ನ್ಯೂಸ್

5 ಕೋಟಿ ರೂ.ಗಿಂತ ಹೆಚ್ಚಿನ ವಹಿವಾಟು ಮಾಡುತ್ತೀರಾ? ಆ.1ರಿಂದ ಇ-ಇನ್​ವಾಯ್ಸ್​ ಕಡ್ಡಾಯ

ನವದೆಹಲಿ: ವಾರ್ಷಿಕ 5ಕೋಟಿ ರೂಪಾಯಿಗಿಂತ ಹೆಚ್ಚಿನ ವ್ಯವಹಾರ ನಡೆಸುವ ಉದ್ದಿಮೆಗಳಿಗೆ B2B ವಹಿವಾಟಿಗೆ ಇ-ಇನ್​ವಾಯ್ಸ್​ ಸೃಷ್ಟಿಸುವುದು ಆಗಸ್ಟ್​​​ 1ರಿಂದ ಕಡ್ಡಾಯಗೊಳಿಸಲಾಗಿದೆ.

ಹಾಲಿ ವಾರ್ಷಿಕ 10ಕೋಟಿಗಿಂತ ಹೆಚ್ಚಿನ ವ್ಯವಹಾರ ನಡೆಸುವ ಉದ್ದಿಮೆಗಳಿಗೆ B2B ವಹಿವಾಟಿಗೆ ಇ-ಇನ್​ವಾಯ್ಸ್​ ಸೃಷ್ಟಿಸುವುದನ್ನು ಕೇಂಡ್ರ ಹಣಕಾಸು ಸಚಿವಾಲಯ ಕಡ್ಡಾಯಗೊಳಿಸಿದೆ.

ಮಿತಿ ತಗ್ಗಿಸಿದ ಸರ್ಕಾರ

ಈ ಕುರಿತು ಆದೇಶ ಹೊರಡಿಸಿರುವ ಕೇಂದ್ರ ಹಣಕಾಸು ಸಚಿವಾಲಯವು ಇ-ಇನ್​ವಾಯಸ್​ ಮಿತಿಯನ್ನು 10 ಕೋಟಿಯಿಂದ 5 ಕೋಟಿ ರೂಪಾಯಿಗೆ ಕಡಿತಗೊಳಿಸಲಾಗಿದೆ.

ಈ ಮೊದಲು ವಾರ್ಷಿಕ 500 ಕೋಟಿ ರೂಪಾಯಿಗಿಂತ ಅಧಿಕ ಮತ್ತದ ವಹಿವಾಟುಗಳಿಗೆ ಇ-ಇನ್​ವಾಯ್ಸ್​ ಕಡ್ಡಾಯ ಮಾಡಲಾಗಿತ್ತು. ಮೂರು ವರ್ಷಗಳಲ್ಲಿ 5 ಕೋಟಿ ರೂಪಾಯಿಗೆ ಇಳಿಸಲಾಗಿದೆ ಎಂದು ತನ್ ಪ್ರಕಟಣೆಯಲ್ಲಿ ತಿಳಿಸಿದೆ.

ಹಂತ ಹಂತವಾಗಿ ಜಾರಿ

ಇ-ಇನ್​ವಾಯ್ಸ್​ ಪ್ರಕ್ರಿಯೆಯನ್ನು ಹಂತಹಂತವಾಗಿ ಜಾರಿ ಮಾಡುತ್ತಿರುವುದರಿಂದ ತೊಡಕುಗಳು ಕಡಿಮೆ ಆಗಲಿವೆ. ನಿಯಮ ಅನುಸರಣೆಯಲ್ಲಿ ಸುಧಾರಣೆ ಕಂಡು ಬರಲಿದ್ದು ಆದಾಯ ಹೆಚ್ಚಾಗಲಿದೆ ಎಂದು ಹೇಳಲಾಗಿದೆ.