ನ್ಯೂಸ್

ರಸಗುಲ್ಲಾ ತಿನ್ನಿಸಿದ ವರ..ಕೋಪ ನೆತ್ತಿಗೆರಿಸಿಕೊಂಡ ವಧು ಮದುವೆ ಮಂಟಪದಲ್ಲಿ ಮಾಡುದ್ದೇನು?

ಬೆಂಗಳೂರು: ವಧು-ವರನ ನೃತ್ಯದಿಂದ ಹಿಡಿದು ಮದುವೆ ಮನೆಗಳ ಹಲವು ಸನ್ನಿವೇಶಗಳ ವಿಡಿಯೋಗಳು ಇತ್ತೀಚೆಗೆ ಭಾರಿ ಸದ್ದು ಮಾಡುತ್ತಿರುತ್ತದೆ. ಕೆಲವು ಕಣ್ಣು ಹುಬ್ಬೇರಿಸುವಂತೆ ಮಾಡಿದರೆ, ಇನ್ನು ಕೆಲವು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತವೆ. ಅಂತಹುದೇ ಇಲ್ಲೊಂದು ವಿಡಿಯೋ ವೈರಲ್ ಆಗಿದೆ.

ಆ ಮದುವೆ ವಿಡಿಯೋ ಇಷ್ಟು ವೈರಲ್ ಆಗಿರುವುದಕ್ಕೆ ಕಾರಣ ವಧು- ವರರು. ಮದುವೆ ಮಂಟಪದಲ್ಲಿ ಸಿಹಿ ತಿನ್ನಿಸುವಾಗ ಅವರು ನಡೆದುಕೊಂಡ ರೀತಿ ನಿಜಕ್ಕೂ ಬಹಳ ವಿಚಿತ್ರವಾಗಿದೆ.

ಸಾಮಾನ್ಯವಾಗಿ ಹೆಣ್ಣಾಗಲಿ ಗಂಡಾಗಲಿ ಅವರ ಗುಣ ಸ್ವಭಾವ ಏನೇ ಇದ್ದರೂ ಮದುವೆ ಸಂದರ್ಭ ನಯ, ನಾಜೂಕು, ಗಾಂಭೀರ್ಯ ಇದ್ದೇ ಇರುತ್ತದೆ. ಆದರೆ ಇಲ್ಲಿ ಅದ್ಯಾವುದೂ ಇಲ್ಲ. ಮದುವೆ ಮಂಟಪದಲ್ಲಿಯೇ ವಧು ಉಗ್ರ ರೂಪ ತಳೆದು ಬಿಟ್ಟಿದ್ದಾಳೆ. ಅದು ಕೂಡಾ ಕ್ಷುಲ್ಲಕ ಕಾರಣಕ್ಕೆ.

ಇಷ್ಟಕ್ಕೂ ಅಲ್ಲಿ ಆಗಿದ್ದೇನೆಂದರೆ, ವರ ವಧುವಿಗೆ ರಸಗುಲ್ಲಾ ತಿನ್ನಿಸಲು ಹೋಗಿದ್ದಾನೆ. ವಧು ಬೇಡ ಎನ್ನುತ್ತಾಳೆ. ಆದ್ರೆ ವರ ಬಿಡಬೇಕಲ್ಲ, ಮದುಮಗಳ ಗಲ್ಲ ಹಿಡಿದು ಬಲವಂತವಾಗಿ ರಸಗುಲ್ಲಾವನ್ನು ವಧುವಿನ ಬಾಯಿಗೆ ತುರುಕುತ್ತಾನೆ.

ಇದು ವಧುವಿಗೆ ಇಷ್ಟವಾಗುವುದಿಲ್ಲ. ಮದುವೆ ಮಂಟಪದಲ್ಲಿಯೇ ವರನಿಗೆ ಮನ ಬಂದಂತೆ ಹೊಡೆದು ಸ್ಟೇಜ್​ನಿಂದ ಕೆಳಕ್ಕೆ ತಳ್ಳುತ್ತಾಳೆ. ವರ ಮೇಲೇರಿ ಬರಲು ಯತ್ನಿಸಿದರೂ ಮತ್ತೆ ಕೆಳಕ್ಕೆ ತಳ್ಳುತ್ತಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.