ನ್ಯೂಸ್

ಯಡಿಯೂರಪ್ಪ ರೋಡ್ ಶೋ ಬಳಿಕ ಸೇಬಿಗಾಗಿ ಮುಗಿಬಿದ್ದ ಜನ!

ತುಮಕೂರು : ವಿಧಾನಸಭೆ ಚುನಾವಣೆಯಲ್ಲಿ ಇನ್ನೇನು 9 ದಿನ ಬಾಕಿ ಇದೆ. ಈ ನಡುವೆ ಮತದಾರರ ಮನ ಗೆಲ್ಲಲು ಆಡಳಿತ ರೂಢ ಬಿಜೆಪಿ ರಾಷ್ಟ್ರೀಯ ನಾಯಕರ ಮೊರೆ ಹೋಗಿದೆ.  ಎಲ್ಲಾ ಕ್ಷೇತ್ರದ ಅಭ್ಯರ್ಥಿಗಳು ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ.  ಬಿ ಎಸ್​​ ಯಡಿಯೂರಪ್ಪ ರೋಡ್ ಶೋ ಬಳಿಕ ಸೇಬಿಗಾಗಿ ಮುಗಿ ಬಿದ್ದ ಘಟನೆ ತುಮಕೂರು ಗ್ರಾಮಾಂತರದ ಹೆಬ್ಬೂರಿನಲ್ಲಿ ನಡೆದಿದೆ.

ತುಮಕೂರು ಗ್ರಾಮಾಂತರದ ಹೆಬ್ಬೂರಿನಲ್ಲಿ ಬಿ ಎಸ್​​ ಯಡಿಯೂರಪ್ಪ ಅವರು ಮತ ಪ್ರಚಾರ ಕಾರ್ಯಕ್ರಮವನ್ನು ಮಾಡಿದ್ದಾರೆ. ಅದ್ಧೂರಿಯಾಗಿ ಅವರನ್ನು ಸ್ವಾಗತಿಸಿದ್ದು, ಈ ವೇಳೆ ಯಡಿಯೂರಪ್ಪಗೆ ಹಾಕಲು ಬೃಹತ್ ಸೇಬಿನ ಹಾರ ಮಾಡಿಸಲಾಗಿತ್ತು. ಅಭಿಮಾನಿಗಳು ಕ್ರೇನ್ ಬಳಸಿ ಸೇಬಿನ ಹಾರ ಹಾಕಿದ್ದು, ಅವರನ್ನು ಭರ್ಜರಿಯಾಗಿ ಸ್ವಾಗತಿಸಿದರು. ಯಡಿಯೂರಪ್ಪ ರೋಡ್ ಶೋ ಬಳಿಕ ಸೇಬಿಗಾಗಿ ಜನ ಮುಗಿ ಬಿದ್ದಿದ್ದಾರೆ.

ಯಡಿಯೂರಪ್ಪ ರೋಡ್ ಶೋ ತೆರಳಿದ ಬಳಿಕ ಹಾರದಲ್ಲಿದ್ದ ಸೇಬು ಕಿತ್ತುಕೊಳ್ಳಲು ನೂಕು ನುಗ್ಗಲು ಆಗಿದೆ. ಈ ವೇಳೆ ಪೊಲೀಸರು ಜನರನ್ನು ಚದುರಿಸಲು ಹರಸಾಹಸ ಪಟ್ಟಿದ್ದಾರೆ.