ನ್ಯೂಸ್

ಆಸ್ತಿಗಾಗಿ ಉದ್ಯಮಿ ಮಗನಿಂದಲೇ ತಂದೆಯ ಹತ್ಯೆ; ಆರೋಪಿ ಬಂಧನ| killed

ಮುಂಬೈ: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಗುತ್ತಿಗೆ ಕೊಲೆಗಾರನನ್ನು ನೇಮಿಸಿಕೊಂಡು ಸ್ವತಃ ಮಗನೇ ತನ್ನ 70 ವರ್ಷದ ಉದ್ಯಮಿ ತಂದೆಯನ್ನು ಇರಿದು ಕೊಂದ ಘಟನೆ ಮುಂಬೈನ ಕಂಡಿವಲಿ ಪ್ರದೇಶದಲ್ಲಿ ನಡೆದಿದೆ. ಈ ಆರೋಪದ ಹಿನ್ನೆಲೆ ಮೃತನ ಮಗನನ್ನು ಮುಂಬೈನಲ್ಲಿ ಪೊಲೀಸರು ಬಂಧಿಸಿದ್ದಾರೆ.

ತನಿಖೆಯ ಸಮಯದಲ್ಲಿ ಪೊಲೀಸರು ಬೆಳಗ್ಗೆ ಕಾರ್ಖಾನೆ ಆವರಣಕ್ಕೆ ಇಬ್ಬರು ವ್ಯಕ್ತಿಗಳು ಪ್ರವೇಶಿಸುತ್ತಿರುವುದನ್ನು ಗಮನಿಸಿದ್ದಾರೆ. ಸಿಸಿಟಿವಿ ದೃಶ್ಯಗಳಲ್ಲಿ ಅವರು ಸುಮಾರು ಒಂದು ಗಂಟೆ ಕಾಲ ಒಳಗೆ ಇದ್ದು, ಬಳಿಕ ಸೈಯದ್ ಮೇಲೆ ಚಾಕುಗಳಿಂದ ಹಲ್ಲೆ ನಡೆಸಿರುವುದು ತಿಳಿದು ಬಂದಿದೆ. ಹತ್ಯೆಯ ಬಳಿಕ ಕೊಲೆಗಾರರು ಆಯುಧವನ್ನು ಕಾರ್ಖಾನೆಯೊಳಗಿನ ನೀರಿನ ಟ್ಯಾಂಕ್​ಗೆ ಬಿಸಾಡಿದ್ದಾರೆ. ಇದನ್ನು ಗಮನಿಸಿದ ಪೊಲೀಸರು ಆಯುಧಗಳನ್ನು ವಶಪಡಿಸಿಕೊಂಡಿದ್ದಾರೆ.

ಮೃತ ವ್ಯಕ್ತಿಯನ್ನು 70 ವರ್ಷದ ಮೊಹಮ್ಮದ್ ಸೈಯದ್ ಎಂದು ಗುರುತಿಸಲಾಗಿದ್ದು, ಇವರು ಕಂಡಿವಲಿಯ ಚಾರ್ಕೋಪ್‌ನಲ್ಲಿರುವ ಸರ್ಕಾರಿ ಕೈಗಾರಿಕಾ ಎಸ್ಟೇಟ್‌ನಲ್ಲಿ ಲೋಹದ ಕಾರ್ಖಾನೆಯನ್ನು ಹೊಂದಿದ್ದರು ಎನ್ನಲಾಗಿದೆ. ಈ ಘಟನೆ ಭಾನುವಾರ ನಡೆದಿದ್ದು, ಭಾನುವಾರ ಬೆಳಗ್ಗೆ ಸೈಯದ್ ಎಂದಿನಂತೆ ತನ್ನ ಕಾರ್ಖಾನೆಗೆ ಹೋಗಿದ್ದಾರೆ. ಆದರೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ಆತನ ದೇಹ ಚಾಕು ಇರಿತದ ಗಾಯಗಳಿಂದ ಪತ್ತೆಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

(ಏಜೆನ್ಸೀಸ್)

ಈ ಬಗ್ಗೆ ತನಿಖೆ ಆರಂಭಿಸಿದ ವಿಶೇಷ ತಂಡ ದಾಳಿಕೋರರಲ್ಲಿ ಒಬ್ಬನಾದ ಮೊಹಮ್ಮದ್ ಇಸ್ಲಾಂನನ್ನು ನವಿ ಮುಂಬೈನಲ್ಲಿ ಪತ್ತೆಹಚ್ಚಿ ಬಂಧಿಸಿದೆ. ಪೊಲೀಸರು ಕೊಲೆ ಮಾಡುವಂತೆ ಹೇಳಿದವರಾರು ಎಂದು ಕೇಳಿದಾಗ, ಆತ ಮೃತನ ಹಿರಿಯ ಮಗ ಹಮೀದ್ ಸೈಯದ್ ಮತ್ತು ಆತನ ವ್ಯವಹಾರ ಪಾಲುದಾರ ಮತ್ತು ಆಪ್ತ ಸ್ನೇಹಿತ ಶಾನು ಚೌಧರಿ ಎಂಬುವವರು ಈತನನ್ನು ಕೊಲ್ಲುವಂತೆ ಹೇಳಿದ್ದರು ಎಂದು ಸತ್ಯ ಬಾಯಿಬಿಟ್ಟಿದ್ದಾನೆ. ಬಳಿಕ ಪೊಲೀಸರು ಹಮೀದ್ ಮತ್ತು ಚೌಧರಿ ಇಬ್ಬರನ್ನೂ ಬಂಧಿಸಿದ್ದು, ಮತ್ತೊಬ್ಬ ಕೊಲೆಗಾರನನ್ನು ಪತ್ತೆಹಚ್ಚಲು ಈಗ ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.