ಒಟ್ಟಾವಾ: ಕೆನಡಾದಲ್ಲಿ ನಿರುದ್ಯೋಗ ಪ್ರಮಾಣ ದಿನೇ ದಿನೇ ಹೆಚ್ಚುತ್ತಿದೆ. ಆದರೂ ಸಾಧಾರಣ ಕೆಲಸಗಳಿಗೆ ನೌಕಕರು ಸಿಗದ ಕಾರಣ ಅಲ್ಲಿನ ಸರ್ಕಾರ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗಾಗಿ ಕೆಲವೊಂದು ತಾತ್ಕಾಲಿಕ ನಿರ್ಧಾರಗಳನ್ನು ತೆಗೆದುಕೊಂಡಿದೆ. ಹೊಸ ನೀತಿಯ ಪ್ರಕಾರ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಇನ್ನು ಹೆಚ್ಚಿನ ಗಂಟೆಗಳ ಕಾಲ ಪಾರ್ಟ್-ಟೈಮ್ ಉದ್ಯೋಗ ಮಾಡಬಹುದಾಗಿದೆ.
ಕಾಲೇಜು ಆವರಣದ ಹೊರಗೆ ಕೆಲಸ ಮಾಡಲು ಅನುಮತಿ ಪಡೆದಿರುವ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಇನ್ನು ತರಗತಿ ಅವಧಿಯಲ್ಲೂ ಕೆಲಸ ಮಾಡಬಹುದಾಗಿದೆ. ಕೆನಡಾದಲ್ಲಿ ಹೆಚ್ಚುತ್ತಿರುವ ನೌಕರರ ಕೊರತೆಯನ್ನು ತಗ್ಗಿಸಲು ವಲಸೆ ಮಂತ್ರಿ ಶಾನ್ ಫ್ರೇಸರ್ ಈ ತಾತ್ಕಾಲಿಕ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ಈ ನಿರ್ಧಾರವು ನವೆಂಬರ್ 15 2022 ರಿಂದ ಡಿಸೆಂಬರ್ 31 2023ರ ವರೆಗೆ ಜಾರಿಯಲ್ಲಿ ಇರಲಿದೆ. ಇದರಿಂದಾಗಿ ವಿದ್ಯಾರ್ಥಿಗಳು ಈಗ ವಾರಕ್ಕೆ 20 ಗಂಟೆ ಕೆಲಸ ಮಾಡಬಹುದಾಗಿದೆ.