ಸಿಂಧನೂರಿನಲ್ಲಿ ತಾಲೂಕು ಚುಟುಕು ಸಾಹಿತ್ಯ ಪರಿಷತ್ ಆಯೋಜಿಸಿದ್ದ ಪದಾಧಿಕಾರಿಗಳ ಸಭೆಯನ್ನು ಚುಸಾಪ ಗೌರವಾಧ್ಯಕ್ಷ ಬೀರಪ್ಪ ಶಂಭೋಜಿ ಉದ್ಘಾಟಿಸಿದರು. ಪ್ರಮುಖರಾದ ರಮಾದೇವಿ ಶಂಭೋಜಿ, ಬಸಮ್ಮ ತಾಳಿಕೋಟೆ, ತಿಮ್ಮಣ್ಣ ರಾಮತ್ನಾಳ, ಶಾರವಾನ ಪುಷ್ಪಾ, ರಾಮದಾಸ, ಸೋಮಣ್ಣ, ಗುಂಡೂರಾವ್ ಚೆನ್ನಳ್ಳಿ, ಸಾವಿತ್ರಿ ಇತರರಿದ್ದರು. 
ನ್ಯೂಸ್

ಚುಟುಕು ಸಾಹಿತ್ಯ ಪರಿಚಯಿಸಿ

Kopala - Desk - Eraveni

ಸಿಂಧನೂರು: ಸಾಹಿತ್ಯ ಚಟುವಟಿಕೆಗಳ ಮೂಲಕ ಚುಟುಕು ಸಾಹಿತ್ಯದ ಪರಿಚಯವನ್ನು ಸಾಹಿತ್ಯಾಸಕ್ತರಿಗೆ ನೀಡುವ ಕೆಲಸಕ್ಕೆ ಎಲ್ಲರೂ ಕೈಜೋಡಿಸಬೇಕೆಂದು ಚುಸಾಪ ತಾಲೂಕು ಅಧ್ಯಕ್ಷ ಎಂ.ಭಾಸ್ಕರ್ ಹೇಳಿದರು.

ನಗರದಲ್ಲಿ ತಾಲೂಕು ಚುಟುಕು ಸಾಹಿತ್ಯ ಪರಿಷತ್ ಆಯೋಜಿಸಿದ್ದ ನೂತನ ಪದಾಧಿಕಾರಿಗಳ ಪ್ರಥಮ ಸಭೆಯಲ್ಲಿ ಮಾತನಾಡಿದರು. ಚುಸಾಪ ಗೌರವಾಧ್ಯಕ್ಷ ಬೀರಪ್ಪ ಶಂಭೋಜಿ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಚುಟುಕು ಸಾಹಿತ್ಯ ಜನಪ್ರಿಯವಾಗುತ್ತಿದೆ.

ಕಡಿಮೆ ಶಬ್ದಗಳನ್ನು ಬಳಸಿ ಸಮಾಜಕ್ಕೆ ಉತ್ತಮ ಸಂದೇಶ ನೀಡುವಂಥ ಚುಟುಕುಗಳ ರಚನೆ ಮಾಡುವುದು ಸಾಹಿತಿಗಳ ಕಾರ್ಯವಾಗಬೇಕು ಎಂದರು. ತಾಲೂಕಕು ಗೌರವಾಧ್ಯಕ್ಷೆ ರಮಾದೇವಿ ಶಂಭೋಜಿ, ಉಪಾಧ್ಯಕ್ಷರಾದ ಬಸಮ್ಮ ತಾಳಿಕೋಟೆ, ತಿಮ್ಮಣ್ಣ ರಾಮತ್ನಾಳ, ಜಂಟಿ ಕಾರ್ಯದರ್ಶಿ ಶಾರವಾನ ಪುಷ್ಪಾ,

ಕಾರ್ಯಕಾರಿ ಸಮಿತಿ ಸದಸ್ಯರಾದ ರಾಮದಾಸ, ಸೋಮಣ್ಣ, ಗುಂಡೂರಾವ್ ಚೆನ್ನಳ್ಳಿ, ಸಾವಿತ್ರಿ ಎಲೆಕೂಡ್ಲಿಗಿ, ಶೇಕ್ ಮಹ್ಮದ್ ಷಾಜಿ, ವೆಂಕನಗೌಡ ಭೂತಲದಿನ್ನಿ, ಅಶೋಕ ಬೊಹರಾ, ಗೀತಾ ಎಂ.ಭಾಸ್ಕರ್, ನವ್ಯಾ ಪ್ರಸಾದ್, ಶಿಕ್ಷಕ ತುಳಸಿದಾಸ, ಪ್ರಮುಖರಾದ ಅಮರೇಶ ಹೂಗಾರ, ಬಸಮ್ಮ ತಾಳಿಕೋಟಿ, ತಿಮ್ಮಣ್ನ ರಾಮತ್ನಾಳ, ರಾಮದಾಸ, ಸೋಮಣ್ಣ, ಬಸವರಾಜ ಕುಂಬಾರ ಇದ್ದರು.