ರಾಜ್ಯಕ್ಕೆ ಬರ್ತಿಲ್ಲ ಸಮರ್ಥ ಔಷಧ ಕಂಪನಿಗಳು 
ನ್ಯೂಸ್

ರಾಜ್ಯಕ್ಕೆ ಬರ್ತಿಲ್ಲ ಸಮರ್ಥ ಔಷಧ ಕಂಪನಿಗಳು : ಸ್ಪರ್ಧಾತ್ಮ ದರ ದೊರೆಯದ ಸರ್ಕಾರಕ್ಕೆ ನಷ್ಟ - Capable pharmaceutical companies

ಸ್ಪರ್ಧಾತ್ಮಕ ದರಗಳ ದೊರೆಯದೆ ಕಾರಣ ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ವೆಚ್ಚ ಉಂಟಾಗುತ್ತಿದೆ. ಈ ಕುರಿತು ಇಲಾಖೆ ಸಚಿವ ಯು.ಟಿ.ಖಾದರ್, ಆಯುಕ್ತರಿಗೆ ಬರೆದಿರುವ ಪತ್ರದಲ್ಲಿ ಟೆಂಡರ್‌ಗಳ ಮೌಲ್ಯಮಾಪನ, ದರ ಬಿಡ್ ತೆರೆಯುವಿಕೆ, ಗುತ್ತಿಗೆ ನೀಡುವಿಕೆ, ಬಿಲ್ ಪಾವತಿ ವಿಳಂಬ ಸೇರಿ ನಿಗದಮ ಕಾರ್ಯವೈಖರಿಗಳ ಬಗ್ಗೆ ಉಲ್ಲೇಖಿಸಿದ್ದಾರೆ.

ಬೆಂಗಳೂರು: (Capable pharmaceutical companies) ಆರೋಗ್ಯ ಇಲಾಖೆಯ ಅಧೀನದ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮವು (ಕೆಎಸ್‌ಎಂಎಸ್‌ಸಿಎಲ್) ನಡೆಸುತ್ತಿರುವ ಕೋಟ್ಯಂತರ ರೂ.ಮೌಲ್ಯದ ಜೀವ ರಕ್ಷಕ ಔಷಧಗಳು ಮತ್ತು ಉಪಕರಣಗಳ ಖರೀದಿಯ ಟೆಂಡರ್‌ಗಳಿಗೆ ಬಿಡ್ ಮಾಡಲು ಸಮರ್ಥ ಕಂಪನಿಗಳೇ ಬರ್ತಿಲ್ಲ.

ಔಷಧಗಳ ಬಿಲ್‌ಗಳಿಗೆ ಹಣ ಪಾವತಿ ವಿಳಂಬದಿಂದಾಗಿ ಅನೇಕ ಅರ್ಹ ಕಂಪನಿಗಳು ಟೆಂಡರ್ ಬಿಡ್ ಮಾಡಲು ಹಿಂಜರಿಯುತ್ತಿವೆ. ಇದರಿಂದಾಗಿ ಇತರೆ ರಾಜ್ಯಗಳಿಗೆ ಹೋಲಿಸಿದರೆ ನಿಗಮದ ಟೆಂಡರ್‌ಗಳಲ್ಲಿ ಕೆಲವೇ ಬಿಡ್‌ದಾರರು ಭಾಗವಹಿಸುತ್ತಿದ್ದು, ಇದರ ಪರಿಣಾಮ ಸ್ಪರ್ಧಾತ್ಮಕ ದರಗಳ ದೊರೆಯದೆ ಕಾರಣ ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ವೆಚ್ಚ ಉಂಟಾಗುತ್ತಿದೆ. ಈ ಕುರಿತು ಇಲಾಖೆ ಸಚಿವ ಯು.ಟಿ.ಖಾದರ್, ಆಯುಕ್ತರಿಗೆ ಬರೆದಿರುವ ಪತ್ರದಲ್ಲಿ ಟೆಂಡರ್‌ಗಳ ಮೌಲ್ಯಮಾಪನ, ದರ ಬಿಡ್ ತೆರೆಯುವಿಕೆ, ಗುತ್ತಿಗೆ ನೀಡುವಿಕೆ, ಬಿಲ್ ಪಾವತಿ ವಿಳಂಬ ಸೇರಿ ನಿಗದಮ ಕಾರ್ಯವೈಖರಿಗಳ ಬಗ್ಗೆ ಉಲ್ಲೇಖಿಸಿದ್ದಾರೆ.

ನಿಗಮ ಪ್ರತಿ ವರ್ಷ ನೂರಾರು ಕೋಟಿ ರೂ. ಮೌಲ್ಯದ ಬ್ಯಾಂಡೇಜ್ ಕ್ಲಾತ್, ಕಾಟನ್, ಸರ್ಜಿಕಲ್ ಗ್ಲೌಸ್, ಗ್ಲೂಕೋಸ್ ಬಾಟಲ್, ಆಂಟಿಬಯೋಟಿಕ್ ಮಾತ್ರೆ ಮತ್ತು ವೈದ್ಯಕೀಯ ಸಲಕರಣೆ ಸೇರಿ ವಿವಿಧ ಔಷಧಗಳನ್ನು ಖರೀದಿಸಿ ಜಿಲ್ಲಾ, ತಾಲೂಕು ಆಸ್ಪತ್ರೆ, ಸಮುದಾಯ, ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ನಗರ ಆರೋಗ್ಯ ಕೇಂದ್ರಗಳಿಗೆ ಉಚಿತವಾಗಿ ಪೂರೈಸುವ ಜವಾಬ್ದಾರಿ ಹೊತ್ತಿಕೊಂಡಿದೆ. ಆದರೆ, ನಿಗಮದ ಆಡಳಿತ್ಮಾತಕ ಲೋಪದೋಷಗಳಿಂದ ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆಯುತ್ತಿಲ್ಲ.

ಅನುಪಾಲನಾ ವರದಿ ಕೊಡಿ:

ನಿಗಮದ ಟೆಂಡರ್‌ಗಳಲ್ಲಿ ಹೇಗೆಲ್ಲಾ ಲೋಪದೋಷಗಳು ಕಂಡುಬರುತ್ತಿರುವ ಕುರಿತು 10-12 ಅಂಶಗಳನ್ನು ಉಲ್ಲೇಖಿಸಿ ಸಚಿವ ಯು.ಟಿ. ಖಾದರ್, ಆಯುಕ್ತರಿಗೆ ಪತ್ರ ಬರೆದು 15 ದಿನದೊಳಗೆ ಅನುಪಾಲನಾ ವರದಿ ಕೊಡುವಂತೆ ಸೂಚಿಸಿದ್ದಾರೆ. ಸಾರ್ವಜನಿಕ ಹಣದ ಸದ್ಬಳಕೆ, ಟೆಂಡರ್‌ಗಳಲ್ಲಿ ಹೆಚ್ಚಿನ ಸ್ಪರ್ಧೆ, ಸರಬರಾಜುದಾರರಿಗೆ ಸಕಾಲಿಕ ಹಣ ಪಾವತಿ ಹಾಗೂ ರಾಜ್ಯದ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ದೊರೆಯುವಂತೆ ಮಾಡಲು ಕೆಲವೊಂದು ನಿರ್ದೇಶನಗಳ ಜಾರಿಗೆ ತರುವಂತೆ ಆಯುಕ್ತರಿಗೆ ತಾಕೀತು ಮಾಡಿದ್ದಾರೆ.

ನಿಗಮ ಅಪಖ್ಯಾತಿ:

ಸಾಲು ಸಾಲು ವಿವಾದ, ಎಡವಟ್ಟು ಮೂಲಕ ನಿಗಮವು ಅಪಖ್ಯಾತಿಗೀಡಾಗಿದೆ. ಸಚಿವರು ಬದಲಾದರೂ ನಿಗಮದಲ್ಲಿ ಇನ್ನಷ್ಟು ಭ್ರಷ್ಟಾಚಾರ ಜಾಸ್ತಿಯಾಗುತ್ತಿದೆ. ಟೆಂಡರ್‌ನಲ್ಲಿ ಅಕ್ರಮ ನಡೆಯುತ್ತಿರುವುದು, ಕಂಪನಿಗಳಿಂದ ಕಮಿಷನ್ ವಸೂಲಿ, ಅಧಿಕಾರಿಗಳ ಕರ್ತವ್ಯ ಲೋಪ, ಪಾಲುದಾರಿಕೆ ಹೆಸರಿನಲ್ಲಿ ಟೆಂಡರ್‌ಗಳಲ್ಲಿ ಭಾಗವಹಿಸುವುದು,ಸಚಿವರ ಹೆಸರು ಬಳಸಿಕೊಂಡು ಹಣ ವಸೂಲಿ ಮತ್ತು ಕೆಲವರಿಂದ ನಿಗಮದ ಮೇಲೆ ಹಿಡಿತ ಸಾಧಿಸಿರುವ ಕುರಿತು ನಿಗಮದ ಮೂಲಗಳೇ ತಿಳಿಸಿವೆ.

ಸಚಿವರು ಪಟ್ಟಿ ಮಾಡಿರುವ ಲೋಪದೋಷಗಳು?

* ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳದ ಹಲವು ಟೆಂಡರ್‌ಗಳು

* ತಾಂತ್ರಿಕ ಮೌಲ್ಯಮಾಪನ, ಬಿಡ್ ತೆರೆಯುವಿಕೆ,ಕಾರ್ಯಾದೇಶ ಪತ್ರ ನೀಡಲು ವಿಳಂಬ

* ಕೆಟಿಪಿಪಿ ನಿಯಮ ಉಲ್ಲಂಸಿ ಟೆಂಡರ್ ಅಂತಿಮಕ್ಕೆ ಹೆಚ್ಚಿನ ಕಾಲಾವಕಾಶ ಪಡೆಯುವುದು

* ಹಂಚಿಕೆಯಾದ ಅನುದಾನ ಆಯಾ ಆರ್ಥಿಕ ವರ್ಷದಲ್ಲಿ ಸದ್ಬಳಕೆಯಾಗದೆ ಉಳಿಯುವುದು

* ದೀರ್ಘಕಾಲವರೆಗೆ ಬಿಡ್‌ದಾರರ ಇಎಂಡಿ ಸ್ಥಗಿತವಾಗುವುದು

* ದರ ಏರಿಳಿತದ ಅಪಾಯದಿಂದ ಟೆಂಡರ್‌ಗಳಲ್ಲಿ ಭಾಗವಹಿಸುವಿಕೆ ಕಡಿಮೆಯಾಗಿ ಸ್ಪರ್ಧಾತ್ಮಕತೆ ಕುಸಿತ

* ನಿಗದಿತ ಸಮಯದಲ್ಲಿ ಬಿಲ್‌ಗಳಿಗೆ ಹಣ ಪಾವತಿ ವಿಳಂಬ

* ಸಮರ್ಥ ಕಂಪನಿಗಳು ಟೆಂಡರ್‌ಗಳಲ್ಲಿ ಭಾಗಿಯಾಗಲು ಹಿಂದೇಟು

* ಏಕ ಬಿಡ್ ತೆರೆಯುವಿಕೆ

* ಟೆಂಡರ್‌ಗಳಲ್ಲಿ ಪೈಪೋಟಿ ಇಲ್ಲದ ಕಾರಣ ಸ್ಪರ್ಧಾತ್ಮಕ ದರ ದೊರೆಯದ ಕಾರಣ ಸರ್ಕಾರಕ್ಕೆ ಬೊಕ್ಕಸಕ್ಕೆ ಆರ್ಥಿಕ ಹೊರೆ