ನ್ಯೂಸ್

ಈ ವೀರಕಲಿಗಳಿಗೆ ನಿಮ್ಮದೊಂದು ಸಲಾಂ ಇರಲಿ..! 20 ಹುತಾತ್ಮ ಯೋಧರ ಪಟ್ಟಿ ಇಲ್ಲಿದೆ

ನವದೆಹಲಿ: ಲಡಾಖ್​ನ ಗ್ಯಾಲ್ವಾನ್​ ಕಣಿವೆಯಲ್ಲಿ ಚೀನಾದೊಂದಿಗಿನ ಸಂಘರ್ಷದಲ್ಲಿ 20 ವೀರ ಯೋಧರು ಬಲಿಯಾಗಿದ್ದಾರೆ. ಇವರಲ್ಲಿ ಬಹುತೇಕರು ಬಿಹಾರ ರೆಜಿಮೆಂಟ್​ಗೆ ಸೇರಿದವರು.

ಸೋಮವಾರ ರಾತ್ರಿ ನಡೆದ ಘರ್ಷಣೆಯಲ್ಲಿ ಚೀನಾದ 40ಕ್ಕೂ ಅಧಿಕ ಯೋಧರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.

ಹುತಾತ್ಮ ಭಾರತೀಯ ಯೋಧರಲ್ಲಿ 13 ಜನರು ಬಿಹಾರ ರೆಜಿಮೆಂಟ್​ಗೆ ಸೇರಿದವರಾಗಿದ್ದಾರೆ. ಅದರಲ್ಲೂ 12 ಜನರು 16 ಬಿಹಾರ್​ ಬೆಟಾಲಿಯನ್​ನವರು. ಕರ್ನಲ್​ ಬಿ. ಸಂತೋಷ ಬಾಬು ಈ 12 ಜನರ ಪೈಕಿ ಒಬ್ಬರಾಗಿದ್ದಾರೆ. ಇನ್ನುಳಿದಂತೆ ಮೂವರು ಪಂಜಾಬ್​ ರೆಜಿಮೆಂಟ್​ಗೆ ಸೇರಿದವರು. ಇಬ್ಬರು ಮೀಡಿಯಂ ರೆಜಿಮೆಂಟ್​ನವರು. ಫೀಲ್ಡ್​ ರೆಜಿಮೆಂಟ್​ ಹಾಗೂ ಎಂಬಿಎಸ್​ಸಿಗೆ ಸೇರಿದ ತಲಾ ಒಬ್ಬ ಯೋಧ ವೀರ ಮರಣವನ್ನಪ್ಪಿದ್ದಾರೆ.

ಇದನ್ನೂ ಓದಿ; ಭಾರತಕ್ಕೆ ಪಾಕಿಸ್ತಾನಕ್ಕಿಂತಲೂ ದೊಡ್ಡ ಗಡಿ ತಂಟೆಕೋರ ಚೀನಾ….!

ಹುತಾತ್ಮ ಯೋಧರ ಪಟ್ಟಿ ಇಲ್ಲಿದೆ....

* ಕರ್ನಲ್​ ಬಿಕುಮಲ್ಲಾ ಸಂತೋಷ್​ ಬಾಬು- ಹೈದರಾಬಾದ್​

* ಸುಬೇದಾರ್​ ನುದುರಾಮ್​ ಸೋರೆನ್​- ಮಯೂರ್​ಬಂಜ್​

* ಸುಬೇದಾರ್​ ಮನದೀಪ್​ ಸಿಂಗ್​- ಪಟಿಯಾಲಾ

* ಸುಬೇದಾರ್​ ಸತ್ನಾಮ್​ ಸಿಂಗ್​- ಗುರುದಾಸ್​ಪುರ್​

* ಹವಾಲ್ದಾರ್​ ಕೆ. ಪಳನಿ- ಮಧುರೈ

* ಹವಾಲ್ದಾರ್​ ಸುನಿಲ್​ಕುಮಾರ್​- ಪಟನಾ

* ಹವಾಲ್ದಾರ್​ ಬಿಪುಲ್​ ರಾಯ್​- ಮೀರತ್​

* ದೀಪಕ್​ಕುಮಾರ್​- ರೇವಾ

* ಸಿಪಾಯಿ ರಾಜೇಶ್​ ಓರಂಗ್​- ಬಿರ್​ಭೂಮ್​

* ಸಿಪಾಯಿ ಕುಂದನ್​ಕುಮಾರ್​ ಒಝಾ- ಸಾಹೀಬ್​ಗಂಜ್​

* ಸಿಪಾಯಿ ಗಣೇಶ್​ ರಾಮ್​- ಕಾನ್ಕೆ

* ಸಿಪಾಯಿ ಚಂದ್ರಕಾಂತ್​ ಪ್ರಧಾನ್​- ಕಂದ್​ಮಲ್​

* ಸಿಪಾಯಿ ಅಂಕುಶ್​- ಹಮಿರ್​ಪುರ್​

* ಸಿಪಾಯಿ ಗುಲ್ವಿಂದರ್​- ಸಂಗ್ರೂರ್​

* ಸಿಪಾಯಿ ಗುರುತೇಜ್​ ಸಿಂಗ್​- ಮಾನ್​ಸಾ

* ಸಿಪಾಯಿ ಚಂದನ್​ ಕುಮಾರ್​- ಭೋಜ್​ಪುರ್​

* ಸಿಪಾಯಿ ಕುಂದನ್​ಕುಮಾರ್​- ಸಹರ್ಸಾ

* ಸಿಪಾಯಿ ಅಮನ್​ಕುಮಾರ್​- ಸಮಷ್ಟಿಪುರ

* ಸಿಪಾಯಿ ಜೈಕಿಶೋರ್​ ಸಿಂಗ್​- ವೈಶಾಲಿ

* ಸಿಪಾಯಿ ಗಣೇಶ್​ ಹನ್ಸ್​ದಾ ಪೂರ್ವ ಸಿಂಗ್​ಭೂಮ್​

ಇತ್ತೀಚಿನ ಬೆಳವಣಿಗೆಯಲ್ಲಿ ಚೀನಾ ಗ್ಯಾಲ್ವಾನ್​ ಕಣಿವೆ ತನ್ನದೇ ಎಂದು ಮೊಂಡು ವಾದ ಮಂಡಿಸುತ್ತಿದೆ. ಇತ್ತೀಚಿನ ದಶಕಗಳಲ್ಲಿಯೇ ಇಂಥದ್ದೊಂದು ಬೇಡಿಕೆ ಚೀನಾದಿಂದ ಕೇಳಿಬಂದಿರುವುದು ಇದೇ ಮೊದಲಾಗಿದೆ.