ನ್ಯೂಸ್

ಇಂದು ವೈವಾಹಿಕ ಜೀವನಕ್ಕೆ ಕಾಲಿಡಬೇಕಿದ್ದ ಯುವತಿ ದುರಂತ ಸಾವು: ಮುಗಿಲು ಮುಟ್ಟಿದ ಪಾಲಕರ ಆಕ್ರಂದನ

ಮಲಪ್ಪುರಂ: ಮದುವೆಗೂ ಮುನ್ನಾ ದಿನ 19 ವರ್ಷದ ಯುವತಿಯೊಬ್ಬಳು ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಕೇರಳದ ಮಲಪ್ಪುರಂನ ಪೆರಿಂಥಲಮನ್ನಾದಲ್ಲಿ ನಡೆದಿದೆ.

ಮೃತಳನ್ನು ಫಾತಿಮಾ ಬಥೂರ್​ ಎಂದು ಗುರುತಿಸಲಾಗಿದೆ. ಈಕೆ ಪಾತೈಕ್ಕರ ಶಾಲೆಪಾಡಿ ಕಿಜಕ್ಕೆತ್ತಿಲ್‌ ಮೂಲದ ಮುಸ್ತಫಾ ಮತ್ತು ಜೀನತ್ ದಂಪತಿಯ ಪುತ್ರಿ. ಫಾತಿಮಾಳ ಮದುವೆ ಇಂದು ಮೂರ್ಕ್ಕನಾಡು ಮೂಲದ ಯುವಕನೊಂದಿಗೆ ನಡೆಯಬೇಕಿತ್ತು. ಆದರೆ, ವಿಧಿ ಲಿಖಿತ ಬೇರೆ ಇತ್ತು ಅನಿಸುತ್ತದೆ. ನಿನ್ನೆ (ಜ.13) ರಾತ್ರಿ 7 ಗಂಟೆಗೆ ಕುಸಿದುಬಿದ್ದು ಮೃತಪಟ್ಟಿದ್ದಾಳೆ.

ನಿನ್ನೆ ರಾತ್ರಿ ತನ್ನ ಮನೆಯಲ್ಲಿ ನಡೆದ ಮದುವೆ ಹಿಂದಿನ ದಿನದ ಸಮಾರಂಭದಲ್ಲಿ ಫೋಟೋ ತೆಗೆಯುವ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದಾಳೆ. ಫಾತಿಮಾಳ ಮೃತದೇಹವನ್ನು ಇಎಂಎಸ್​ ಆಸ್ಪತ್ರೆಯ ಶವಗಾರಕ್ಕೆ ಸ್ಥಳಾಂತರ ಮಾಡಲಾಗಿದೆ. ಮಗಳನ್ನು ಕಳೆದುಕೊಂಡ ಪಾಲಕರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. (ಏಜೆನ್ಸೀಸ್​)