ನ್ಯೂಸ್

ಬಿಜೆಪಿ ಕಚೇರಿಯಲ್ಲಿ ಸಿಎಂ ಯಡಿಯೂರಪ್ಪ ತನ್ನ ಮಗನನ್ನು 'ಅಣ್ಣ' ಎಂದಿದ್ದೇಕೆ?

arunakunigal

ಬೆಂಗಳೂರು: ಸಿಎಂ ಯಡಿಯೂರಪ್ಪ ತನ್ನ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು 'ವಿಜಯಣ್ಣನವರೇ..' ಎಂದು ಕರೆಯುವ ಮೂಲಕ ಪಕ್ಷದ ಮುಖಂಡರ ಹುಬ್ಬೇರಿಸಿದ ಘಟನೆ ನಗರದ ಬಿಜೆಪಿ ಕಚೇರಿಯಲ್ಲಿ ಇಂದು(ಮಂಗಳವಾರ) ಸಂಭವಿಸಿತು.

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಮಾಜಿ ಸಂಸದ ಕೆ.ವಿರುಪಾಕ್ಷಪ್ಪ ಕಾಂಗ್ರೆಸ್​ ತೊರೆದು ಬಿಜೆಪಿಗೆ ಸೇರ್ಪಡೆಯಾದರು. ಈ ವೇಳೆ ಮಾರು ಆರಂಭಿಸಿದ ಸಿಎಂ ಬಿಎಸ್​ವೈ, ತನ್ನ ಪುತ್ರ ವಿಜಯೇಂದ್ರರನ್ನ 'ವಿಜಯಣ್ಣ' ಎಂದು ಸಂಬೋಧಿಸಿದರು. ಆ ಮೂಲಕ ಎಂದು ತನ್ನ ಉತ್ತರಾಧಿಕಾರಿ ಇವರೇ ಎಂಬ ಮಾಹಿತಿಯನ್ನು ಸಿಎಂ ರವಾನಿಸಿದರೆ? ಎಂಬ ಚರ್ಚೆಗೀಡು ಮಾಡಿದ್ದಾರೆ. ಇದನ್ನೂ ಓದಿರಿ ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿದ ಮಾಜಿ ಸಂಸದ ವಿರೂಪಾಕ್ಷಪ್ಪ! ಮಸ್ಕಿ ಬೈ ಎಲೆಕ್ಷನ್​ ಭರ್ಜರಿ ಸಿದ್ಧತೆ

ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್, ಸಚಿವ ಈಶ್ವರಪ್ಪ ಅವರು‌ ಸೇರಿ ತುಂಬಿದ್ದ ಸಭೆಯಲ್ಲಿ ಪುತ್ರ ವಿಜಯೇಂದ್ರ ಬಗ್ಗೆ ವಿಜಯಣ್ಣ ಎಂದಿದ್ದು ಕಾರ್ಯಕರ್ತರು, ಪಕ್ಷದ ಮುಖಂಡರಿಗೂ ಅಚ್ಚರಿ ತಂದಿದೆ.

ಕೆ.ವಿರುಪಾಕ್ಷಪ್ಪ ಅವರು ಬಿಜೆಪಿಗೆ ಸೇರ್ಪಡೆಯಾದ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್, ಸಚಿವ ಈಶ್ವರಪ್ಪ, ವಿಜಯೇಂದ್ರ ಸೇರಿದಂರೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು. ಅವರ ಸಮ್ಮುಖದಲ್ಲೇ ಸಿಎಂ, 'ವಿಜಯಣ್ಣ' ಎಂದಿದ್ದು ಕಾರ್ಯಕರ್ತರು, ಪಕ್ಷದ ಮುಖಂಡರಿಗೂ ಅಚ್ಚರಿ ತಂದಿದೆ. ತನ್ನ ಮುಂದಿನ ಉತ್ತರಾಧಿಕಾರಿ ವಿಜಯೇಂದ್ರ ಎಂಬ ಮಾಹಿತಿಯನ್ನು ಕಾರ್ಯಕರ್ತರಿಗೆ‌ ಸಿಎಂ ರವಾನಿಸಿದ್ದಾರೆ ಎನ್ನಲಾಗುತ್ತಿದೆ