ಮಂಗಳೂರು: ಉಪ್ಪಿನಂಗಡಿ ಸಮೀಪದ ಪದುಮಲೆ ಎಂಬಲ್ಲಿ ಕುದುರೆಯೊಂದಕ್ಕೆ ಬಸ್ ಡಿಕ್ಕಿ ಹೊಡೆದಿದೆ. ಬಸ್ ಡಿಕ್ಕಿಯಾದ ಪರಿಣಾಮ ಕುದುರೆ ಮೇಲಿದ್ದ ಸವಾರ ರಭಸವಾಗಿ ರಸ್ತೆಗೆ ಎಸೆಯಲ್ಪಟ್ಟಿದ್ದಾನೆ. ಅಪಘಾತದ ತೀವ್ರತೆಗೆ ಕುದುರೆ ಸವಾರ ಗಂಭೀರ ಗಾಯಗೊಂಡಿದ್ದಾನೆ. ಇಂದು (ಡಿ.25) ಬೆಳಗ್ಗೆ ಈ ಘಟನೆ ಸಂಭವಿಸಿದೆ.
ಸಚಿನ್ ಪಲಪ್ಪಾರ್ ಎಂಬಾತ ರಸ್ತೆ ಮಧ್ಯೆ ಕುದುರೆ ಸವಾರಿ ನಡೆಸುತ್ತಿದ್ದ. ಈ ವೇಳೆ ಬಂದ ಬಸ್ ಕುದುರೆಗೆ ಡಿಕ್ಕಿಯಾಗಿದೆ. ಸದ್ಯ ಗಾಯಗೊಂಡಿರುವ ಸಚಿನ್ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದಲ್ಲಿ ಕುದುರೆಗೂ ಗಾಯವಾಗಿದೆ ಎಂದು ವರದಿಯಾಗಿದೆ.
ಸಚಿನ್ ಪೆಲಪ್ಪಾರ್ ಎಂಬಾತ ಸಮಯ ಸಿಕ್ಕಾಗೆಲ್ಲಾ ಕುದುರೆ ಸಾವಾರಿ ಮಾಡುತ್ತಿದ್ದ. ಹೀಗಾಗಿ ಎಂದಿನಂತೆ ಇಂದು ಕೂಡಾ ಕುದರೆಯೊಂದಿಗೆ ಸವಾರಿ ಮಾಡಿದ್ದಾನೆ. ಈ ವೇಳೆ ಅಪಘಾತ ನಡೆದಿದೆ ಎನ್ನಲಾಗಿದೆ