ನ್ಯೂಸ್

ಫಸ್ಟ್​ನೈಟ್​ಗೆಂದು ಒಳ ಹೋದ ವಧು... ಶವವಾಗಿ ಪತ್ತೆ ! ಅಸಲಿಗೆ ನಡೆದಿದ್ದೇನು? | First Night

ಬಾಬುಪ್ರಸಾದ್​ ಮೋಡಿಸ್​

First Night: ಮೈಗಚ್ಚಿದ ಅರಿಶಿಣ ತೊಳೆದೋಗುವ ಮುನ್ನವೇ ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಆಂಧ್ರದ ಸತ್ಯಸಾಯಿ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ.

ಕರ್ನಾಟಕಾಂಧ್ರ ಗಡಿಭಾಗದ ಸೋಮಂದೆಪಲ್ಲಿ ಗ್ರಾಮದ ನಿವಾಸಿಗಳಾದ ಕೃಷ್ಣಮೂರ್ತಿ ಮತ್ತು ವರಲಕ್ಷ್ಮೀ ದಂಪತಿಯ ಏಕೈಕ ಪುತ್ರಿ, ನವ ವಧು ಹರ್ಷಿತಾ(22) ಮೃತೆ.

ಕರ್ನಾಟಕದ ಬಾಗೇಪಲ್ಲಿ ಬಳಿಯ ದಿಬ್ಬೂರಿಪಲ್ಲಿ ಗ್ರಾಮದ ನಾಗೇಂದ್ರ ಎಂಬ ಯುವಕನ್ನನ್ನು ಇತ್ತೀಚಿಗೆ ಮದುವೆಯಾಗಿದ್ದರು. ಇದೇ ಸೋಮವಾರ(ಆ.4) ಸೋಮಂದೆಪಲ್ಲಿ ಗ್ರಾಮದ ಹರ್ಷಿತಾ ಮನೆಯಲ್ಲಿ ಮೊದಲ ರಾತ್ರಿ(ಫಸ್ಟ್​ನೈಟ್​) ಏರ್ಪಡಿಸಲಾಗಿತ್ತು. ಆದರೆ, ಕೆಲ ಸಮಯದ ಬಳಿಕ ಫಸ್ಟ್​ನೈಟ್ ರೂಮ್​ಗೆ ಹೋದ ಹರ್ಷಿತಾ ಹೊರ ಬರಲಿಲ್ಲ. ಇದರಿಂದ ಅನುಮಾನಗೊಂಡ ಕುಟುಂಬಸ್ಥರು ಬಾಗಿಲು ಹೊಡೆದು ನೋಡಿದಾಗ, ಹರ್ಷಿತಾ ಸಿಲಿಂಗ್ ​ಫ್ಯಾನ್​ಗೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.

ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಇನ್ನು ಈ ಕುರಿತು ದೂರು ದಾಖಲಾಗಿಲ್ಲ. ದೂರು ಕೊಟ್ರೆ ಕ್ರಮಕೈಗೊಳ್ಳುವುದಾಗಿ ಎಎಸ್​ಐ ರಮೇಶ್​ ಬಾಬು ತಿಳಿಸಿದ್ದಾರೆ.(ಏಜೆನ್ಸೀಸ್​)