊಡಲಿದೆ. ಯಾರದರು ವ್ಯಕ್ತಿ, ಮೋಟಾರು ವಾಹನಗಳಲ್ಲಿ ಸಂಚರಿಸುವ ಸಂದರ್ಭದಲ್ಲಿ ಅಪಘಾತಕ್ಕೆ ತುತ್ತಾದರೆ, ದೇಶದ ಯಾವುದೇ ಆಸ್ಪತ್ರೆಗಳಲ್ಲಿ 1.5 ಲಕ್ಷ ರೂ. ವರೆಗೆ ಉಚಿತ ಚಿಕಿತ್ಸೆಯನ್ನು ಪಡೆಯಬಹುದಾಗಿದೆ. ಆದರೆ, ಈ ಯೋಜನೆಯ ಸೌಲಭ್ಯವನ್ನು ಪಡೆಯಲು ಅಪಘಾತವಾದ 7 ದಿನದೊಳಗೆ ಅರ್ಜಿ ಸಲ್ಲಿಸಬೇಕು ಎಂಬುದು ಗಮನಾರ್ಹ.
ಈ ಯೋಜನೆ ಆಯುಶ್ಮಾನ್ ಭಾರತ್, ಪ್ರಧಾನ ಮಂತ್ರಿ ಜನ್ ಆರೋಗ್ಯ ಯೋಜನಾ ವ್ಯಾಪ್ತಿಗೆ ಒಳಪಟ್ಟಿರುವುದಿಲ್ಲ. ನಗದು ರಹಿತ ಯೋಜನೆಯನ್ನು ಐಟಿ ವಿಭಾಗ, ಆರೋಗ್ಯ ವಿಭಾಗದಿಂದ ಪರೀಶೀಲಿಸಲಾಗುತ್ತದೆ. ಯೋಜನೆಯು ವಿಮೆ ವಿಭಾಗದ ಜೊತೆಗೂ ಜಂಟಿಯಾಗಿ ಕಾರ್ಯನಿರ್ವಹಿಸುತ್ತದೆ. ಕಾರಣ, ಮೋಟರ್ ವಾಹನಗಳಿಗೂ ಇನ್ಶೂರೆನ್ ಲಭ್ಯ ಇರುವುದರಿಂದ ಜಂಟಿಯಾಗಿ ಕಾರ್ಯನಿರ್ವಹಿಸುತ್ತದೆ. ಈ ಯೋಜನೆಗೆ ಕೇಂದ್ರ ಸರ್ಕಾರವು 2025-26ನೇ ಸಾಲಿನ ಬಜೆಟ್ನಲ್ಲಿ 272 ಕೋಟಿ ರೂ. ಅನ್ನು ಘೋಷಿಸಿದೆ ಎಂದು ಸಚಿವರು ಸಂಸತ್ತಿನಲ್ಲಿ ಪ್ರಸ್ತಾಪಿಸಿದರು.