More

    2+3+4 ನಿಗೂಢ ಫಾರ್ಮುಲಾ ಹೇಳಿ ತಲೆಗೆ ಹುಳುಬಿಟ್ಟ ಜಾರಕಿಹೊಳಿ- ಬೆಂಬಲಿಗರು ಬಿಡಿಸಿದರು ಈ ಒಗಟು!

    ಬೆಂಗಳೂರು: ಲೈಂಗಿಕ ಹಗರಣಕ್ಕೆ ಸಂಬಂಧಿಸಿದಂತೆ ಅನೇಕ ದಿನಗಳವರೆಗೆ ಆರೋಪಿ ಸ್ಥಾನದಲ್ಲಿ ನಿಂತು ಸಚಿವ ಸ್ಥಾನವನ್ನೂ ಕಳೆದುಕೊಂಡ ರಮೇಶ್‌ ಜಾರಕಿಹೊಳಿಯವರು ಈಗ ಸದ್ಯ ಆರೋಪಮುಕ್ತರಾಗಿದ್ದಾರೆ.

    ಅವರ ವಿರುದ್ಧ ಲೈಂಗಿಕ ಹಗರಣದ ಆರೋಪ ಮಾಡಿದ್ದ ದಿನೇಶ್‌ ಕಲ್ಲಹಳ್ಳಿ ದೂರನ್ನು ವಾಪಸ್‌ ಪಡೆದ ನಂತರ ಇಂದು ತಮ್ಮ ನಿವಾಸದಲ್ಲಿ ರಮೇಶರ್‌ ಜಾರಕಿಹೊಳಿಯವರು ಪತ್ರಿಕಾಗೋಷ್ಠಿ ನಡೆಸಿ ಅನೇಕ ವಿಷಯಗಳನ್ನು ಹಂಚಿಕೊಂಡಿದ್ದಾರೆ.

    ಅದರಲ್ಲಿ ಪ್ರಮುಖವಾಗಿ ಅವರೊಂದು ನಿಗೂಢ ಫಾರ್ಮುಲಾ ಹೇಳಿದರು. ಅದೇನೆಂದರೆ 2+3+4. ತಮ್ಮ ವಿರುದ್ಧ ಷಡ್ಯಂತ್ರ ನಡೆದಿದೆ ಎಂದು ಆರೋಪಿಸಿದ ಅವರು, ಇದೇ ವೇಳೆ ಈ ಷಡ್ಯಂತ್ರದಲ್ಲಿ ಪಾಲ್ಗೊಂಡಿರುವವರ ಲೆಕ್ಕಾಚಾರ ಹೇಳುತ್ತಾ 2+3+4 ಎಂದು ಹೇಳಿದರು.

    ಆದರೆ ಇದ್ಯಾವ ಲೆಕ್ಕ, ಇದರ ಹಿಂದಿನ ನಿಗೂಢತೆ ಏನೆಂದು ಮಾತ್ರ ಬಹಿರಂಗಪಡಿಸಲಿಲ್ಲ. ಪತ್ರಕರ್ತರು ಪ್ರಶ್ನಿಸಿದಾಗ, ನೀವೆ ಯೋಚಿಸಿನೋಡಿ, ಎಲ್ಲ ನಿಮಗೆ ಬಿಡುತ್ತೇನೆ ಎಂದುಬಿಟ್ಟರು. ಕೆಲವು ಪ್ರಶ್ನೆಗಳಿಗೆ ಉತ್ತರಿಸಲು ಹಿಂದೇಟು ಹೊಡೆದ ಅವರು, ನೀವೇ ತೀರ್ಮಾನಿಸಿ, ಅಂತ ಪ್ರಶ್ನೆ ಕೇಳಬೇಡಿ ಎಂದು ಪದೇಪದೇ ಜಾರಿಕೊಂಡರು.

    2+3+4 ಏನು ಎಂಬುದು ಅವರು ಹೇಳದಿದ್ದರೂ ರಮೇಶ್ ಸಂಗಡಿಗರು ಇದರ ವಿಶ್ಲೇಷಣೆ ಮಾಡಿದ್ದು, ಇದರರ್ಥ ಇಬ್ಬರು ಮಹಿಳೆಯರು, ಮೂವರು ಪತ್ರಕರ್ತರು, ನಾಲ್ವರು ರಾಜಕಾರಣಿಗಳು ಎಂದಿದ್ದಾರೆ. ಸಿ.ಡಿ ಬಿಡುಗಡೆಯ ಷಡ್ಯಂತ್ರದ ಹಿಂದೆ ಇರುವುದು ಇಷ್ಟು ಮಂದಿ ಎನ್ನುವುದು ಅವರ ಮಾತು.

    ಬೆಳಗ್ಗೆ 10.30ಕ್ಕೆ ಸುದ್ದಿಗೋಷ್ಠಿಗೆ ಆಹ್ವಾನಿದ್ದ ರಮೇಶ್ ಜಾರಕಿಹೊಳಿ, 9.50ಕ್ಕೆ ಸುದ್ದಿಗೋಷ್ಠಿ ಆರಂಭಿಸಿ ಹತ್ತು ಹನ್ನೆರಡು ನಿಮಿಷದಲ್ಲಿ ತಮ್ಮ‌ಮಾತು ಮುಗಿಸಿ ಹೊರಟು ನಿಂತರು. ಇದರಿಂದ ಹಲವು ಮಾಧ್ಯಮಗಳು ರಮೇಶ್ ಮಾತನ್ನು ಸೆರೆ ಹಿಡೆಯಲು ಪರದಾಡುವಂತಾಯಿತು.

    ಸಿ.ಡಿ ಬಿಡುಗಡೆಯಾಗೋದು 4 ತಿಂಗಳ ಮೊದಲೇ ಗೊತ್ತಿತ್ತು- ಯಾರ ಕೈವಾಡ ಎಂದೂ ಗೊತ್ತು ಎಂದ ಜಾರಕಿಹೊಳಿ

    ಪತಿ ಒಳ್ಳೆಯವರು, ಆದ್ರೆ ಸೆಕ್ಸ್‌ನಲ್ಲಿ ಇಂಟರೆಸ್ಟೇ ಇಲ್ಲ, ಕೌನ್ಸೆಲಿಂಗ್‌ಗೂ ಬರಲ್ಲ- ಡಿವೋರ್ಸ್‌ ಪಡೀಬಹುದಾ?

    ಜಮೀನು ವಿವಾದ- ರಾಕಿಂಗ್‌ ಸ್ಟಾರ್‌ ಪಾಲಕರ ಜತೆ ಗ್ರಾಮಸ್ಥರ ಫೈಟ್‌: ಇಲ್ಲಿದೆ ನೋಡಿ ವಿಡಿಯೋ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts