More

    ಜನರು ಸಾವಯವ ವಸ್ತುಗಳನ್ನು ಬಳಸುತ್ತಿರುವುದು ಒಳ್ಳೆಯ ಬೆಳವಣಿಗೆ: ಶಾಸಕ ಗೋಪಾಲಯ್ಯ

    ಬೆಂಗಳೂರು: ಇಂದಿನ ಒತ್ತಡದ ಬದುಕಿನಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಸವಾಲಿನ ಕೆಲಸವಾಗಿದೆ, ಯಾಕಂದ್ರೆ ಈಗ ನಾವು ಸೇವಿಸುವ ಆಹಾರ ಸೇರಿದಂತೆ ಎಲ್ಲವೂ ಕೆಮಿಕಲ್ ಮಿಶ್ರಿತವಾಗಿ ಉತ್ತಮ ಆರೋಗ್ಯ ಹೊಂದುವುದು ಕಷ್ಟವಾಗಿದೆ ಎಂದು ಶಾಸಕ ಕೆ. ಗೋಪಾಲಯ್ಯ ಹೇಳಿದ್ದಾರೆ.

    ಮಹಾಲಕ್ಷ್ಮಿ ಲೇಔಟ್​ನಲ್ಲಿ ನೂತನವಾಗಿ ಪ್ರಾರಂಭಿಸಿರುವ ಜ್ಯಾಗರಿ ಅಡ್ಡ ಎಂಬ ಆರ್ಗ್ಯಾನಿಕ್ ಬೆಲ್ಲದ ಚಹಾ ಹೋಟೆಲ್ ಉದ್ಘಾಟಿಸಿ ಮಾತನಾಡಿದ ಶಾಸಕ ಗೋಪಾಲಯ್ಯ ಈಗೀಗ ನಗರದಲ್ಲಿ ಜನರು ಸಾವಯವ ವಸ್ತುಗಳನ್ನು ಬಳಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದಿದ್ದಾರೆ.

    ಇಂದಿನ ಒತ್ತಡದ ಬದುಕಿನಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಸವಾಲಿನ ಕೆಲಸವಾಗಿದೆ, ಯಾಕಂದ್ರೆ ಈಗ ನಾವು ಸೇವಿಸುವ ಆಹಾರ ಸೇರಿದಂತೆ ಎಲ್ಲವೂ ಕೆಮಿಕಲ್ ಮಿಶ್ರಿತವಾಗಿ ಉತ್ತಮ ಆರೋಗ್ಯ ಹೊಂದುವುದು ಕಷ್ಟವಾಗಿದೆ.

    Jaggery Adda

    ಇದನ್ನೂ ಓದಿ: ಅತ್ಯಾಚಾರ ಕಾನೂನನ್ನು ಪುರುಷರ ವಿರುದ್ಧದ ಅಸ್ತ್ರವನ್ನಾಗಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ: ಉತ್ತರಾಖಂಡ ಹೈಕೋರ್ಟ್​

    ಹಿಂದಿನ ಕಾಲದ ಆಹಾರ ಸೇವನೆ ಬಹಳ ನೈಸರ್ಗಿಕವಾಗಿದ್ದರಿಂದ ಆರೋಗ್ಯ ಚೆನ್ನಾಗಿರುತ್ತಿತ್ತು. ಇವತ್ತು ಇವರು ಆರಂಭ ಮಾಡಿರುವ ಆರ್ಗ್ಯಾನಿಕ್ ಬೆಲ್ಲದ ಚಹಾ ಹೋಟೆಲ್ ತುಂಬಾ ಖುಷಿ ವಿಚಾರ, ಈಗೀಗ ನಗರದಲ್ಲಿ ಜನರು ಸಾವಯವ ವಸ್ತುಗಳನ್ನು ಬಳಸುತ್ತಿರುವುದು ಒಳ್ಳೆಯ ಬೆಳವಣಿಗೆ. ಇವರ ಈ ಕಾರ್ಯ ಶ್ಲಾಘನೀಯ ಒಳ್ಳೆಯದಾಗಲಿ ಜನರ ಆರೋಗ್ಯ ದೃಷ್ಟಿಯಿಂದ ಒಳ್ಳೆಯ ಕಾರ್ಯಕ್ರಮವಾಗಿದೆ ಎಂದು ಶುಭಹಾರೈಸಿದ್ದಾರೆ.

    ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾದ ಶಿವಾನಂದ್ ತಗಡೂರು, ಪತ್ರಕರ್ತ ಆನಂದ್ ಮಾಳಗಿ, ಚಂದ್ರಶೇಖರ್ ಯಲಬುರ್ತಿ, ರಾಜ್ಯ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಶಂಭುಲಿಂಗ ಹಾಗೂ ಕುಟುಂಬ ಸದಸ್ಯರು ಸ್ನೇಹಿತರು ಭಾಗವಹಿಸಿ ನೂತನ ಹೋಟೆಲ್ ಆರಂಭಕ್ಕೆ ಶುಭಕೋರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts