ನ್ಯೂಸ್

ಮದುವೆಯಾದ ವಾರದೊಳಗೆ ಚಿನ್ನಾಭರಣದೊಂದಿಗೆ ವಧು ಎಸ್ಕೇಪ್​; ವರ್ಷದ ಬಳಿಕ ಓರ್ವ ಆರೋಪಿ ಅರೆಸ್ಟ್​

ಮುಂಬೈ: ಮದುವೆಯಾದ ವಾರದೊಳಗೆ ಗಂಡನ ಮನೆಯಿಂದ ಹಣ, ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದ ವಧುವಿನ ಸಹಚರರನನ್ನು ಪ್ರಕರಣ ದಾಖಲಾದ ಒಂದು ವರ್ಷದ ನಂತರ ಮುಂಬೈನ ಮಲಾಡ್​ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಕಮಲೇಶ್​ ಕದಂ ಎಂದು ಗುರುತಿಸಲಾಗಿದ್ದು, ಪ್ರಕರಣದ ಮತ್ತೋರ್ವ ಆರೋಪಿಗಳಾದ ಆಶಾ ಗಾಯಕ್ವಾಡ್​, ಮನೀಶಾ ಕಶ್ಯಪ್​ ತಲೆಮಾರಿಸಿಕೊಂಡಿದ್ದು ಹುಡುಕಾಟ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ಧಾರೆ.

ಎರಡು ಮಕ್ಕಳ ತಾಯಿ ಜೊತೆ ಮದುವೆ

ಪ್ರಕರಣ ಕುರಿತು ಪ್ರತಿಕ್ರಿಯಿಸಿರುವ ಮಲಾಡ್​ ಠಾಣೆಯ ಪೊಲೀಸ್​ ಅಧಿಕಾರಿ ಒಬ್ಬರು 28 ವರ್ಷದ ಸಂತ್ರಸ್ತನಿಗೆ ಮಾತನಾಡುವ ವೇಳೆ ತೊದಲುತ್ತಿದ್ದ ಕಾರಣ ಆತನಿಗೆ ಹೆಣ್ಣು ಕೊಡಲು ಯಾರು ಮುಂದೆ ಬಂದಿರಲಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಬಂಧಿತ ಆರೋಪಿ ಕಮಲೇಶ್​ ತಾನು ಮದುವೆ ಬ್ರೋಕರ್​ ಎಂದು ಹೇಳಿಕೊಂಡು ಮೊದಲಿಗೆ ತನ್ನನ್ನು ತಾನು ಪರಿಚಯಿಸಿಕೊಂಡಿದ್ದಾನೆ.

ಮನೀಶಾ ಕಶ್ಯಪ್​

ಬಳಿಕ ಸಂತ್ರಸ್ತನನ್ನು ಈ ಮೊದಲೇ ಮದುವೆಯಾಗಿ ಎರಡು ಮಕ್ಕಳ ತಾಯಿ ಆಶಾ ಗಾಯಕ್ವಾಡ್​ ಎಂಬ ಮಹಿಳೆಗೆ ಪರಿಚಯಿಸಿದ್ದಾನೆ. ಬಳಿಕ ಆತನನ್ನು ಪುಸಲಾಯಿಸಿ ಮಹಿಳೆಯೊಂದಿಗೆ ಮದುವೆ ಮಾಡಿಸಿದ್ದಾನೆ. ವಿವಾಹವಾದ ಬಳಿಕ ಆರೋಪಿಗಳು ಸಂಚು ರೂಪಿಸಿ ಹುಡುಗನ ಮನೆಯಿಂದ ಹಣ, ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದರು.

ನಂಬರ್​ ಟ್ರೇಸ್​ ಮಾಡಿ ಬಂಧನ

ಕೂಡಲ್ಲೇ ಎಚ್ಚೆತ್ತ ಯುವಕನ ತಂದೆ ಆರೋಪಿಗಳ ವಿರುದ್ಧ ಮಲಾಡ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹಣ ದೋಚಿ ಪರಾರಿಯಾದ ಬಳಿ ಮೊಬೈಲ್​ ಸ್ವಿಚ್​ ಆಫ್​ ಮಾಡಿಕೊಂಡಿದ್ದ ವಧು ಆಶಾ ಸಂತ್ರಸ್ತನಿಗೆ ಕರೆ ಮಾಡಿ ಮಕ್ಕಳಿಗೆ ಹುಷಾರಿಲ್ಲದ ಕಾರಣ ಆಸ್ಪತ್ರೆಗೆ ದಾಖಲಿಸಬೇಕಾಗಿದೆ ಎಂದು ಹಣ ಕೇಳಿದ್ದಳು.

ಆರೋಪಿಯ ಜಾಡು ಹಿಡಿದು ಸಾಗಿದ ಪೊಲೀಸರ ಬಲೆಗೆ ಕಮಲೇಶ್​ ಸಿಕ್ಕಿಬಿದ್ದಿದ್ದು, ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. ಪ್ರಕರಣದ ಇನ್ನಿಬ್ಬರು ಆರೋಪಿಗಳಾದ ಆಶಾ ಹಾಗೂ ಮನೀಶಾ ತಲೆಮಾರಿಸಿಕೊಂಡಿದ್ದು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಮಲಾಡ್​ ಠಾಣೆಯ ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.