ಥಾಣೆ: ಕೊಲೆ ಮತ್ತು ಕುಟುಂಬದ ಸದಸ್ಯರ ಮೇಲಿನ ಹಲ್ಲೆ ಸೇರಿದ ಅಪರಾಧಗಳಿಗೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಥಾಣೆಯ ನ್ಯಾಯಾಲಯ ಒಂದೇ ದಿನ ಎರಡು ಪ್ರತ್ಯೇಕ ತೀರ್ಪುಗಳಲ್ಲಿ ಇಬ್ಬರು ಸಹೋದರರಿಗೆ ಶಿಕ್ಷೆ ಪ್ರಕಟಿಸಿ ಆದೇಶ ಹೊರಡಿಸಿದೆ.
ಇದನ್ನೂ ಓದಿ: ರಸ್ತೆ ಗುಂಡಿಗಳಿಗೆ ಬೇಸತ್ತು ಬೆಂಗಳೂರನ್ನೇ ತೊರೆಯಲು ಮುಂದಾದ ಬ್ಲ್ಯಾಕ್ಬಕ್ ಕಂಪನಿ: ಆಂಧ್ರದಿಂದ ಬಂತು ಆಫರ್! Pothole
2021 ರಲ್ಲಿ ವಿಶಾಲ್ ಅರುಣ್ ಅಲ್ಜೆಂಡೆ ಎಂಬಾತ ತನ್ನ ತಾಯಿಗೆ ಆಟೋರಿಕ್ಷಾ ಶುಲ್ಕಕ್ಕಾಗಿ ಪ್ರತಿದಿನ ನೀಡುತ್ತಿದ್ದ 20 ರೂ ನೀಡುತ್ತಿದ್ದ. ಇನ್ನೂ ಈ ವಿಚಾರಕ್ಕೆ ವಾಗ್ವಾದ ಉಂಟಾಗಿ, ಆ ಕ್ಷಣ ನಡೆದ ಜಗಳದಲ್ಲಿ ಆಕೆಯನ್ನು ಕೊಂದ ಆರೋಪದಲ್ಲಿ ತಪ್ಪಿತಸ್ಥನೆಂದು ನ್ಯಾಯಾಧೀಶರು ತೀರ್ಪು ಪ್ರಕಟಿಸಿದ್ದಾರೆ. ಆತ ತನ್ನ ತಾಯಿಗೆ ಸ್ಕ್ರೂಡ್ರೈವರ್‌ನಿಂದ 50 ಬಾರಿ ಇರಿದಿದ್ದಾನೆ ಎಂದು ಪ್ರಾಸಿಕ್ಯೂಷನ್ ತಿಳಿಸಿದ್ದಾರೆ.
ಪ್ರಧಾನ ಜಿಲ್ಲಾ ನ್ಯಾಯಾಧೀಶ ಎಸ್.ಬಿ. ಅಗರವಾಲ್ ಅವರು ಸೆಪ್ಟೆಂಬರ್ 12 ರಂದು ಹೊರಡಿಸಿದ ಆದೇಶಗಳ ಪ್ರತಿಗಳು ಇಂದು (ಸೆ.17) ಲಭ್ಯವಾಗಿವೆ. ಈ ಪ್ರಕರಣದಲ್ಲಿ ಎರಡೂ ಪ್ರತ್ಯೇಕ ಪ್ರಕರಣಗಳಲ್ಲಿ ಎಪಿ ಲಡ್ವಂಜರಿ ಮತ್ತು ರಶ್ಮಿ ಕ್ಷೀರಸಾಗರ್ ಪ್ರಾಸಿಕ್ಯೂಷನ್ ನೇತೃತ್ವ ವಹಿಸಿದ್ದರು.
(ಏಜೆನ್ಸೀಸ್)
ಮತ್ತೊಂಡೆದೆ ವಿಶಾಲ್ ಅವರ ಸಹೋದರ ವಿಷ್ಣು ಎಂಬಾತನನ್ನು 2016 ರಲ್ಲಿ ಅವರ ಅಜ್ಜಿ ಮತ್ತು ಚಿಕ್ಕಪ್ಪನ ಮೇಲೆ ಹಲ್ಲೆ ಮಾಡಿದ್ದಕ್ಕಾಗಿ ನ್ಯಾಯಾಧೀಶರು ದೋಷಿ ಎಂದು ಆರೋಪಿಸಿದ್ದರು. ಆತನ ಮೇಲೆ ಅವರ ತಂದೆಯನ್ನು ಕೊಂದ ಆರೋಪ ಸಹ ಇತ್ತು. ಆದರೆ ಸಾಕ್ಷಿ-ಆಧಾರಗಳ ಕೊರತೆಯಿಂದಾಗಿ ನ್ಯಾಯಾಲಯ ಆತನನ್ನು ಖುಲಾಸೆಗೊಳಿಸಿತ್ತು. ಸದ್ಯ ಇದೀಗ ಇಬ್ಬರಿಗೂ ಸಹ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ. ನ್ಯಾಯಾಧೀಶರು ತಾಯಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶಾಲ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದ್ದರೆ, ಇತ್ತ ಹಲ್ಲೆ ಪ್ರಕರಣದಲ್ಲಿ ವಿಷ್ಣುವಿಗೆ ಒಂದು ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ.