ಜೀವನದಲ್ಲಿ ಬೆರೆತಿದೆ ಸಾಹಿತ್ಯ

sri kasapa
ಶೃಂಗೇರಿ ಶ್ರೀ ಅಭಿನವ ವಿದ್ಯಾತೀರ್ಥ ಪ್ರೌಢಶಾಲೆಯಲ್ಲಿ ಛಾಯಾಗ್ರಾಹಕ ರವಿ ಅವರನ್ನು ಸನ್ಮಾನಿಸಲಾಯಿತು. ಅಶ್ವಿನಿ, ಮನೋಜ್, ಸಂತೋಷ್ ಇತರರಿದ್ದರು.
Published on

ಶೃಂಗೇರಿ: ಸಾಹಿತ್ಯ ಮತ್ತು ಬದುಕು ಬೇರೆಯಲ್ಲ. ಜೀವನದೊಂದಿಗೆ ಸಾಹಿತ್ಯ ಹಾಸುಹೊಕ್ಕಾಗಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶೃಂಗೇರಿ ಸುಬ್ಬಣ್ಣ ಹೇಳಿದರು.

ಶ್ರೀ ಅಭಿನವ ವಿದ್ಯಾತೀರ್ಥ ಪ್ರೌಢಶಾಲೆಯಲ್ಲಿ ರೋಟರಿ ಹಾಗೂ ಇನ್ನರ್‌ವ್ಹೀಲ್ ಕ್ಲಬ್ ಆಶ್ರಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಾಹಿತ್ಯ ಮತ್ತು ಬದುಕು ವಿಷಯವಾಗಿ ಉಪನ್ಯಾಸ ನೀಡಿದರು.

ಕನ್ನಡ ಸಾಹಿತ್ಯ ಶ್ರೀಮಂತವಾಗಿದ್ದು, 8 ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ. ಕನ್ನಡ ಸಾಹಿತ್ಯ ಪುಸ್ತಕ ಓದುವುದರಿಂದ ಜ್ಞಾನ ಹೆಚ್ಚುತ್ತದೆ. ವಿದ್ಯಾರ್ಥಿಗಳು ಪಠ್ಯಪುಸ್ತಕದೊಂದಿಗೆ ಸಾಹಿತ್ಯ ಓದಬೇಕು. ದ.ರಾ.ಬೇಂದ್ರೆ ಜನ್ಮದಿನದಂದು ವಿದ್ಯಾರ್ಥಿಗಳು ಬೇಂದ್ರೆ ಅವರ ಒಂದು ಪುಸ್ತಕವನ್ನಾದರೂ ಓದುತ್ತೇವೆ ಎಂಬ ಸಂಕಲ್ಪ ಮಾಡಬೇಕು ಎಂದು ತಿಳಿಸಿದರು.

ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಚರಿತಾ ಸುಜನ್ ಮಾತನಾಡಿ, ಮಾತೃಭಾಷೆ ಮೇಲೆ ಅಭಿಮಾನವಿರಬೇಕು. ವ್ಯಾವಹಾರಿಕವಾಗಿ ಬೇರೆ ಭಾಷೆ ಕಲಿಯಬೇಕು. ಮಾತೃಭಾಷೆಯನ್ನು ನಿತ್ಯವೂ ಬಳಸಬೇಕು ಎಂದು ತಿಳಿಸಿದರು.

ಛಾಯಾಗ್ರಾಹಕ ರವಿ ಅವರನ್ನು ಸನ್ಮಾನಿಸಲಾಯಿತು. ಕರ್ನಾಟಕ ಸರ್ಕಾರ ಸಂಸ್ಕೃತ ಭಾಷಾ ಪ್ರೋತ್ಸಾಹಕ್ಕೆ ನೀಡುವ ನಗದನ್ನು ಎಸ್.ಎಸ್.ಅಶ್ವಿನಿ ಮತ್ತು ಟಿ.ಎಸ್.ಮನೋಜ್ ಅವರಿಗೆ ನೀಡಲಾಯಿತು. ರಸಪ್ರಶ್ನೆಯಲ್ಲಿ ಎಚ್.ನಿವಾಸ(ಪ್ರ), ಪ್ರೀತನ್ಯಾ(ದ್ವಿ) ಮತ್ತು ಎನ್.ಅನೀಶ ತೃತೀಯ ಬಹುಮಾನ ಪಡೆದರು.

ಮುಖ್ಯಶಿಕ್ಷಕ ಸಂತೋಷ್‌ಕುಮಾರ್, ಇನ್ನರ್‌ವ್ಹೀಲ್ ಕ್ಲಬ್ ಭಾಗ್ಯಾ, ಶಿಕ್ಷಕ ಟಿ.ಆರ್.ಕೃಷ್ಣಮೂರ್ತಿ, ಕೆ.ಎಲ್.ಗೋಪಾಲಕೃಷ್ಣ, ಅಶ್ವಿನಿ, ಮೇಘಾ, ಮನೋಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net