Wedding: ಮದುವೆ ಮಂಟಪದಲ್ಲಿ ಹವಾ ನಿಯಂತ್ರಿತ ವ್ಯವಸ್ಥೆ (ಎಸಿ) ಇಲ್ಲದಿದ್ದರಿಂದ ಮದುವೆಯನ್ನು ರದ್ದುಗೊಳಿಸಿದ ಘಟನೆಯೊಂದು ಉತ್ತರಪ್ರದೇಶದ ಆಗ್ರಾದಲ್ಲಿ ವರದಿಯಾಗಿದೆ.
ಹೌದು ಎಸಿ ಇಲ್ಲದ ಕಾರಣ ಸಣ್ಣ ಮಟ್ಟದಲ್ಲಿ ಜಗಳವಾದ ಆರಂಭವಾಗಿ ಕೊನೆಗೆ ವರನ ಕುಟುಂಬ ವಿರುದ್ಧ ವರದಕ್ಷಣೆ ಕೇಸ್ ದಾಖಲಿಸುವ ಮೂಲಕ ಮದುವೆ ಅಂತ್ಯಗೊಂಡಿದೆ ಎಂದು ದಿ ಪ್ರಿಂಟ್ ವರದಿ ಮಾಡಿದೆ.
ವರದಿಗಳ ಪ್ರಕಾರ, ಶನಿವಾರ ರಾತ್ರಿ ಶಂಷಾಬಾದ್ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಸ್ಥಳದಲ್ಲಿ ತೀವ್ರವಾದ ಶಾಖ ಮತ್ತು ಗಾಳಿಯ ಕೊರತೆಯಿಂದಾಗಿ ವಧು ಉಸಿರುಗಟ್ಟಿದಳು. ಹೀಗಾಗಿ ಎಸಿ ಕೇಳಿದ್ದಾರೆ. ಆದರೆ, ಕಲ್ಯಾಣ ಮಂಟಪದಲ್ಲಿ ಎಸಿ ಇಲ್ಲದ ಕಾರಣ ವರನ ಕಟುಂಬ ಸುಮ್ಮನಾಗಿದೆ. ಇದೇ ಒಂದು ಕಾರಣಕ್ಕೆ ಜಗಳ ಆರಂಭವಾಗಿದೆ. ಈ ಸಮಯದಲ್ಲಿ ವರನ ಕಡೆಯವರು ವಧು ಮತ್ತು ಅವಳ ಕುಟುಂಬದವರ ಮೇಲೆ ನಿಂದನೆ ಮಾಡಿದರು ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ:ತ್ರಿವಿಕ್ರಮ್ ಚಿತ್ರದಲ್ಲಿ ಅಲ್ಲು ಬದಲಾಗಿ NTR ನಟನೆ: ಸ್ಟೈಲಿಶ್ ಸ್ಟಾರ್ ತಪ್ಪಿಸಿಕೊಳ್ಳಲು ಕಾರಣವೇನು..?
ಈ ಹಿನ್ನೆಲೆ ಈ ಮದುವೆಯು ನನಗೆ ಗೌರವವನ್ನು ತರುವುದಿಲ್ಲ ಮತ್ತು ಅದು ಮುಂದುವರಿದರೆ ತನ್ನ ಜೀವನವು "ನರಕವಾಗುತ್ತದೆ" ಎಂದು ವಧು ಹೇಳುವ ಮೂಲಕ ಮಂಟಪದಿಂದ ಹೊರನಡೆದು ಮದುವೆಯನ್ನು ಸಂಪೂರ್ಣವಾಗಿ ರದ್ದುಗೊಳಿಸುವ ಹಂತಕ್ಕೆ ತಲುಪಿದೆ ಎಂದು ವರದಿ ಉಲ್ಲೇಖಿಸಿದೆ.
ಇನ್ನು ಈ ಗಲಾಟೆ ಹಿನ್ನೆಲೆ ಆಗ್ರಾ ಪೊಲೀಸರು ಮಧ್ಯ ಪ್ರವೇಶಿಸಿದ್ದಾರೆ. ಈ ವೇಳೆ ವಧುವಿನ ತಾಯಿ ಕೂಡ ವರನ ಕುಟುಂಬದಿಂದ ಹೆಚ್ಚಿನ ವರದಕ್ಷಿಣೆ ಬೇಡಿಕೆ ಇದೆ ಎಂದು ಆರೋಪಿಸಿ ಔಪಚಾರಿಕ ದೂರು ದಾಖಲಿಸಿದ್ದಾರೆ ಎಂದು ಪೊಲೀಸ್ ಠಾಣೆಯ ಉಸ್ತುವಾರಿ ಹಂಸರಾಜ್ ಭಡೋರಿಯಾ ತಿಳಿಸಿದ್ದಾರೆ.(ಏಜೆನ್ಸೀಸ್)