canarabank 
ನ್ಯೂಸ್

Canara Bank recruitment: ಕೆನರಾ ಬ್ಯಾಂಕ್‌ನಲ್ಲಿ 3000 ಹುದ್ದೆ ಭರ್ತಿಗೆ ಅಧಿಸೂಚನೆ! ಪದವಿ, ಬಿ ಟೆಕ್ ಪದವೀಧರರು ಅರ್ಜಿ ಸಲ್ಲಿಸಬಹುದು..

ಬೆಂಗಳೂರು: ದೇಶದ ಪ್ರಮುಖ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಆಗಿರುವ ಕೆನರಾ ಬ್ಯಾಂಕ್ ಇತ್ತೀಚೆಗೆ ಹೆಚ್ಚಿನ ಸಂಖ್ಯೆಯ ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ. (Canara Bank recruitment)

ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಕೆನರಾ ಬ್ಯಾಂಕ್ ನ ಮಾನವ ಸಂಪನ್ಮೂಲ ಇಲಾಖೆ ದೊಡ್ಡ ಮಟ್ಟದಲ್ಲಿ ಅಪ್ರೆಂಟಿಸ್ ನೇಮಕಾತಿ ಜಾಹೀರಾತನ್ನು ಬಿಡುಗಡೆ ಮಾಡಿದೆ. ಒಂದು ವರ್ಷ ತರಬೇತಿಯ ಅವಧಿ ಇರುತ್ತದೆ.

ದೇಶಾದ್ಯಂತ ಪ್ರದೇಶವಾರು ಬ್ಯಾಂಕ್ ಶಾಖೆಗಳಲ್ಲಿ ಅಪ್ರೆಂಟ್​ಶಿಪ್ ತರಬೇತಿಯ ಭಾಗವಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಈ ಅಧಿಸೂಚನೆಯ ಮೂಲಕ 3000 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಅರ್ಹ ಅಭ್ಯರ್ಥಿಗಳು ಸೆ.21 ರಿಂದ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅ.4 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಧಿಸೂಚನೆಯ ಸಂಪೂರ್ಣ ವಿವರವನ್ನು ಸೆ.21 ರಂದು ಬಿಡುಗಡೆ ಮಾಡಲಾಗಿದೆ.

ಪದವಿ ಪಡೆದಿರಬೇಕು:

ಇನ್ನು ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಅಥವಾ ತತ್ಸಮಾನ ಶಿಕ್ಷಣ ಹೊಂದಿರಬೇಕು. ವಯಸ್ಸಿನ ಮಿತಿ ದಿನಾಂಕ 01.09.2024 ರಂತೆ 20 ರಿಂದ 28 ವರ್ಷಗಳ ನಡುವೆ ಇರಬೇಕು. ಎಸ್‌ಸಿ ಮತ್ತು ಎಸ್‌ಟಿಗೆ ಐದು ವರ್ಷ ವಿನಾಯಿತಿ ಇರುತ್ತದೆ. ಓಬಿಸಿಗೆ ಮೂರು ವರ್ಷ ಮತ್ತು ಅಂಗವಿಕಲರಿಗೆ ಹತ್ತು ವರ್ಷ ವಯೋಮಿತಿ ಸಡಿಲಿಕೆ ಇದೆ.