ಲಖನೌ: ಕರೊನಾ ಸೋಂಕು ತಡೆಗಟ್ಟುವ ಸಲುವಾಗಿ ದೇಶದಲ್ಲಿ ಲಾಕ್ಡೌನ್ ಘೋಷಣೆಯಾಗಿದ್ದು ಪ್ರಯಾಣದ ಮೇಲೆ ನಿರ್ಬಂಧ ಹೇರಲಾಗಿದೆ. ನಿಶ್ಚಿಯಿಸಲ್ಪಟ್ಟ ಮದುವೆ ನಡೆಸುವುದಕ್ಕೆ ಅವರು ಕಂಡುಕೊಂಡ ವಿಧಾನ ಈಗ ದೇಶದ ಗಮನಸೆಳೆದಿದೆ. ವಧು ಬಿಹಾರದ ಪಟನಾದವಳು. ವರ ಉತ್ತರ ಪ್ರದೇಶದ ಘಾಜಿಯಾಬಾದ್ನವನು. ಅವರ ವಿವಾಹ ಸರಳವಾಗಿ ಅವರವರ ಮನೆಯಲ್ಲಿದ್ದುಕೊಂಡೇ ನಡೆಯಿತು. ಅದೂ ವಿಡಿಯೋ ಕಾಲ್ ಮೂಲಕ!
ವಧು ಸಾದಿಯಾ ನಸ್ರೀನ್ ಮತ್ತು ವರ ದಾನಿಷ್ ರಝಾ ಅವರ ವಿವಾಹ ಮಾರ್ಚ್ 23ರಂದು ನಡೆಸಲು ಅವರ ಮನೆಯವರು ನಿಶ್ಚಯಿಸಿದ್ದರು. ಆದರೆ, ಸರ್ಕಾರ ದಿಢೀರ್ ಅಗಿ ಸಂಕಷ್ಟಮಯ ಸನ್ನಿವೇಶದ ಕಾರಣ 21ದಿನಗಳ ಲಾಕ್ಡೌನ್ ಘೋಷಿದೆ. ಇದರ ನಡುವೆ ಕೆಲವು ರಾಜ್ಯಗಳಲ್ಲಿ ಮೊದಲೇ ನಿರ್ಬಂಧ ಇದ್ದ ಕಾರಣ, ವರ ರಝಾ ಘಾಜಿಯಾಬಾದ್ನಿಂದ ಪಟನಾಕ್ಕೆ ಪ್ರಯಾಣಿಸುವುದು ಸಾಧ್ಯವಾಗಲಿಲ್ಲ. ಇಷ್ಟಾಗ್ಯೂ ವಿವಾಹ ಕಾರ್ಯ ನೆರವೇರಿಸಲು ಆ ಕುಟುಂಬಗಳು ನಿಶ್ಚಯಿಸಿದ ಕಾರಣ ಧಾರ್ಮಿಕ ಮುಖಂಡರು ವಿಡಿಯೋ ಕಾಲ್ ಮೂಲಕ ಅದನ್ನು ನೆರವೇರಿಸಿಕೊಟ್ಟರು.
ವಿಡಿಯೋದಲ್ಲಿ ಜೋಡಿ ಖುಬೂಲ್ ಹೇ ಎಂದು ಹೇಳುವ ದೃಶ್ಯವಿದೆ. ಅದೇ ರೀತಿ ಸಂಬಂಧಿಕರು ಪರಸ್ಪರ ಆಲಂಗಿಸಿಕೊಂಡು ಮುಬಾರಕ್ ಹೋ ಎಂದು ಹೇಳುವುದೂ ಕಾಣಿಸುತ್ತಿದೆ. ಈ ವಿಶೇಷ ವಿವಾಹ ಕಾರ್ಯವನ್ನು ವಿಡಿಯೋ ಮಾಡಿದ್ದು, ಅದೀಗ ವೈರಲ್ ಆಗಿದೆ. (ಏಜೆನ್ಸೀಸ್)