ಬೆಂಗಳೂರು: ಬೆಂಗಳೂರಿನಲ್ಲಿ ಇಬ್ಬರು ಯುವಕರಿಂದ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಪ್ರೀತಿಸಿದ ಹುಡುಗಿಯ ಮೇಲೆ ಪ್ರಿಯಕರ ಹಾಗು ಸ್ನೇಹಿತನಿಂದ ಲೈಂಗಿಕ ದೌರ್ಜನ್ಯ ನಡೆದಿದ್ದು ಪ್ರಕರಣ ದಾಖಲಾಗಿದೆ.
ಆರೋಪಿಗಳನ್ನು ಪುರುಷೋತ್ತಮ್ ಹಾಗು ಚೇತನ್ ಎಂದು ಗುರುತಿಸಲಾಗಿದೆ. ಪುರುಷೋತ್ತಮ್ ಹಾಗು ಸಂತ್ರಸ್ತ ಯುವತಿ ಒಂದು ವರ್ಷದಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು ಎನ್ನಲಾಗಿದೆ.
ಮೂಲತಃ ತುಮಕೂರಿನ ನಿವಾಸಿಯಾದ ಯುವತಿ ಫಸ್ಟ್ ಗ್ರೇಡ್ ಕಾಲೇಜಿನಲ್ಲಿ ಮೊದಲನೇ ವರ್ಷದ ಪ್ಯಾರಾ ಮೇಡಿಕಲ್ ವಿಧ್ಯಾಬ್ಯಾಸ ಮಾಡುತ್ತಿದ್ದಳು. ಈ ಪುರುಷೋತ್ತಮ, ತುಮಕೂರಿನ ಕೊಟಗೆರೆ ನಿವಾಸಿಯಾಗಿದ್ದು ಇಬ್ಬರೂ ಒಂದು ವರ್ಷದಿಂದ ಪ್ರೀತಿಸುತ್ತಿದ್ದರು.
ಕಳೆದ ಒಂದು ವಾರದ ಹಿಂದೆ ಯುವತಿಯನ್ನು ಆರೋಪಿ ಪುರುಷೋತ್ತಮ ಭೇಟಿ ಮಾಡಿದ್ದ. ನಂತರ ಆತ ಯುವತಿಯ ಮೊಬೈಲ್ ಪಡೆದು ಬೆಂಗಳೂರಿಗೆ ಬಂದಿದ್ದ. ಎರಡು ದಿನಗಳ ಹಿಂದೆ ಪ್ರಿಯಕರನಿಗೆ ಕರೆ ಮಾಡಿ ನನ್ನ ಮೊಬೈಲ್ ವಾಪಸ್ ಕೊಡು ಎಂದು ಯುವತಿ ತಿಳಿಸಿದ್ದಳು.
ಅದಕ್ಕೆ ಆರೋಪಿ ಪುರುಷೋತ್ತಮ, “ಬೆಂಗಳೂರಿನ ಮೆಜೆಸ್ಟಿಕ್ ಬಳಿ ಬಾ. ನಿನ್ನ ಮೊಬೈಲ್ ಕೊಡ್ತಿನಿ” ಎಂದಿದ್ದ. ಈ ಹಿನ್ನೆಲೆಯಲ್ಲಿ ಜೂನ್ 6ರಂದು ಯುವತಿ ಬೆಂಗಳೂರಿನ ಮೆಜೆಸ್ಟಿಕ್ ಗೆ ಬಂದಿದ್ದಳು.
ಆರೋಪಿ ಪುರುಷೋತ್ತಮ, ಯುವತಿಯನ್ನು ಗರಿನಗರದ ಈರಣ್ಣಗುಡ್ಡೆಯ ತನ್ನ ಸ್ನೇಹಿತ ಚೇತನ್ ಮನೆಗೆ ಕರೆದುಕೊಂಡು ಬಂದಿದ್ದ. ನಂತರ ಮೂವರೂ ಮದ್ಯಪಾನ ಮಾಡಿದ್ದಾರೆ. ಈ ಸಂದರ್ಭ ಯುವತಿ, ನನ್ನ ಮೊಬೈಲ್ ಕೊಡು ಊರಿಗೆ ಹೋಗಬೇಕು ಅಂತ ತಿಳಿಸಿದ್ದಳು.
ಆಗ ಪುರುಷೋತ್ತಮ, ‘ಇವತ್ತು ಇಲ್ಲೆ ಇರು’ ಎಂದು ಹೇಳಿ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ನಂತರ ತನ್ನ ಸ್ನೇಹಿತ ಚೇತನ್ ನನ್ನೂ ಕರೆಸಿದ್ದಾನೆ. ಇಬ್ಬರು ಸೇರಿ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.
ಈ ಸಂದರ್ಭ ಯುವತಿಯ ಚೀರಾಟ ಕೇಳಿ ಅಕ್ಕಪಕ್ಕದ ಮೆನೆಯವರು ಬಂದಿದ್ದಾರೆ. ಸ್ಥಳೀಯರು ಕೂಡಲೇ ಗಿರಿನಗರ ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದು ತಕ್ಷಣವೇ ಬಂದು ಯುವತಿಯನ್ನು ರಕ್ಷಿಸಿ, ಆರೋಪಿಗಳಾದ ಚೇತನ್ ಹಾಗು ಪುರುಷೋತ್ತಮರನ್ನ ಬಂಧಿಸಿದ್ದಾರೆ. ಈ ಪ್ರಕರಣ ಗಿರಿನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.