ನ್ಯೂಸ್

VIDEO | ಮದುವೆ ಮಂಟಪದಲ್ಲಿ ಕುಳಿತು ಗುಂಡು ಹಾರಿಸಿದ ವಧು! ಮುಂದೆನಾಯ್ತು..?

ಉತ್ತರ ಪ್ರದೇಶ: ಮದುವೆ ಮಂಟಪದಲ್ಲಿ ವರನ ಜತೆಗೆ ಕುಳಿತಿದ್ದ ವಧು ವೇದಿಕೆ ಮೇಲೆ ಕುಳಿತಿದ್ದಂತೆ ಗನ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಾಳೆ. ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯ ಸೇಲಂಪುರ ಗ್ರಾಮದ ಅತಿಥಿಗೃಹದಲ್ಲಿ ಶುಕ್ರವಾರ ಈ ಘಟನೆ ನಡೆದಿದ್ದು, ಈ ವಿಡಿಯೋ ವೈರಲ್ ಆಗಿದೆ.

ವಿಡಿಯೋದಲ್ಲಿ ಏನಿದೆ?: ವಧು-ವರರು ತಮ್ಮ ಮದುವೆ ಸಮಾರಂಭದಲ್ಲಿ ವೇದಿಕೆಯ ಮೇಲೆ ಕುಳಿತಿದ್ದಾರೆ. ಪಕ್ಕದಲ್ಲಿ ನಿಂತಿದ್ದ ಯುವಕನೊಬ್ಬ ವಧುವಿನ ಕೈಗೆ ರಿವಾಲ್ವರ್ ಕೊಟ್ಟಿದ್ದಾನೆ. ವಧು ವೇದಿಕೆಯಲ್ಲಿ ವರನೊಂದಿಗೆ ಕುಳಿತು ಗಾಳಿಯಲ್ಲಿ ನಾಲ್ಕು ಗುಂಡುಗಳನ್ನು ಹಾರಿಸಿದ್ದಾಳೆ. ಈ ವೇಳೆ ವರ ಮಾತ್ರ ಏನು ತಿಳಿಯದ ಹಾಗೇ ಸುಮ್ಮನೆ ಕುಳಿತಿದ್ದಾನೆ. ಗುಂಡು ಹಾರಿಸಿದ ನಂತರ ವಧು ವೇದಿಕೆಯಲ್ಲಿ ನಿಂತಿದ್ದ ಯುವಕನಿಗೆ ರಿವಾಲ್ವರ್ ನೀಡಿದ್ದಾಳೆ.

ವಧು ವೇದಿಕೆಯಲ್ಲಿ ವರನೊಂದಿಗೆ ಕುಳಿತು ಗಾಳಿಯಲ್ಲಿ ನಾಲ್ಕು ಗುಂಡುಗಳನ್ನು ಹಾರಿಸಿದ್ದಾಳೆ. ಈ ವೇಳೆ ವರ ಮಾತ್ರ ಏನು ತಿಳಿಯದ ಹಾಗೇ ಸುಮ್ಮನೆ ಕುಳಿತಿದ್ದಾನೆ. ಈ ವಿಡಿಯೋ ಕುರಿತಾಗಿ ಸೋಶಿಯಲ್​ ಮೀಡಿಯಾದಲ್ಲಿ ಪರ ಮತ್ತು ವಿರೋಧ ಚರ್ಚೆಯಾಗುತ್ತಿದೆ.

ಈ ಪ್ರಕರಣದ ಬಗ್ಗೆ ಗಮನ ಹರಿಸಿದ್ದೇವೆ. ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಆರೋಪಗಳನ್ನು ದಾಖಲಿಸುವ ಮೂಲಕ ಕಾನೂನು ಕ್ರಮ ಕೈಗೊಳ್ಳುತ್ತೇವೆಂದು ಹತ್ರಾಸ್ ಪೊಲೀಸರು ಹೇಳಿದ್ದಾರೆ.