ನ್ಯೂಸ್

ಬಿಜೆಪಿ ವಿರುದ್ಧ ವೀರಶೈವ-ಲಿಂಗಾಯತರನ್ನು ಎತ್ತಿ ಕಟ್ಟುವ ಯತ್ನ ನಡೆಯುತ್ತಿದೆ: ಬಿಎಸ್​ವೈ

ಬೆಂಗಳೂರು: ಕಾಂಗ್ರೆಸ್ ಅವರು ಅಧಿಕಾರದಲ್ಲಿದ್ದಾಗ ವೀರಶೈವ-ಲಿಂಗಾಯತರು ನೆನಪಾಗಲಿಲ್ಲ. ಈಗ ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ. ಬಿಜೆಪಿ ವಿರುದ್ಧ ವೀರಶೈವ- ಲಿಂಗಾಯತರನ್ನು ಎತ್ತಿಕಟ್ಟಲು ಪ್ರಯತ್ನಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಿಡಿಕಾರಿದ್ದಾರೆ.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ವೀರಶೈವ- ಲಿಂಗಾಯತ ಸಮುದಾಯವನ್ನು ಧರ್ಮದ ಹೆಸರಿನಲ್ಲಿ ವಿಭಜಿಸಲು ಪ್ರಯತ್ನಿಸಿದ್ಸನ್ನು ಸಮುದಾಯದ ಜನರು ಮರೆತಿಲ್ಲ. ಬಿಜೆಪಿ ಬೆನ್ನಿಗೆ ಗಟ್ಟಿಯಾಗಿ ನಿಂತಿದೆ. ಎಲ್ಲ ಜಾತಿ, ವರ್ಗಗಳ ಬೆಂಬಲವು ಪಕ್ಷಕ್ಕಿದ್ದು, 135 ಸ್ಥಾನಗಳನ್ನು ಗೆದ್ದು ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತವೆಂಬ ವಿಶ್ವಾಸ ಪುನರುಚ್ಚರಿಸಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಾನು ಸೇರಿದಂತೆ ರಾಜ್ಯ ನಾಯಕರು ರಾಜ್ಯಾದ್ಯಂತ ಪ್ರವಾಸ ಮಾಡಿದ್ದೇವೆ. ರಾಜ್ಯ ನಾಯಕರ ಕಡೆಗಣನೆಯಾಗಿಲ್ಲ. ಮೋದಿ, ಅಮಿತ್ ಷಾ, ಜೆ.ಪಿ.ನಡ್ಡಾ ರಾಜ್ಯದ ತುಂಬಾ ಓಡಾಡಿ ನಮಗೆ ಬಲ ಕೊಟ್ಟಿದಾರೆ ಎಂದು ಬಿ.ಎಸ್.ಯಡಿಯೂರಪ್ಪ ಸಮರ್ಥಿಸಿಕೊಂಡರು.