More

    ಆನ್​ಲೈನ್​ನಲ್ಲಿ ದರ್ಶನ ನೀಡಲು ಪ್ರಾರಂಭಿಸಿದ ಮಲೆ ಮಹದೇಶ್ವರ ಸ್ವಾಮಿ; ಭಕ್ತರು ಸೇವೆಯನ್ನೂ ಸಲ್ಲಿಸಬಹುದು…

    ಚಾಮರಾಜನಗರ: ಜೂನ್ 1ರಿಂದ ರಾಜ್ಯದ ಎಲ್ಲ ದೇವಸ್ಥಾನಗಳನ್ನೂ ತೆರೆಯಲು ಅವಕಾಶ ನೀಡುವುದಾಗಿ ರಾಜ್ಯ ಸರ್ಕಾರ ಹೇಳಿದೆ. ಇದೇ ಬೆನ್ನಲ್ಲೇ ಚಾಮರಾಜನಗರ ತಾಲೂಕಿನ ಇತಿಹಾಸ ಪ್ರಸಿದ್ಧ ಮಲೆ ಮಹದೇಶ್ವರ ಸ್ವಾಮಿಯ ದರ್ಶನ ಇಂದಿನಿಂದ ಆನ್​ಲೈನ್ ಮೂಲಕವೇ ಪ್ರಾರಂಭವಾಗಿದೆ.

    ಲಾಕ್​ಡೌನ್​ ನಿಮಿತ್ತ ಇಷ್ಟು ದಿನ ಬಂದ್​ ಇದ್ದ ಮಲೆಮಹದೇಶ್ವರ ಬೆಟ್ಟದ ಸ್ವಾಮಿಯನ್ನು http://www.mmhillstemple.com ಮೂಲಕ ಭಕ್ತರು ಕಣ್ಣುತುಂಬಿಕೊಳ್ಳಬಹುದು. ಪ್ರತಿದಿನ ಅಭಿಷೇಕ ನಡೆಯುವ ಸಮಯವಾದ ಮುಂಜಾನೆ 4ರಿಂದ ಸಂಜೆ 5.30 ಹಾಗೂ ಸಂಜೆ 6ರಿಂದ-8ರವರೆಗೆ ಆನ್​ಲೈನ್​ ದರ್ಶನಕ್ಕೆ ಅವಕಾಶ ಇದ್ದು, http://www.mmhillstemple.com ಕ್ಲಿಕ್​ ಮಾಡಿದರೆ ದೇವರ ಅಭಿಷೇಕ ನೋಡಬಹುದಾಗಿದೆ.

    ಈ ಬಗ್ಗೆ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲ, ಭಕ್ತರು ಆನ್​ಲೈನ್​ ಮೂಲಕ ಮುಂಚಿತವಾಗಿ ಶುಲ್ಕ ಪಾವತಿಸಿ, ವಿವಿಧ ಸೇವೆಗಳನ್ನೂ ಮಾಡಬಹುದು.

    http://www.mmhillstemple.com ಈ ವೆಬ್​ಸೈಟ್​​ನಲ್ಲಿ ವಿವಿಧ ಸೇವಾಶುಲ್ಕಗಳ ವಿವರಗಳನ್ನೂ ನೀಡಲಾಗಿದೆ. ಅದಕ್ಕೆ ಸಂಬಂಧಪಟ್ಟಂತೆ ಅವರ ಹೆಸರಿನಲ್ಲಿ ಪೂಜೆ, ಕೈಂಕರ್ಯ ಸೇವೆಗಳನ್ನು ನೆರವೇರಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

    ದೇಗುಲ ತೆರೆಯಲು ಶಾಸಕರ ವಿರೋಧ

    ಈ ಮಧ್ಯೆ ಜೂ.1ರಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ಜನರು ಆಗಮಿಸುವುದನ್ನು ಹನೂರು ಶಾಸಕ ನರೇಂದ್ರ ಅವರು ವಿರೋಧಿಸಿದ್ದಾರೆ. ಮಲೆ ಮಹದೇಶ್ವರ ದೇವಸ್ಥಾನದ ಬಾಗಿಲು ತೆರೆಯಬಾರದು. ಇಲ್ಲಿಗೆ ತಮಿಳುನಾಡು, ಕೇರಳ, ಆಂಧ್ರ ಸೇರಿ ವಿವಿಧ ರಾಜ್ಯಗಳಿಂದ ಭಕ್ತರು ಬರುತ್ತಾರೆ. ಕರೊನಾ ಹರಡುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ. ಭಕ್ತರನ್ನು ನಿಯಂತ್ರಿಸಲು ಆಡಳಿತ ಮಂಡಳಿಗೆ ಕಷ್ಟವಾಗುತ್ತದೆ. ದರ್ಶನಕ್ಕೆ ಬಂದವರಿಗೆ ದಾಸೋಹ ನೀಡಲಾಗುವುದಿಲ್ಲ. ದಾಸೋಹ ನೀಡದೆ ಇದ್ದರೆ, ಮೊದಲಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯಕ್ಕೆ ಧಕ್ಕೆ ತಂದಂತೆ ಆಗುತ್ತದೆ. ಇಷ್ಟೆಲ್ಲ ಗೊಂದಲಗಳು ಇರುವುದರಿಂದ ಜೂ.1ರ ನಂತರವೂ ಆನ್​ಲೈನ್​ ಮೂಲಕವೇ ದರ್ಶನ, ಸೇವೆ ಮುಂದುವರಿಯಲಿ ಎಂದಿದ್ದಾರೆ. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts