ನ್ಯೂಸ್

ಡಿ. 3ರಿಂದ ಭಾರತ- ಆಸೀಸ್ ಟೆಸ್ಟ್ ಸರಣಿ?

ಮೆಲ್ಬೋರ್ನ್: ಆರ್ಥಿಕ ಹಿತಾಸಕ್ತಿಯಿಂದ ಅತ್ಯಂತ ಪ್ರಮುಖವಾಗಿರುವ ಭಾರತ ವಿರುದ್ಧದ 4 ಪಂದ್ಯಗಳ ಟೆಸ್ಟ್ ಸರಣಿಗಾಗಿ ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ), 4 ತಾಣಗಳನ್ನು ನಿಗದಿಪಡಿಸಿಕೊಂಡಿದೆ.

ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ, ಡಿಸೆಂಬರ್ 3ರಿಂದ ಬ್ರಿಸ್ಬೇನ್​ನಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. ಬಳಿಕ ಅಡಿಲೇಡ್​ನಲ್ಲಿ ಡಿಸೆಂಬರ್ 11ರಿಂದ 2ನೇ ಟೆಸ್ಟ್ ನಡೆಯಲಿದ್ದು, ಇದು ಅಹರ್ನಿಶಿ ಪಂದ್ಯವಾಗಿರುತ್ತದೆ. ಕೊನೆಯ 2 ಪಂದ್ಯಗಳು ಸಾಂಪ್ರದಾಯಿಕ ಬಾಕ್ಸಿಂಗ್ ಡೇ (ಡಿ.26, ಮೆಲ್ಬೋರ್ನ್) ಮತ್ತು ನ್ಯೂ ಇಯರ್ ಟೆಸ್ಟ್ (ಜ.3, ಸಿಡ್ನಿ) ಆಗಿರುತ್ತವೆ.

ಪ್ರವಾಸಿ ಭಾರತ ತಂಡಕ್ಕೆ ಕ್ವಾರಂಟೈನ್ ಇರುವುದಿಲ್ಲ ಎನ್ನಲಾಗಿದ್ದು, 2020-21ರ ತವರು ಋತುವಿನ ವೇಳಾಪಟ್ಟಿಯನ್ನು ಸಿಎ ಶುಕ್ರವಾರ ಅಧಿಕೃತವಾಗಿ ಬಿಡುಗಡೆ ಮಾಡಲಿದೆ ಎನ್ನಲಾಗಿದೆ. -ಪಿಟಿಐ