ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಹೃದಯ ಸ್ಪರ್ಶಿಸುವಂತ ದೃಶ್ಯವೊಂದು ಇದೀಗ ನೆಟ್ಟಿಗರ ಗಮನವನ್ನು ಸೆಳೆದಿದ್ದು, ಇಬ್ಬರು ಹುಡುಗರು ರಭಸವಾಗಿ ಹರಿಯುತ್ತಿದ್ದ ಚರಂಡಿಯ ಕಲ್ಲುಗಳ ಮಧ್ಯೆ ಸಿಲುಕಿದ್ದ ಬೀದಿ ನಾಯಿಯನ್ನು ಸುರಕ್ಷಿತವಾದ ಸ್ಥಳಕ್ಕೆ ಕರೆತಂದ ವಿಡಿಯೋ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ತುಂಬಿ ಹರಿಯುತ್ತಿದ್ದ ಚರಂಡಿಯಲ್ಲಿ ಸಿಲುಕಿದ್ದ ಶ್ವಾನವು, ಸ್ಥಳದಿಂದ ಹೊರಬರಲಾಗದೆ ಪರದಾಡುತ್ತಿತ್ತು. ಇದನ್ನು ನೋಡಿದ ಇಬ್ಬರು ಹುಡುಗರು, ಧೈರ್ಯದಿಂದ ಮುನ್ನುಗ್ಗಿ, ಬೀದಿ ನಾಯಿಯನ್ನು ತಮ್ಮ ತೋಳುಗಳಿಂದ ಹಿಡಿದು ಸುರಕ್ಷಿತ ಜಾಗಕ್ಕೆ ಕರೆತಂದಿದ್ದಾರೆ.
ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ನೆಟ್ಟಿಗರು ಹುಡುಗರ ಮಾನವೀಯತೆ, ಧೈರ್ಯಕ್ಕೆ ಕಮೆಂಟ್ ಮುಖೇನ ಮೆಚ್ಚುಗೆ ವ್ಯಕ್ತಪಡಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ವೀಡಿಯೋ ಶೇರ್ ಮಾಡಿದ್ದಾರೆ,(ಏಜೆನ್ಸೀಸ್).