

ಲಖನೌ: ಕಳೆದ ಕೆಲ ದಿನಗಳಿಂದ ಉತ್ತರ ಭಾರತದ ಹಲವು ಭಾಗಗಳಲ್ಲಿ ವರುಣನ ಆರ್ಭಟ ಹೆಚ್ಚುತ್ತಿದ್ದು, ಜನಜೋಈವನ ಸಂಪೂರ್ಣವಾಗಿ ಅಸ್ಯವ್ಯಸ್ತಗೊಂಡಿದೆ. ಇದೀಗ ಪ್ರವಾಹ ನೀರಿನಲ್ಲಿ ಬಸ್ಸೊಂದು ಸಿಲುಕಿ 25ಕ್ಕೂ ಹೆಚ್ಚು ಪ್ರಯಾಣಿಕರು ಅಪಾಯದ ಸ್ಥಿತಿ ತಲುಪಿರುವ ಘಟನೆ ಉತ್ತರಪ್ರದೇಶದ ಬಿಜ್ನೋರ್ ಎಂಬ ಪ್ರದೇಶದಲ್ಲಿ ನಡೆದಿದೆ.
ಕೊಟವಾಲಿ ಕಾಲೋಚಿತ ನದಿಯ ನೀರಿನ ಹರಿವು ಹೆಚ್ಚಳವಾದ ಪರಿಣಾಮ ಹರ್ದಿವಾರ್-ಬಿಜ್ನೋರ್ ನಡುವೆ ಸಂಚರಿಸುವ ಬಸ್ ಮಂಡವಾಲಿ ಎಂಬ ಪ್ರದೇಶದಲ್ಲಿ ಪ್ರವಾಹದಲ್ಲಿ ಸಿಲುಕೊಂಡಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರು ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಪರದಾಡುತ್ತಿರುವುದು ಕಂಡು ಬರುತ್ತದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಪ್ರವಾಹದಲ್ಲಿ ಬಸ್ ಸಿಲುಕಿದ್ದು, ಕೆಲ ಪ್ರಯಾಣಿಕರು ತಮ್ಮ ಜೀವವನ್ನು ಉಳಿಸಿಕೊಳ್ಳಲು ಕಿಟಕಿ ಮೂಲಕ ಟಾಪ್ ಮೇಲೆ ಹತ್ತಿದ್ದಾರೆ. ಇನ್ನು ಕೆಲವರು ಅಸಹಾಯಕ ಸ್ಥಿತಿಯಲ್ಲಿ ಬಸ್ ಒಳಗೆ ಕುಳಿತಿರುವುದು ಕಂಡು ಬರುತ್ತದೆ.
ಇತ್ತ ಸೇತುವೆ ಮೇಲೆ ಜನರು ಹಾಗೂ ರಕ್ಷಣಾ ಇಲಾಖೆ ಸಿಬ್ಬಂದಿ ಕ್ರೇನ್ ಬಳಸಿ ಬಸ್ ಪಲ್ಟಿಯಾಗದೆ ಇರದಂತೆ ತಡೆದಿದ್ದಾರೆ. ಇತ್ತ ಪ್ರಯಾಣಿಕರಯು ತಮನ್ನು ರಕ್ಷಿಸುವಂತೆ ಕೂಗಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.