ನಿಗದಿಗಿಂತ ಹೆಚ್ಚು ಕಾರ್ಡ್ಗಳನ್ನು ವಿತರಣೆ ಮಾಡದಿರಲು ಸೂಚನೆ | ಬಾಕಿ ಉಳಿದಿರುವ ಅರ್ಜಿಗಳ ವಿಲೇವಾರಿಯೂ ವಿಳಂಬ ಸಾಧ್ಯತೆ
| ಹರೀಶ್ ಬೇಲೂರು ಬೆಂಗಳೂರು
ಲೋಕಸಭೆ ಚುನಾವಣೆ ನೀತಿಸಂಹಿತೆ ತೆರವುಗೊಂಡ ಬಳಿಕವಾದರೂ, ಹೊಸ ಪಡಿತರ ಚೀಟಿ ದೊರೆಯುವ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆ ಎದುರಾಗಿದೆ. ಹೊಸದಾಗಿ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ಗಳನ್ನು ನಿಗದಿಗಿಂತ ಹೆಚ್ಚುವರಿ ಮಂಜೂರು ಮಾಡಬಾರದು. 3 ತಿಂಗಳಿಂದ ರೇಷನ್ ಪಡೆಯದ ಕಾರ್ಡ್ಗಳನ್ನು ರದ್ದು ಮಾಡಬೇಕು. ಬಾಕಿ ಉಳಿದಿರುವ ಅರ್ಜಿಗಳನ್ನು ಏಕಕಾಲದಲ್ಲಿ ವಿಲೇವಾರಿ ಮಾಡುವಂತಿಲ್ಲ ಎಂಬ ನಿರ್ಬಂಧ ಹೇರಿರುವ ರಾಜ್ಯ ಸರ್ಕಾರ ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಇಲಾಖೆಗೆ ಆದೇಶಿಸಿದೆ.
2017ರಿಂದ 2021ರ ವರೆಗೆ ರಾಜ್ಯಾದ್ಯಂತ ಹೊಸದಾಗಿ ಬಿಪಿಎಲ್ ಕುಟುಂಬ ಸದಸ್ಯರ ಸೇರ್ಪಡೆ, ತಿದ್ದುಪಡಿ ಕೋರಿ ಇಲಾಖೆಗೆ ಸಲ್ಲಿಕೆಯಾಗಿರುವ 39,04,798 ಅರ್ಜಿಗಳ ಪೈಕಿ 26,48,171 ಅರ್ಜಿಗಳು ಅನುಮೋದನೆಗೊಂಡಿದ್ದು, 9,60,641 ಅರ್ಜಿಗಳು ತಿರಸ್ಕೃತಗೊಂಡಿವೆ. 36,08,812 ಅರ್ಜಿಗಳು ವಿಲೇವಾರಿಯಾದರೆ 2,95,986 ಬಾಕಿ ಉಳಿದಿವೆ.
2023ರ ಮೇನಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿತ್ತು. ಇದರಿಂದಾಗಿ ಪಡಿತರ ಚೀಟಿ ವಿತರಣೆ, ಹೆಸರು ಸೇರ್ಪಡೆ, ತಿದ್ದುಪಡಿಯನ್ನು ತಾತ್ಕಾಲಿಕ ವಾಗಿ ಸ್ಥಗಿತಗೊಳಿಸಲಾಯಿತು. ಅಂದಿನಿಂದ ಈವರೆಗೆ ಬಾಕಿ ಅರ್ಜಿಗಳ ವಿಲೇವಾರಿಗೆ ಸರ್ಕಾರ ಅನುಮತಿ ಕೊಟ್ಟಿಲ್ಲ. ಹೀಗಾಗಿ, ಬಾಕಿ ಅರ್ಜಿಗಳ ವಿಲೇವಾರಿಗೆ ಅನುಮತಿ ಕೋರಿ ಸರ್ಕಾರಕ್ಕೆ ಆಹಾರ ಇಲಾಖೆ ಪತ್ರ ಬರೆದಿತ್ತು. ಹೊಸ ಬಿಪಿಎಲ್ ಕಾರ್ಡ್ ಕೋರಿ ಹೃದಯ ಸಮಸ್ಯೆ ಸೇರಿ ಇತರ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರ ಸಾಕಷ್ಟು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಬಿಪಿಎಲ್ ಪ್ರಮುಖವಾಗಿದೆ.
ಇವರಿಗಾದರೂ ಕಾರ್ಡ್ ಕೊಡಲು ಅನುಮತಿ ನೀಡುವಂತೆ ಸರ್ಕಾರಕ್ಕೆ ಇಲಾಖೆ ಮನವಿ ಮಾಡಿಕೊಂಡಿತ್ತಾದರೂ ಸರ್ಕಾರ ಅನುಮತಿ ನೀಡಿರಲಿಲ್ಲ. ಆದರೀಗ ಹೊಸದಾಗಿ ಹಲವು ನಿಬಂಧನೆಗಳನ್ನು ಹೇರಿದೆ.
ಮಾನದಂಡವನ್ನು ಪಾಲಿಸಿಯೇ ಅರ್ಜಿಗಳನ್ನು ವಿಲೇವಾರಿ ಮಾಡಬೇಕು ಎಂದು ಸರ್ಕಾರ ಅಧಿಕಾರಿಗಳಿಗೆ ತಿಳಿಸಿದೆ. ನಿಯಮ ಉಲ್ಲಂಘಿಸಿದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ಕೊಟ್ಟಿದೆ. ಹೀಗಾಗಿ, ಹೊಸ ರೇಷನ್ ಕಾರ್ಡ್ಗಾಗಿ ಅರ್ಜಿ ಸಲ್ಲಿಸಿ ಮೂರು ವರ್ಷದಿಂದ ಚಾತಕಪಕ್ಷಿಯಂತೆ ಕಾಯುತ್ತಿರುವವರಿಗೆ ಹಾಗೂ ಹೊಸದಾಗಿ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸುತ್ತಿರುವವರಿಗೆ ಭಾರಿ ನಿರಾಸೆಯಾಗಿದೆ.
‘ಪ್ರತಿಭಟನೆ, ಮುಷ್ಕರ, ದೊಂಬಿ, ಗಲಾಟೆ, ರ್ಯಾಲಿ, ಬಂದ್ ಸಂದರ್ಭಗಳಲ್ಲಿ ಬಂದೋಬಸ್ತ್ಗೆ ಇವರು ಸೀಮಿತವಾಗಿದ್ದಾರೆ. ಕಾವಲಿನ ಹೆಸರಲ್ಲಿ ತಿಂಗಳುಗಟ್ಟಲೇ ನಿಯೋಜಿತ ಸ್ಥಳದಲ್ಲೇ ಕುಳಿತಿರಬೇಕಾದ ಪರಿಸ್ಥಿತಿ ಇದೆ. ಸಶಸ್ತ್ರ ಮೀಸಲು ಪಡೆಯಲ್ಲಿ ಎದುರಿಸುವ ಕಷ್ಟ, ಹದಗೆಟ್ಟ ವ್ಯವಸ್ಥೆ, ಕಿರುಕುಳಗಳಿಂದಾಗಿ ವಾರ್ಷಿಕ 200 ರಿಂದ 300 ಸಿಬ್ಬಂದಿ ಪರೀಕ್ಷೆ ಬರೆದು ಸಿವಿಲ್ ವಿಭಾಗಕ್ಕೆ ನೇಮಕಗೊಳ್ಳುತ್ತಿದ್ದಾರೆ. ಮತ್ತೆ ಕೆಲವರು ಎಫ್ಡಿಎ/ಎಸ್ಡಿಎ ಸೇರಿ ಇನ್ನಿತರ ಹುದ್ದೆಗಳಿಗೂ ಸೇರ್ಪಡೆಯಾಗುತ್ತಿದ್ದಾರೆ. ಹೀಗಾಗಿ ಸಿಬ್ಬಂದಿಗೆ ಅನನುಕೂಲವಾಗುವ ಹೊಸ ಆದೇಶ ಜಾರಿಗೆ ತರುವುದನ್ನು ಬಿಟ್ಟು ಅನುಕೂಲವಾಗುವ ವ್ಯವಸ್ಥೆ ಅನುಷ್ಠಾನಕ್ಕೆ ತರಲಿ ಎಂದು ಅಧಿಕಾರಿ ಮತ್ತು ಸಿಬ್ಬಂದಿ ಇಲಾಖೆಗೆ ಆಗ್ರಹಿಸಿದ್ದಾರೆ.
1. ಜನವಸತಿ ಪ್ರದೇಶಗಳಲ್ಲಿ 10 ನಿಮಿಷ ಡ್ರಿಲ್ ಮಾಡೋದು ನಗೆಪಾಟಲಿನ ಸಂದರ್ಭ
2. ಬೇಕಿದ್ದರೆ ಬೆಳಗ್ಗೆ ಅಥವಾ ಸಂಜೆ 1 ಗಂಟೆ ಕ್ರೀಡಾ ಚಟುವಟಿಕೆಗೆ ಆದೇಶ ಹೊರಡಿಸಲಿ
3. ಆಯಾ ಬೆಟಾಲಿಯನ್ಗಳಲ್ಲಿ ಈಗಾಗಲೇ ಪ್ರತಿನಿತ್ಯ ಬೆಳಗ್ಗೆ ದೈಹಿಕ ತರಬೇತಿ ಜಾರಿಯಲ್ಲಿದೆ
4. ಒಂದೇ ಕಡೆ ಕರ್ತವ್ಯ ನಿರ್ವಹಿಸುವುದೇ ಕಷ್ಟ. ಅಂತಹುದರಲ್ಲಿ ವ್ಯಾಯಾಮ ಹೇಗೆ ಸಾಧ್ಯ?
1. ಡ್ರಿಲ್ ಮಾಡಬೇಕು ಎಂಬ ಅವೈಜ್ಞಾನಿಕ ಆದೇಶವನ್ನು ಕೂಡಲೇ ಹಿಂಪಡೆಯಬೇಕು
2. ಪೊಲೀಸರು ಎದುರಿಸುತ್ತಿರುವ ಕುಂದು-ಕೊರತೆಗಳನ್ನು ಆಲಿಸಿ, ಪರಿಹಾರ ನೀಡಲಿ
3. ಸಿಬ್ಬಂದಿ ಎದುರಿಸುವ ಸಮಸ್ಯೆ ಬಗೆಹರಿಸಿದರೆ ಮಾನಸಿಕ ಬದಲಾವಣೆ ತರಲು ಸಾಧ್ಯ
4. 1 ಬಸ್ಸಲ್ಲಿ 40-50 ಜನ ಇರುತ್ತಾರೆ. ಹಳ್ಳಿ-ನಗರ ಪ್ರದೇಶದಲ್ಲಿ ಪಂಚ ಕರ್ಮ ಮುಗಿಸೋದೆ ಕಷ್ಟ
5. ಸಿಬ್ಬಂದಿ ಖುದ್ದಾಗಿ ಅವರ ಮುಖ್ಯಸ್ಥರಿಗೆ ಸಮಸ್ಯೆ ಹೇಳಿಕೊಳ್ಳಲು ಅವಕಾಶ ನೀಡಬೇಕು
1. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್ಎಫ್ಎಸ್ಎ) ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ಶೇ.76.04, ನಗರ ಪ್ರದೇಶಗಳಲ್ಲಿ ಶೇ.49.36 ಸೇರಿ ಒಟ್ಟು 3,58,87,666 ಫಲಾನುಭವಿಗಳಿಗೆ 1,03,70,669 ಬಿಪಿಎಲ್ ಕಾರ್ಡ್ ನೀಡಬೇಕೆಂಬ ನಿಯಮವಿದೆ.
2. ರಾಜ್ಯದಲ್ಲಿ ಸದ್ಯ 3,92,54,052 ಫಲಾನುಭವಿಗಳಿಗೆ 1,16,98,551 ರೇಷನ್ ಕಾರ್ಡ್ ನೀಡಲಾಗಿದೆ.
ನಿಗದಿಗಿಂತ ಹೆಚ್ಚುವರಿಯಾಗಿ 13,27,882 ಬಿಪಿಎಲ್ ಕಾರ್ಡ್ ನೀಡಲಾಗಿದೆ.
3. ಹೆಚ್ಚುವರಿ ಕಾರ್ಡ್ಗಳಿಂದ ಪ್ರತಿ ವರ್ಷ ಸರ್ಕಾರಕ್ಕೆ ನೂರಾರು ಕೋಟಿ ರೂ. ಆರ್ಥಿಕ ಹೊರೆಯಾಗುತ್ತಿದೆ. ಹೀಗಾಗಿ, ಹೊಸ ಬಿಪಿಎಲ್, ಎಪಿಎಲ್ ಮಂಜೂರಾತಿಗೆ ಮಿತಿ ಹೇರಿದೆ.
4. ರೇಷನ್ ಕಾರ್ಡ್ನಲ್ಲಿ ಹೆಸರು ಬದಲಾವಣೆ, ಆಧಾರ್ ಕಾರ್ಡ್ನಲ್ಲಿರುವ ಹೆಸರು ಸೇರ್ಪಡೆ, ಹೊಸ ಸದಸ್ಯರು ಸೇರಿಸುವುದು, ಯಾರಾದರೂ ಮೃತಪಟ್ಟರೆ ಅಂಥವರ ಹೆಸರು ಡಿಲೀಟ್, ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ವರ್ಗಾವಣೆ ಹಾಗೂ ವಿಳಾಸ ಪರಿಷ್ಕರಣೆ ಮಾಡುವುದನ್ನೂ ಸ್ಥಗಿತಗೊಳಿಸಲಾಗಿದೆ.
1. ಹೊಸದಾಗಿ ಅರ್ಜಿ ಸಲ್ಲಿಸಲು ಆಗಲ್ಲ ? ಹೃದಯ ಸಮಸ್ಯೆ ಸೇರಿ ಇತರೆ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ತೊಂದರೆ ? ಆಸ್ಪತ್ರೆಯಲ್ಲಿ ಲಕ್ಷಾಂತರ ರೂ.ಬಿಲ್ ಹೊರೆ ? ಶಿಕ್ಷಣ ಹಕ್ಕು ಕಾಯ್ದೆ(ಆರ್ಟಿಇ) ಸವಲತ್ತು ಸಿಗಲ್ಲ ? ಪಿಂಚಣಿ, ಹೊಸ ಮನೆ ಸೌಲಭ್ಯವೂ ದೊರೆಯಲ್ಲ ? ಸರ್ಕಾರದಿಂದ ಸಿಗಬೇಕಿದ್ದ ಎಲ್ಲ ಸೌಲಭ್ಯದಿಂದ ವಂಚಿತ ? ಉಚಿತ ಅಕ್ಕಿಯೂ ದೊರೆಯಲ್ಲ
1. ರಾಜ್ಯದಲ್ಲಿ 24 ಲಕ್ಷ ಎಪಿಎಲ್ ಕಾರ್ಡ್ಗಳಿದ್ದು, ಶೇ.80 ಕಾರ್ಡ್ದಾರರು ರೇಷನ್ ಪಡೆಯುತ್ತಿಲ್ಲ.
2. ರೇಷನ್ ಪಡೆಯದ ಕಾರ್ಡ್ ಗಳಿಗೆ ರೇಷನ್ ನಿಲ್ಲಿಸಲುಆಹಾರ ಇಲಾಖೆ ನಿರ್ಧಾರ
3. ಬಡತನ ರೇಖೆಗಿಂತ ಮೇಲ್ಪಟ್ಟವರಿಗೆ ಇಲಾಖೆ ಎಪಿಎಲ್ ಕಾರ್ಡ್
4. ಹೊಸದಾಗಿ ಅರ್ಜಿ ಸಲ್ಲಿಸುವವರಿಗೆ ಗುರುತಿನ ಚೀಟಿಗಾಗಿ ಮಾತ್ರವೇ ಅಥವಾ ರೇಷನ್ಗಾಗಿಯೋ ಎಂಬುದನ್ನೂ ಪ್ರತ್ಯೇಕವಾಗಿ ನಮೂದಿಸಿ ಮಂಜೂರು
5. ಕೇವಲ ಗುರುತಿನ ಚೀಟಿಗೆ ಕಾರ್ಡ್ ಪಡೆಯುವವರಿಗೆ ರೇಷನ್ ಸಿಗುವುದಿಲ್ಲ
6. ಎಪಿಎಲ್ಗೆ ವ್ಯಯಿಸುತ್ತಿರುವ ಅನುದಾನ ಕಡಿತಗೊಳಿಸಿ ಬಿಪಿಎಲ್ದಾರರಿಗೆ ಬೇರೆ ರೇಷನ್ ನೀಡುವ ಚಿಂತನೆ
1. ನಿಗದಿಗಿಂತ ಹೆಚ್ಚುವರಿ ಕಾರ್ಡ್ ಮಂಜೂರು ಮಾಡಬಾರದು
2. 3 ತಿಂಗಳಿಂದ ರೇಷನ್ ಪಡೆಯದ ಕಾರ್ಡ್ ಗಳನ್ನು ರದ್ದುಪಡಿಸಿ
3. ಒಂದೇ ಬಾರಿ ಬಾಕಿ ಉಳಿದಿರುವ ಅರ್ಜಿಗಳ ವಿಲೇ ಮಾಡುವಂತಿಲ್ಲ
4. ಆರ್ಥಿಕ ಸಬಲರು ಪಡೆದಿರುವ ಕಾರ್ಡ್ ಗಳನ್ನು ತಕ್ಷಣ ರದ್ದು ಮಾಡಿ
5. ರದ್ದಾದ ಕಾರ್ಡ್ಗಳ ಆಧಾರದ ಮೇರೆಗೆ ಹಂತ-ಹಂತವಾಗಿ ಅರ್ಜಿ ವಿಲೇ
6. ಹಿರಿತನ ಆಧಾರದ ಮೇರೆಗೆ ಅರ್ಜಿ ವಿಲೇಗೆ ಆದ್ಯತೆ ನೀಡಬೇಕು