uttarakhand| ಇಂದು (26) ರುದ್ರಪ್ರಯಾಗ ಜಿಲ್ಲೆಯ ಬದರಿನಾಥ್ ಹೆದ್ದಾರಿಯಲ್ಲಿ ಘೋಲ್ತಿರ್ ಬಳಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಅಲಕಾನಂದಾ ನದಿಗೆ ಉರುಳಿ ಬಿದ್ದಿದೆ. ಪರಿಣಾಮ ಕನಿಷ್ಠ ಮೂವರು ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
ಇದನ್ನೂ ಓದಿ: ಭಾರತದ ನಿಲುವು ದುರ್ಬಲಗೊಳಿಸುವ ಪ್ರಯತ್ನ; SCO ಸಭೆಯಲ್ಲಿ ಜಂಟಿ ಹೇಳಿಕೆಗೆ ಸಹಿ ಹಾಕಲು ರಾಜನಾಥ್ ಸಿಂಗ್ ನಿರಾಕರಣೆ;SCO Meet
18 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಪರ್ವತ ಪ್ರದೇಶದಲ್ಲಿ ರಸ್ತೆಯಿಂದ ಹೊರಟು ವೇಗವಾಗಿ ಹರಿಯುವ ನದಿಗೆ ಬಿದ್ದಿದೆ. ಬಲವಾದ ಪ್ರವಾಹ ಮತ್ತು ಕಡಿದಾದ ಭೂಪ್ರದೇಶದ ಮಧ್ಯೆ ರಕ್ಷಣಾ ಪ್ರಯತ್ನ ಮುಂದುವರೆದಿದೆ.
ಇನ್ನೂ ಈ ಬಗ್ಗೆ ಉತ್ತರಾಖಂಡದ ವಿಪತ್ತು ನಿರ್ವಹಣಾ ಕಾರ್ಯದರ್ಶಿ ವಿನೋದ್ ಕುಮಾರ್ ಸುಮನ್ ಮಾತನಾಡಿದ್ದು, ಸಾವಿನ ಸಂಖ್ಯೆಯನ್ನು ದೃಢಪಡಿಸಿ, ಪ್ರಯಾಣಿಕರ ಮೂಲದ ಬಗ್ಗೆ ವಿವರಗಳನ್ನು ಹಂಚಿಕೊಂಡರು. ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದಾರೆ, ಈ ಬಸ್ ರಾಜಸ್ಥಾನದ ಏಳು ಪ್ರಯಾಣಿಕರು, ಮಧ್ಯಪ್ರದೇಶದ ಮೂವರು, ಗುಜರಾತ್‌ನ ಏಳು ಮಂದಿ ಮತ್ತು ಮಹಾರಾಷ್ಟ್ರದ ಇಬ್ಬರು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು ಮತ್ತು ಚಾಲಕ ಹರಿದ್ವಾರದವರಾಗಿದ್ದರು ಎಂದು ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: "ಎಲ್ಲರಿಗೂ ನಮಸ್ಕಾರ, ಪ್ರತಿ ಕ್ಷಣ..." ಬಾಹ್ಯಾಕಾಶದಿಂದ ಶುಭಾಂಶು ಶುಕ್ಲಾ ಮೊದಲ ಸಂದೇಶ | Shubhanshu Shukla
ರುದ್ರಪ್ರಯಾಗ ಬಸ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಮೂವರು ಪ್ರಯಾಣಿಕರನ್ನು ಏರ್ ಆಂಬ್ಯುಲೆನ್ಸ್ ಮೂಲಕ ಏಮ್ಸ್ ರಿಷಿಕೇಶಕ್ಕೆ ಸಾಗಿಸಲಾಗಿದ್ದು, ಇತರ ಐದು ಪ್ರಯಾಣಿಕರು ರುದ್ರಪ್ರಯಾಗ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
(ಏಜೆನ್ಸೀಸ್)
ಘಟನೆ ತಿಳಿದ ಬೆನ್ನಲ್ಲೇ ಉತ್ತರಾಖಂಡ್ ಸಿಎಂ ಪುಷ್ಕರ್ ಸಿಂಗ್ ಧಾಮಿ ಅಪಘಾತದ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ. ರುದ್ರಪ್ರಯಾಗ ಜಿಲ್ಲೆಯಲ್ಲಿ ಬಸ್ ನದಿಗೆ ಬಿದ್ದ ಸುದ್ದಿ ತೀವ್ರ ದುಃಖಕರವಾಗಿದೆ. SDRF ಮತ್ತು ಇತರ ರಕ್ಷಣಾ ತಂಡಗಳು ಯುದ್ಧೋಪಾದಿಯಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸುತ್ತಿವೆ. ಈ ವಿಷಯದ ಬಗ್ಗೆ ನಾನು ಸ್ಥಳೀಯ ಆಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಎಲ್ಲರ ಸುರಕ್ಷತೆಗಾಗಿ ನಾನು ದೇವರನ್ನು ಪ್ರಾರ್ಥಿಸುತ್ತೇನೆ ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.