ನ್ಯೂಸ್

ಪ್ರಿಯಕರನ ವಿರುದ್ಧ ಸೇಡು ತೀರಿಸಿಕೊಳ್ಳಲು ಒಮ್ಮೆಲೆಗೆ 100 Pizza ಆರ್ಡರ್ ಮಾಡಿದ ಯುವತಿ; ವೈರಲ್ ವಿಡಿಯೋ ನೋಡಿದ್ರೆ ತಿಳಿಯುತ್ತೆ ಅಸಲಿ ಸಂಗತಿ

ಗುರುಗ್ರಾಮ: ಇತ್ತೀಚಿನ ವರ್ಷದಲ್ಲಿ ನಿಜವಾದ ಪ್ರೀತಿ ಸಿಗುವುದು ತುಂಬಾ ಅಪರೂಪವಾಗಿದೆ. ಸಿಕ್ಕರೂ ಕೂಡ ಜನರು ಅದನ್ನು ಉಳಿಸಿಕೊಳ್ಳದೆ ಬ್ರೇಕಪ್‌ ಮಾಡಿಕೊಳ್ಳುತ್ತಾರೆ. ಇದೀಗ ತನ್ನಿಂದ ದೂರಾದ ಪ್ರಿಯಕರನ ವಿರುದ್ಧ ಮಾಜಿ ಪ್ರೇಯಸಿಯೊಬ್ಬಳು ವಿಭಿನ್ನವಾಗಿ ಸೇಡು ತೀರಿಸಿಕೊಂಡಿದ್ದು, ಈಕೆಯ ಐಡಿಯಾಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

ಘಟನೆಯು ರಾಷ್ಟ್ರರಾಜಧಾನಿ ನವದೆಹಲಿಯ ಗುರುಗ್ರಾಮದಲ್ಲಿ ನಡೆದಿದ್ದು, ಯುವತಿ ತನ್ನ ಮಾಜಿ ಪ್ರಿಯಕರನ ವಿರುದ್ಧ ಸೇಡು ತೀರಿಸಿಕೊಳ್ಳಲು ಒಮ್ಮೆಲೆಗೆ 100 ಪಿಜ್ಜಾಗಳನ್ನು (Pizza) ಆರ್ಡರ್ ಮಾಡಿದ್ದಾಳೆ. ಅದು ಕ್ಯಾಶ್​ ಆನ್ ಡೆಲಿವರಿ ಆಪ್ಷನ್​ನೊಂದಿಗೆ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿಯಾಗಿದೆ. ಇದಕ್ಕೆ ಸಂಬಂಧ ಪಟ್ಟ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಗುರುಗ್ರಾಮದ ಸೆಕ್ಟರ್​ 53ರ ನಿವಾಸಿ ಯಶ್ ಸಾಂಘ್ವಿ ಹಾಗೂ ಆಯುಷಿ ರಾವತ್​ ಇಬ್ಬರು ರಿಲೇಷನ್​ಶಿಪ್​ನಲ್ಲಿದ್ದರು. ಆದರೆ, ಜೋಡಿಗಳ ನಡುವೆ ವಿಚಾರ ಒಂದಕ್ಕೆ ಮನಸ್ತಾಪ ಉಂಟಾಗಿದ್ದು, ಇದು ಬ್ರೇಕ್​ಅಪ್​ಗೆ ಕಾರಣವಾಗಿದೆ. ಇದರಿಂದ ತೀವ್ರವಾಗಿ ನೊಂದಿದ್ದ ಯುವತಿ ಪ್ರಿಯಕರನ ವಿರುದ್ಧ ಸೇಡು ತೀರಿಸಿಕೊಳ್ಳಲು ಪ್ರೇಮಿಗಳ ದಿನದಂದು ಒಮ್ಮೆಲೆಗೆ 100 ಪಿಜ್ಜಾಗಳನ್ನು (Pizza) ಆನ್​ಲೈನ್​ನಲ್ಲಿ ಆರ್ಡರ್ ಮಾಡಿದ್ದು,  ಆನ್‌ಲೈನ್ ಮೂಲಕ ಹಣ ಪಾವತಿ ಮಾಡದೇ, ಡೆಲಿವರಿ ವೇಳೆ ಹಣ ಪಾವತಿ ಮಾಡುವ ಕ್ಯಾಶ್ ಆನ್ ಡೆಲಿವರಿ ಆಯ್ಕೆ ಮಾಡುವ ಮೂಲಕ ತನ್ನ ಮಾಜಿ ಪ್ರಿಯಕರನ ವಿರುದ್ಧ ಯುವತಿ ಸೇಡು ತೀರಿಸಿಕೊಂಡಿದ್ದಾಳೆ.

ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಡಲಿವರಿ ಬಾಯ್ 15 ಸಾವಿರ ರೂಪಾಯಿ ಪಾವತಿಸುವಂತೆ ಯುವಕನಿಗೆ ಹೇಳಿದ್ದು, ಇಬ್ಬರ ನಡುವೆ ಮಾತಿನ ಚಕಮಕಿಯಾಗಿರುವುದನ್ನ ನೋಡಬಹುದಾಗಿದೆ. ಕೆಲವರು ಈ ವಿಡಿಯೋವನ್ನು ನೋಡಿ ಇದು ಮಾರ್ಕೆಟಿಂಗ್ ಸ್ಟಂಟ್ ಅಥವಾ ಜಾಹೀರಾತು ಇರಬಹುದು ಎಂದು ಹೇಳಿದ್ದರೆ ಮತ್ತಷ್ಟು ಜನ ಯಾರಿಗಾಗಿ ಆರ್ಡರ್ ಮಾಡಿದ್ದಾರೆಂದು ಯಾರಿಗೆ ಹೇಗೆ ತಿಳಿಯುತ್ತದೆ ಎಂದು ಪ್ರಶ್ನಿಸಿದ್ದಾರೆ. ಸದ್ಯ ಈ ಪೋಸ್ಟ್ ವೈರಲ್ ಆಗಿದೆ.