ಕೌನ್ಸೆಲಿಂಗ್ ಬದಲಾಗಿ ಅಬಕಾರಿ ಅಧೀಕ್ಷಕ, ಉಪ ಅಧೀಕ್ಷಕರ ಸಾರ್ವತ್ರಿಕ ವರ್ಗಾವಣೆ: ಸರ್ಕಾರದ ಆದೇಶಕ್ಕೆ ಆಕ್ಷೇಪ

ಕಳೆದ ಮಾರ್ಚ್‌ನಲ್ಲಿ ಹಿಂದಿನ ಸಿಎಂ ಸಿದ್ದರಾಮಯ್ಯ ಮಂಡಿಸಿದ್ದ ಬಜೆಟ್‌ನಲ್ಲಿ ಅಧೀಕ್ಷಕರು ಮತ್ತು ಉಪ ಅಧೀಕ್ಷಕರನ್ನು ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡುವ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಅದರಂತೆ, ಸಾರ್ವತ್ರಿಕ ವರ್ಗಾವಣೆ ವೇಳೆ ಅವರನ್ನು ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡಬೇಕಿತ್ತು. ಆದರೆ, ಸಾರ್ವತ್ರಿಕ ವರ್ಗಾವಣೆ ಮೂಲಕ ವರ್ಗಾವಣೆಗೊಳಿಸಿರುವುದಕ್ಕೆ ಆಕ್ಷೇಪ ಕೇಳಿಬಂದಿದೆ.
ಸರ್ಕಾರದ ಆದೇಶಕ್ಕೆ ಆಕ್ಷೇಪ
ಕೌನ್ಸೆಲಿಂಗ್ ಬದಲಾಗಿ ಅಬಕಾರಿ ಅಧೀಕ್ಷಕ, ಉಪ ಅಧೀಕ್ಷಕರ ಸಾರ್ವತ್ರಿಕ ವರ್ಗಾವಣೆ
Published on: 

ಬೆಂಗಳೂರು: (Objections raised against government order) ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಮುಗಿದು 5 ತಿಂಗಳ ಬಳಿಕ ಗ್ರೂಪ್ ‘ಎ’ ವೃಂದದ ಐವರು ಅಬಕಾರಿ ಉಪ ಆಯುಕ್ತರು, ಗ್ರೂಪ್ ‘ಬಿ’ ವೃಂದದ 15 ಅಬಕಾರಿ ಅಧೀಕ್ಷಕರು ಮತ್ತು 16 ಉಪ ಅಧೀಕ್ಷಕರನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

ಕಳೆದ ಮಾರ್ಚ್‌ನಲ್ಲಿ ಹಿಂದಿನ ಸಿಎಂ ಸಿದ್ದರಾಮಯ್ಯ ಮಂಡಿಸಿದ್ದ ಬಜೆಟ್‌ನಲ್ಲಿ ಅಧೀಕ್ಷಕರು ಮತ್ತು ಉಪ ಅಧೀಕ್ಷಕರನ್ನು ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡುವ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಅದರಂತೆ, ಸಾರ್ವತ್ರಿಕ ವರ್ಗಾವಣೆ ವೇಳೆ ಅವರನ್ನು ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡಬೇಕಿತ್ತು. ಆದರೆ, ಸಾರ್ವತ್ರಿಕ ವರ್ಗಾವಣೆ ಮೂಲಕ ವರ್ಗಾವಣೆಗೊಳಿಸಿರುವುದಕ್ಕೆ ಆಕ್ಷೇಪ ಕೇಳಿಬಂದಿದೆ.

ಕೌನ್ಸೆಲಿಂಗ್ ವರ್ಗಾವಣೆಯಲ್ಲಿ ಭ್ರಷ್ಟಾಚಾರಕ್ಕೆ ಆಸ್ಪದ ಇರುವುದಿಲ್ಲ. ಸೇವಾವಧಿ ಹಿರಿತನ ಆಧಾರದಲ್ಲಿ ವರ್ಗಾವಣೆ ಪ್ರಕ್ರಿಯೆ ನಡೆಯುತ್ತದೆ. ಕೌನ್ಸೆಲಿಂಗ್ ಇಲ್ಲದಿದ್ದರೆ ಲಕ್ಷಾಂತರ ರೂ.ಲಂಚ ನೀಡಬೇಕಾಗುತ್ತದೆ. ಹೆಚ್ಚು ಲಂಚ ನೀಡಿದವರಿಗೆ ಆಯಕಟ್ಟಿನ ಹುದ್ದೆ ಸಿಕ್ಕರೆ, ಹಣ ನೀಡದವರಿಗೆ ಬ್ರಿವರಿ, ಡಿಸ್ಟಿಲರಿ ಹುದ್ದೆಗೆ ವರ್ಗಾಯಿಸುತ್ತಾರೆ ಎಂದು ಇಲಾಖೆ ಕೆಲ ಅಧಿಕಾರಿಗಳು ಅಳಲು ತೋಡಿಕೊಂಡಿದ್ದಾರೆ.

Also Read
ಪರೀಕ್ಷಾ ಕೇಂದ್ರಗಳಲ್ಲಿ 111 ಎಲೆಕ್ಟ್ರಾನಿಕ್ ಸಾಧನ ಬಳಿಸಿ ಅಕ್ರಮ: ಭಾರಿ ಆಕ್ರೋಶಕ್ಕೆ ಶಿಕ್ಷಣ ಸಚಿವರ ತಲೆದಂಡ | South Korea
ಸರ್ಕಾರದ ಆದೇಶಕ್ಕೆ ಆಕ್ಷೇಪ

ಇನ್ನೂ ಕಾಯುತ್ತಿರುವ ಗ್ರೂಪ್ ‘ಸಿ’ ಅಧಿಕಾರಿಗಳು

ಕಳೆದ ವರ್ಷ ಸಾರ್ವತ್ರಿಕ ವರ್ಗಾವಣೆ ಸಂದರ್ಭದಲ್ಲಿ ಗ್ರೂಪ್ ‘ಸಿ’ ವೃಂದದ ಅಬಕಾರಿ ನಿರೀಕ್ಷಕರು, ನಿರೀಕ್ಷಕರು ಸೇರಿ 415 ಸಿಬ್ಬಂದಿಯನ್ನು ಕೌನ್ಸೆಲಿಂಗ್ ಮೂಲಕ ವರ್ಗಾಯಿಸಲಾಗಿತ್ತು. ಆದರೆ, ಈ ಬಾರಿ ಸರ್ಕಾರವು ಅನುಮೋದನೆ ನೀಡದ ಕಾರಣ ಪ್ರಸಕ್ತ ಸಾಲಿನ ಸಾರ್ವತ್ರಿಕ ವರ್ಗಾವಣೆಯಲ್ಲಿ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆ ನಡೆದಿಲ್ಲ. ಕೌನ್ಸೆಲಿಂಗ್ ವರ್ಗಾವಣೆಗೆ ಸಂಬಂಧಿಸಿದಂತೆ ವೇಳಾಪಟ್ಟಿಗೆ ಅನುಮೋದನೆ ನೀಡುವಂತೆ ಮೇ 14ರಂದು ಅಬಕಾರಿ ಆಯುಕ್ತರ ಕಚೇರಿಯಿಂದ ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ಪ್ರಸ್ತಾವನೆ ಸಲ್ಲಿಕೆಯಾದರೂ ಸರ್ಕಾರ ಅನುಮತಿ ಕೊಟ್ಟಿಲ್ಲ. ಅನುಮತಿ ಸಿಗದ ಕಾರಣ ವರ್ಗಾವಣೆ ನಿರೀಕ್ಷೆಯಲ್ಲಿರುವ ಅಬಕಾರಿ ಅಧಿಕಾರಿಗಳು, ನೌಕರರು ಆತಂಕದಲ್ಲಿ ಕಾರ್ಯನಿರ್ವಹಿಸುವಂತಾಗಿದೆ.