Brahmos Missile: ಬ್ರಹ್ಮೋಸ್ ಕ್ಷಿಪಣಿಯು ಭಾರತದ ಶಕ್ತಿಯನ್ನು ಜಗತ್ತಿಗೆ ಅರಿತುಕೊಳ್ಳುವಂತೆ ಮಾಡಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶನಿವಾರ (ಆಗಸ್ಟ್,30) ಹೇಳಿದ್ದಾರೆ.
ಈ ಬಗ್ಗೆ ನೋಯ್ಡದಲ್ಲಿ ಮಾತನಾಡಿದ ಯೋಗಿ, ಭಾರತದ ರಕ್ಷಣಾ ಉತ್ಪಾದನಾ ವಲಯದಲ್ಲಿ ಯುಪಿಯಲ್ಲಿ ಹೆಚ್ಚುತ್ತಿರುವ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು. ದೇಶದಲ್ಲಿ ಮುಂಬರುವ ಎರಡು ರಕ್ಷಣಾ ಕೈಗಾರಿಕಾ ಕಾರಿಡಾರ್‌ಗಳಿಗೆ ಅನುಗುಣವಾಗಿ, ರಕ್ಷಣಾ ಉತ್ಪಾದನಾ ಘಟಕಗಳ ಅಭಿವೃದ್ಧಿಗಾಗಿ ಯುಪಿಯು 12,500 ಎಕರೆ ಭೂಮಿಯನ್ನು ಹಂಚಿಕೆ ಮಾಡಿದೆ ಎಂದು ಯೋಗಿ ಘೋಷಿಸಿದರು.
ರಾಜ್ಯಕ್ಕೆ ಪ್ರಮುಖ ರಕ್ಷಣಾ ಮೂಲಸೌಕರ್ಯಗಳನ್ನು ತಂದಿದ್ದಕ್ಕಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ರಿಗೆ ಆದಿತ್ಯನಾಥ್ ಕೃತಜ್ಞತೆ ಸಲ್ಲಿಸಿದರು. ವಿಶೇಷವಾಗಿ ಆಪರೇಷನ್ ಸಿಂಧೂರದಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಲಕ್ನೋದಲ್ಲಿ ಬ್ರಹ್ಮೋಸ್ ಕ್ಷಿಪಣಿ ಕೇಂದ್ರವನ್ನು ಸ್ಥಾಪಿಸಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದರು.
ಇದನ್ನೂ ಓದಿ: ಟಿ20 ಕ್ರಿಕೆಟ್ನಲ್ಲಿ ಮೈಲಿಗಲ್ಲು ನಿರ್ಮಿಸಿದ ಕೈರನ್ ಪೊಲ್ಲಾರ್ಡ್: ಈ ಸಾಧನೆಗೈದ 2ನೇ ಆಟಗಾರ| Kyron Pollard
ಭಾರತ 1947ರಿಂದ ಸವಾಲುಗಳನ್ನು ಎದುರಿಸುತ್ತಿದೆ. ಆ ಸವಾಲುಗಳ ಸ್ವರೂಪವು ವಿಕಸನಗೊಳ್ಳುತ್ತಲೇ ಇದೆ. ಕೇಂದ್ರ ಸರ್ಕಾರದಲ್ಲಿ ಬಿಜೆಪಿಗೆ ಅಧಿಕಾರವಿದ್ದರೆ, ಜಗತ್ತು ನಮ್ಮ ಮುಂದೆ ತಲೆಬಾಗುತ್ತದೆ. ಈ ಪ್ರಾಚೀನ ಪರಿಕಲ್ಪನೆಯು ಇಂದಿಗೂ ಪ್ರಸ್ತುತವಾಗಿದೆ ಎಂದು ಯೋಗಿ ತಿಳಿಸಿದ್ದಾರೆ. ಇಂದಿನ ಭೌಗೋಳಿಕ ರಾಜಕೀಯ ವಾತಾವರಣದಲ್ಲಿ ಶಕ್ತಿ ಮತ್ತು ಧೈರ್ಯದ ಮಹತ್ವವನ್ನು ಒತ್ತಿ ಹೇಳಿದ ಆದಿತ್ಯನಾಥ್ ಮಹಾರಾಣಾ ಪ್ರತಾಪ್ರ ವೀರ ಭೋಗ್ಯ ವಸುಂಧರ ವಾಕ್ಯವನ್ನು ಉಲ್ಲೇಖಿಸಿದರು.
ಅಲ್ಲದೆ, ಉತ್ತರ ಪ್ರದೇಶವನ್ನು ತಾಂತ್ರಿಕವಾಗಿ ಮತ್ತು ಕೈಗಾರಿಕಾ ಬೆಳವಣಿಗೆಯ ಕೇಂದ್ರವಾಗಿ ರೂಪಿಸುವಲ್ಲಿ ರಕ್ಷಣಾ ಉತ್ಪಾದನೆಯು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಯೋಗಿ ಹೇಳಿದ್ದಾರೆ.
ಆಪರೇಷನ್ ಸಿಂಧೂರದಲ್ಲಿ ತನ್ನ ಪರಿಣಾಮವನ್ನು ಸಾಬೀತುಪಡಿಸಿರುವ ಬ್ರಹ್ಮೋಸ್ ಕ್ಷಿಪಣಿಯು, ರಾಷ್ಟ್ರೀಯ ರಕ್ಷಣೆಗೆ ಯುಪಿ ನೀಡಿದ ಕೊಡುಗೆಯ ಬಗ್ಗೆ ಆದಿತ್ಯನಾಥ್ ಹೆಮ್ಮೆ ವ್ಯಕ್ತಪಡಿಸಿದರು. ಅಲ್ಲದೆ, ಬ್ರಹ್ಮೋಸ್ ಕ್ಷಿಪಣಿಯು ಭಾರತದ ಶಕ್ತಿಯನ್ನು ಜಗತ್ತಿಗೆ ಅರಿತುಕೊಳ್ಳುವಂತೆ ಮಾಡಿದೆ. ಕ್ಷಿಪಣಿಯ ಯಶಸ್ವಿ ಕಾರ್ಯಾಚರಣೆಯು ಭಾರತದ ಕಾರ್ಯತಂತ್ರದ ಶಕ್ತಿಯನ್ನು ಜಗತ್ತಿಗೆ ಪ್ರದರ್ಶಿಸಿದೆ ಎಂದು ಯೋಗಿ ತಿಳಿಸಿದ್ದಾರೆ.(ಏಜೆನ್ಸೀಸ್)