ಅಲಿಘಡ್: ಲಾಕ್ಡೌನ್ ಸಡಿಲಿಕೆ ಮಾಡಿದ್ದರೂ ಕೆಲವು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆದೇಶ ನೀಡಿವೆ.
ಉತ್ತರ ಪ್ರದೇಶದ ಅಲಿಘಡ್ನಲ್ಲಿ ಬಹುಜನ ಸಮಾಜ ಪಾರ್ಟಿ (ಬಿಎಸ್ಪಿ) ನಾಯಕ ಮೊಹಮ್ಮದ್ ಜಾಹಿದ್ ಈ ಲಾಕ್ಡೌನ್ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘನೆ ಮಾಡಿದ್ದಾರೆ.
ಮೊಹಮ್ಮದ್ ಜಾಹಿದ್ ತನ್ನ ಮಗನ ಮದುವೆ ಏರ್ಪಡಿಸಿದ್ದರು. ಆದರೆ ಈ ವಿವಾಹದಲ್ಲಿ ಲಾಕ್ಡೌನ್ ನಿಯಮಗಳೆಲ್ಲವನ್ನೂ ಮುರಿದಿದ್ದಾರೆ. ಭರ್ಜರಿಯಾಗಿ ವಿವಾಹ ಮಹೋತ್ಸವ ನಡೆಸಿದ್ದಾರೆ. ನರ್ತಕಿಯನ್ನು ಕರೆಸಿ ಅದ್ದೂರಿ ನೃತ್ಯ ಪ್ರದರ್ಶನವನ್ನೂ ಆಯೋಜಿಸಿದ್ದರು.
ಇದನ್ನೂ ಓದಿ: ಆನ್ಲೈನ್ನಲ್ಲಿ ದರ್ಶನ ನೀಡಲು ಪ್ರಾರಂಭಿಸಿದ ಮಲೆ ಮಹದೇಶ್ವರ ಸ್ವಾಮಿ; ಭಕ್ತರು ಸೇವೆಯನ್ನೂ ಸಲ್ಲಿಸಬಹುದು…
ಇನ್ನು ಪಾಲ್ಗೊಂಡ ಅತಿಥಿಗಳು ಯಾರೂ ಮಾಸ್ಕ್ ಧರಿಸಿ ಇರಲಿಲ್ಲ. ಸಾಮಾಜಿಕ ಅಂತರ ನಿಯಮವನ್ನಂತೂ ಸಂಪೂರ್ಣವಾಗಿ ಗಾಳಿಗೆ ತೂರಿದ್ದರು.
ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿತ್ತು. ಅದನ್ನು ನೋಡುತ್ತಿದ್ದಂತೆ ಪೊಲೀಸರು ಮೊಜಮ್ಮದ್ ಜಾಹಿದ್ ಸೇರಿ ಒಟ್ಟು 21 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.