ನ್ಯೂಸ್

VIDEO| ಚಲಿಸುವ ಬಸ್​ನಲ್ಲಿಯೇ ಮಹಿಳೆ ಜೊತೆ ಕಂಡಕ್ಟರ್​ ರೊಮ್ಯಾನ್ಸ್​

ಲಖನೌ: ಚಲಿಸುವ ಬಸ್​ನಲ್ಲಿಯೇ ನಿರ್ವಾಹಕನೋರ್ವ ಯುವತಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ವೇಳೆ ಪ್ರಯಾಣಿಕರ ಕೈಗೆ ಸಿಕ್ಕಿ ಬಿದ್ದಿರುವ ಘಟನೆ ಉತ್ತರಪ್ರದೇಶದ ಹತ್ರಾಸ್​ನಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.

ಘಟನೆಯೂ ಹತ್ರಾಸ್​ ಹಾಗೂ ಲಖನೌ ನಡುವೆ ಸಂಚರಿಸುವ ಬಸ್​ನಲ್ಲಿ ನಡೆದಿದ್ದು, ಚಾಲಕ ಹಾಗೂ ನಿರ್ವಾಹಕನನ್ನು ಸೇವೆಯಿಂದ ಅಮಾನತು ಮಾಡಿ ಉತ್ತರಪ್ರದೇಶದ ಸಾರಿಗೆ ಸಂಸ್ಥೆ ಆದೇಶ ಹೊರಡಿಸಿದೆ.

ವೈರಲ್​ ಆಗಿರುವ ವಿಡಿಯೋದಲ್ಲಿ ಕಂಡಕ್ಟರ್​ ಚಲಿಸುವ ಬಸ್​ನಲ್ಲಿಯೇ ಮಹಿಳಾ ಪ್ರಯಾಣಿಕರೊಬ್ಬರ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವುದು ಕಂಡು ಬರುತ್ತದೆ. ಸುಮಾರು ಘಂಟೆಗಳಿಂದ ನಿರ್ವಾಹಕನ ವರ್ತನೆಯನ್ನು ಗಮನಿಸಿದ ಪ್ರಯಾಣಿಕರು ಆತನ ಬಳಿ ಹೋಗಿ ಪರಿಶೀಲಿಸಿದಾಗ ಆತ ಯುವತಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವುದು ಕಂಡು ಬಂದಿದೆ.

ವಿಡಿಯೋ ವೈರಲ್​

ಈ ಬಗ್ಗೆ ಪ್ರಶ್ನಿಸಿದಾಗ ಆತ ಪ್ರಯಾಣಿಕರ ಮೊಬೈಲ್​ ಪೋನ್​ ಕಸಿದುಕೊಳ್ಳಲು ಮುಂದಾಗಿದ್ದು, ಇದು ಕೆಲಕಾಲ ವಾಗ್ವಾದಕ್ಕೆ ಕಾರಣವಾಗಿದೆ. ಬಳಿಕ ಪ್ರಯಾಣಿಕರೊಬ್ಬರು ಆತ ಒಂದು ಘಂಟೆಗೂ ಹೆಚ್ಚಿನ ಕಾಲ ಆತ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವುದಾಗಿ ದೂರುತ್ತಿರುವುದು ಕಂಡು ಬರುತ್ತದೆ.

ಮೊದಲಿಗೆ ಪ್ರಯಾಣಿಕರು ಈ ಬಗ್ಗೆ ದೂರು ಕೊಡಲು ಮುಂದಾಗಿದ್ದರು ಬಳಿಕ ನಿರ್ವಾಹಕನಿಗೆ ಬುದ್ದಿವಾದ ಹೇಳಿ ಹೊರಟು ಹೋಗಿದ್ದರು. ಘಟನೆಯ ವಿಡಿಯೋ ವೈರಲ್​ ಆದ ಬೆನ್ನಲ್ಲೇ ಉತ್ತರಪ್ರದೇಶ ಸಾರಿಗೆ ಇಲಾಖೆ ನಿರ್ವಾಹಕ ಹಾಗೂ ಚಾಲಕನ ವಿರುದ್ಧ ಕ್ರಮ ಜರುಗಿಸಿ ಆದೇಶ ಹೊರಡಿಸಿದೆ.