UP: ಮದುವೆ ಮುಗಿಸಿ ವಾಪಾಸ್ಸಾಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಐವರು ಸಾವನ್ನಪ್ಪಿ, ಆರು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಉತ್ತರ ಪ್ರದೇಶದ ಹಾರ್ಡೋಯ್ ನಲ್ಲಿ ಶುಕ್ರವಾರ (ಮೇ.30) ನಡೆದಿದೆ.
ಕುಸುಮಾ ಗ್ರಾಮದಲ್ಲಿ ನಡೆದ ಮದುವೆಯಲ್ಲಿ ಭಾಗವಹಿಸಿ ವಾಪಾಸ್ಸಾಗುತ್ತಿದ್ದಾಗ ಈ ಭೀಕರ ಅಪಘಾತ ಸಂಭವಿಸಿದೆ.
ಇದನ್ನೂ ಓದಿ: ಜೂನ್ 1ರಿಂದ ಈ ಫೋನ್ಗಳಲ್ಲಿ ವಾಟ್ಸ್ಆ್ಯಪ್ ಕೆಲಸ ಮಾಡಲ್ಲ! ಯಾವೆಲ್ಲ ಸ್ಮಾರ್ಟ್ಫೋನ್? ಇಲ್ಲಿದೆ ನೋಡಿ ಪಟ್ಟಿ | WhatsApp
ಆಲಮ್‌ನಗರ ರಸ್ತೆಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ನಂತರ ಕಾರು ಅತಿ ವೇಗವಾಗಿ ಚಲಿಸುತ್ತಿದ್ದ ಪರಿಣಾಮ ನಿಯಂತ್ರಣ ತಪ್ಪಿ ಕಂದರಕ್ಕೆ ಬಿದ್ದಿದೆ. ವಾಹನದಲ್ಲಿ ಜಿತೇಂದ್ರ, ಅವರ ಮಗ ಸಿದ್ಧಾರ್ಥ್, ರಾಮು, ಆಕಾಶ್ ಮತ್ತು ಜೋಹ್ರಿ ಸೇರಿದಂತೆ 11 ಜನರು ಪ್ರಯಾಣಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಪಘಾತದಲ್ಲಿ ಐವರು ಮೃತಪಟ್ಟಿದ್ದು, ಉಳಿದ ಆರು ಮಂದಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. (ಏಜೆನ್ಸೀಸ್)