More

    ಭೂಮಿ- ಕಾವೇರಿ ತಂತ್ರಾಂಶ ಸರ್ವರ್​ ಡೌನ್​: ಜನರ ಪರದಾಟ, ಸರ್ಕಾರಕ್ಕೆ ಹಿಡಿಶಾಪ

    ಬೆಂಗಳೂರು: ಮೂರ್ನಾಲ್ಕು ದಿನಗಳಿಂದ ಕಂದಾಯ ಇಲಾಖೆಯ ‘ಭೂಮಿ’ ವೆಬ್​ಸೈಟ್ ಮತ್ತು ನೋಂದಣಿ ಮುದ್ರಾಂಕ ಇಲಾಖೆ ‘ಕಾವೇರಿ’ ತಂತ್ರಾಂಶ ಸರ್ವರ್ಡೌ​ನ್ ಆಗಿದೆ. ದಿನನಿತ್ಯದ ಕೆಲಸ ಕಾರ್ಯಗಳಿಗೆ ಅಡ್ಡಿ ಉಂಟಾಗಿ ಸಾರ್ವಜನಿಕರು ಪರದಾಡುತ್ತಿದ್ದಾರೆ.

    ರಾಜ್ಯ ವ್ಯಾಪಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ ತಂತ್ರಾಂಶ ಸ್ಥಗಿತವಾಗಿದೆ. ಉಪ ನೋಂದಣಿ ಕಚೇರಿಯಲ್ಲಿ ಯಾವುದೇ ನೋಂದಣಿ ನಡೆಯುತ್ತಿಲ್ಲ. ಕ್ರಯ, ದಾನ, ಹಕ್ಕುಪತ್ರ ಬಿಡುಗಡೆ, ಮದುವೆ ನೋಂದಣಿ ಇನ್ನಿತರ ಕೆಲಸಕ್ಕೆ ಬಂದಿದ್ದ ಜನರು ಸರ್ವರ್ ಕೈಕೊಟ್ಡ ಹಿನ್ನೆಲೆಯಲ್ಲಿ ಗಂಟೆಗಟ್ಟಲೇ ಕಾದು ವಾಪಸ್​ ಹೋಗುತ್ತಿದ್ದ ದೃಶ್ಯ ಸಮಾನ್ಯವಾಗಿದೆ. ಇಸಿ ಪಡೆಯಲು ದಿನಗಟ್ಟಲೇ ಕಾಯಬೇಕಾಗಿದೆ. ಇದನ್ನೂ ಓದಿರಿ 2+3+4 ನಿಗೂಢ ಫಾರ್ಮುಲಾ ಹೇಳಿ ತಲೆಗೆ ಹುಳುಬಿಟ್ಟ ಜಾರಕಿಹೊಳಿ- ಬೆಂಬಲಿಗರು ಬಿಡಿಸಿದರು ಈ ಒಗಟು!

    ಮೂರು ದಿನಗಳಿಂದ ರಾಜ್ಯ ವ್ಯಾಪಿ ಸಮಸ್ಯೆ ಆಗಿದ್ದರೂ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಕರಾರು ಪತ್ರ ಮಾಡಿಕೊಳ್ಳಲು ಮೊಬೈಲ್ ‌ನಂಬರ್, ಅದಕ್ಕೆ ಬರುವ ಒನ್ ಟೈಮ್ ಪಾಸ್ ವಡ್೯ ಕಡ್ಡಾಯ ಮಾಡಿದ್ದಾರೆ. ಈ ಒಟಿಪಿ ನಂಬರ್ ಬಾರದ ಹಿನ್ನೆಲೆಯಲ್ಲಿ ಯಾವುದೇ ನೋಂದಣಿ ನಡೆಯುತ್ತಿಲ್ಲ. ಸಾರ್ವಜನಿಕರು ನಿತ್ಯದ ಕೆಲಸ ಬಿಟ್ಟು ನೋಂದಣಿ ‌ಕಚೇರಿಯಲ್ಲಿ ಕಾದು ನಿಲ್ಲವಂತಾಗಿದೆ. ಈ ಬಗ್ಗೆ ಉಪ ನೋಂದಣಿ ಅಧಿಕಾರಿಗಳು ದೂರು ನೀಡಿದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ.

    ಸರ್ವರ್ ಡೌನ್ ಗೆ ಕಾರಣ: ನೋಂದಣಿ ಮತ್ತು ಮುದ್ರಾಂಕ ಇಲಾಖೆ ಅಧಿಕಾರಿಗಳು ತಂತ್ರಾಂಶ ಅಪ್​ಡೇಟ್ ಮಾಡುವ ಸಲುವಾಗಿ ನಾನ ಅಪ್​ಡೇಟ್ ಮಾಡುತ್ತಿದ್ದಾರೆ. ಆದರೆ, ಕಚೇರಿಗೆ ಹೊಸ ಕಂಪ್ಯೂಟರ್ ಉಪಕರಣ ಕೊಡುತ್ತಿಲ್ಲ. ಕಂಪ್ಯೂಟರ್ ಅಪರೇಟರ್​ಗೆ ತರಬೇತಿ ನೀಡುತ್ತಿಲ್ಲ.

    ರೈತ ಸ್ನೇಹಿಯಾಗದ ಭೂಮಿ: ಪಹಣಿ, ಮ್ಯುಟೇಷನ್ ಇನ್ನಿತರ ಜಮೀನಿನ ದಾಖಲೆ ಒದಗಿಸುವ ಮತ್ತು ಅರ್ಜಿ ಸ್ವೀಕರಿಸುವ ಕಂದಾಯ ಇಲಾಖೆಯ ಭೂಮಿ ವೆಬ್​ಸೈಟ್ ಸಹ ಕೈಕೊಟ್ಟಿದೆ.

    ಕಂದಾಯ ಇಲಾಖೆ ಇತ್ತೀಚಿಗೆ ಕೈಗೊಂಡಿರುವ ಬಹು ನಿರೀಕ್ಷಿತ ಯೋಜನೆ ಜಿಲ್ಲಾ ಕಚೇರಿ ಮನೆ ಬಾಗಿಲಿಗೆ ಜಾರಿಯಲ್ಲಿ ಪೋಡಿ, ಪಹಣಿ ತಿದ್ದುಪಡಿ, ರೈತರಿಗೆ ಸಹಾಯ ಧನ ಇನ್ನಿತ್ತರ 10 ಸೌಲಭ್ಯ ಗಳನ್ನು ಮನೆ ಬಾಗಿಲಿಗೆ ತಲುಪಿಸುವ ಯೋಜನೆ. ಆದರೆ, ಅರ್ಜಿ ಸಲ್ಲಿಸಲು ಪಹಣಿ, ಮ್ಯುಟೇಷನ್ ಲಗತ್ತಿಸಬೇಕು. ಭೂಮಿ ಸರ್ವರ್ ಡೌನ್ ಇರುವ ಕಾರಣ ಯಾವುದೇ ದಾಖಲೆ ಸಿಗುತ್ತಿಲ್ಲ. ಮತ್ತೊಂದೆಡೆ ಕಡೆಯ ದಿನಾಂಕದಂದು ಗ್ರಾಮ ಲೆಕ್ಕಿಗರು ರೈತರಿಗೆ ತಿಳಿಸಿ ಬೇಕಾಬಿಟ್ಡಿ ಅರ್ಜಿ ಸ್ವೀಕರಿಸುತ್ತಿದ್ದಾರೆ. ಪ್ರಶ್ನೆ ಮಾಡುವ ರೈತರಿಗೆ ಯಾವುದೇ ಪ್ರಯೋಜನ ಆಗುತ್ತಿಲ್ಲ.

    ಒಂದು ಕಡೆ ಭೂಮಿ ಸರ್ವರ್ ಡೌನ್ ಮತ್ತೊಂದೆಡೆ ಗ್ರಾಮಕ್ಕೆ ಕಾಲಿಡದ ಗ್ರಾಮ ಲೆಕ್ಕಿಗರು. ಇದರಿಂದ ಸರ್ಕಾರದ ಬಹುನಿರೀಕ್ಷಿತ ಯೋಜನೆ ಅನುಷ್ಠಾನಕ್ಕೆ ಹಿನ್ನೆಡೆ ಆಗಿದೆ.

    ತಾಯಿಯ ಅಕ್ರಮ ಸಂಬಂಧಕ್ಕೆ ಬೇಸತ್ತ ಬಾಲಕಿ ಆತ್ಮಹತ್ಯೆ?

    ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿದ ಮಾಜಿ ಸಂಸದ ವಿರೂಪಾಕ್ಷಪ್ಪ! ಮಸ್ಕಿ ಬೈ ಎಲೆಕ್ಷನ್​ ಭರ್ಜರಿ ಸಿದ್ಧತೆ

    ಒಕ್ಕಲಿಗರ ನಿಗಮಕ್ಕೆ 500 ಕೋಟಿ ರೂ. ಮೀಸಲಿಟ್ಟ ಸಿಎಂ: ಆದಿಚುಂಚನಗಿರಿ ಶ್ರೀಗಳ ಸಂತಸ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts