ಕಲಬುರಗಿ: ರಾಜ್ಯದಾದ್ಯಂತ ನಾಳೆಯಿಂದಲೇ ಎಲ್ಲ ಕಡೆಗೂ ಬಸ್ಗಳು ಸಂಚರಿಸಲಿವೆ. ಆದರೆ, ರೆಡ್ಜೋನ್ಗಳ ವ್ಯಾಪ್ತಿಯಲ್ಲಿ ಬಸ್ಗಳು ಸಂಚಾರ ನಡೆಸುವುದಿಲ್ಲ ಎಂದು ಉಪಮುಖ್ಯಮಂತ್ರಿಯೂ ಆಗಿರುವ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.
ಬಸ್ ದರ ಹೆಚ್ಚಳದ ಪ್ರಸ್ತಾವನೆ ಇಲ್ಲ ಸದ್ಯ ಬಸ್ ದರ ಹೆಚ್ಚಳ ಮಾಡುವ ಯಾವುದೆ ಪ್ರಸ್ತಾವನೆ ನಮ್ಮ ಮುಂದೆ ಇಲ್ಲ. ನಾಲ್ಕು ತಿಂಗಳ ಹಿಂದೆಯೆ 12 % ಹೆಚ್ಚಳ ಮಾಡಲಾಗಿದೆ. ಸಾರ್ವಜನಿಕರು ತೊಂದರೆಯಲ್ಲಿರುವಾಗ ನಾವು ದರ ಹೆಚ್ಚಳ ಮಾಡಿ ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡುವುದಿಲ್ಲ. ಸಾರಿಗೆ ಇಲಾಖೆಗೆ ಪ್ರತಿ ತಿಂಗಳು 326 ಕೋಟಿ ಕೊಡಲಾಗುತ್ತಿದೆ. ಸಾರಿಗೆ ಇಲಾಖೆಯ ಸಿಬ್ಬಂದಿ ಬಲವಂತವಾಗಿ ರಜೆ ಹಾಕುವಂತೆ ಅಧಿಕಾರಿಗಳು ಸೂಚಿಸಿದರೆ ಅಂಥವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಸಚಿವರು ಎಚ್ಚರಿಸಿದರು.
ಇವತ್ತು ಕೇಂದ್ರದಿಂದ ಮತ್ತೊಂದು ಮಾರ್ಗಸೂಚಿ ಬರಬಹುದು. ಆ ಮಾರ್ಗಸೂಚಿ ಅನ್ವಯ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ಸಾರಿಗೆಯ ನಾಲ್ಕು ನಿಗಮಗಳ ಸಾರಿಗೆಯಲ್ಲಿ 1 ಕೋಟಿ ಜನ ಸಂಚಾರ ಮಾಡ್ತಾ ಇದ್ದರು. ಆದ್ರೆ ಈಗ 14 ಲಕ್ಷ ಜನಮಾತ್ರ ಸಂಚಾರ ಮಾಡ್ತಾ ಇದ್ದಾರೆ. ಜನ ಭಯದಿಂದ ಹೊರಗಡೆ ಬರದೆ ಮನೆಯಲ್ಲೆ ಇದ್ದಾರೆ. ಪ್ರಯಾಣಿಕರಿಗೆ ಆರೋಗ್ಯ ತಪಾಸಣೆ ಸ್ಯಾನಿಟೈಸರ್ ಬಳಕೆ, ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಎಸಿ ನಾನ್, ಎಸಿ ಸೇರಿ ಎಲ್ಲ ಬಸ್ ಸಂಚಾರ ಶುರುವಾಗಲಿದೆ. ಬುಕ್ಕಿಂಗ್ ಸ್ಟಾರ್ಟ್ ಮಾಡುವಂತೆ ಸೂಚನೆ ನೀಡಲಾಗಿದೆ. ಇಂದಿನಿಂದಲೇ ಎಸಿ ನಾನ್ ಎಸಿ ಬಸ್ ಗಳನ್ನು ಸ್ಟಾರ್ಟ್ ಮಾಡುವಂತೆ ಸೂಚನೆ ನೀಡಿದ್ದು, ಎಸಿ ಬಸ್ ನಲ್ಲಿ 25 ಜನ ಮಾತ್ರ ಪ್ರಯಾಣ ಮಾಡಬೇಕು ಎಂಬ ನಿಯಮ ಪಾಲಿಸುವುದಕ್ಕೂ ಹೇಳಲಾಗಿದೆ.
ಗೋವಾ ಆಂಧ್ರ , ತಮಿಳುನಾಡು ಮತ್ತು ಕೇರಳ ಕ್ಕೆ ಬಸ್ ಸಂಚಾರಕ್ಕೆ ಅನುಮತಿ ಕೇಳಿ ಪತ್ರ ಬರೆಯಲಾಗಿದೆ. ಹೊರ ರಾಜ್ಯದಿಂದ ಒಪ್ಪಿಗೆ ಬಂದಿಲ್ಲ ಬಂದ ನಂತರ ಹೊರ ರಾಜ್ಯಕ್ಕೆ ಕಳುಹಿಸಲಾಗುತ್ತೆ. ಸದ್ಯ ನಷ್ಟ ಅನುಭವಿಸುತ್ತಿದ್ದರೂ ಸೇವೆಯ ದೃಷ್ಟಿಯಿಂದ ಬಸ್ ಸಂಚಾರ ಆರಂಭ ಮಾಡಲಾಗಿದೆ. ಸಾರಿಗೆ ಇಲಾಖೆ ಸಿಬ್ಬಂದಿಗಳಿಗೆ ಕರೊನಾ ದಿಂದ ಜೀವ ಹಾನಿಯಾದ್ರೆ 30 ಲಕ್ಷ ರೂಪಾಯಿ ಪರಿಹಾರ ಕೊಡ್ತೇವೆ.