ನ್ಯೂಸ್

ಕಿವಿಯಿಂದ ಬಾಲಕನ ದೇಹ ಸೇರಿದ ಬಾಣವನ್ನು ಆಪರೇಷನ್​ ಮಾಡದೇ ಹೊರತೆಗೆದ ವೈದ್ಯರು!

ಬೀಜಿಂಗ್​: ಆಕಸ್ಮಿಕವಾಗಿ 9 ವರ್ಷದ ಬಾಲಕನ ಕಿವಿಯೊಳಗೆ ನುಸುಳಿ ದೇಹ ಸೇರಿದ್ದ ಬಾಣವನ್ನು ಹೊರತೆಗೆಯುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.

ಮನೆಯಲ್ಲಿ ಏಕಾಂಗಿಯಾಗಿದ್ದ ಬಾಲಕ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಬಾಣ ಕಿವಿಯೊಳಗೆ ತೂರಿ ಬೆನ್ನ ಹಿಂದೆ ಸೇರಿತ್ತು. ಬಾಣವು ಸುಮಾರು 6 ಇಂಚು ಉದ್ದವಿತ್ತು. ಇದನ್ನು ತಿಳಿದ ಪಾಲಕರು ಬಾಲಕನನ್ನು ಕರೆದುಕೊಂಡು ತಕ್ಷಣ ಪೂರ್ವ ಚೀನಾ ಪ್ರಾಂತ್ಯದ ಜಿಯಾಂಗ್ಸೂ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಬಾಲಕನ ದೇಹವನ್ನು ಸ್ಕ್ಯಾನ್​ ಮಾಡಿದ ವೈದ್ಯರಿಗೆ ಲೋಹದ ವಸ್ತುವೊಂದು ಪತ್ತೆಯಾಗಿದೆ.

ಈ ಬಗ್ಗೆ ಮಾತನಾಡಿರುವ ಬಾಲಕ ಮನೆಯಲ್ಲಿ ಏಕಾಂಗಿಯಾಗಿದ್ದ ನಾನು ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಬಾಣವನ್ನು ಕಿವಿಯಲ್ಲಿ ಇಟ್ಟುಕೊಂಡೆ ಎಂದು ತಿಳಿಸಿದ್ದಾನೆ.

ಪ್ರಾರಂಭದಲ್ಲಿ ಬೆನ್ನ ಹಿಂದೆ ಇದ್ದ ಬಾಣ ನಂತರ ದೊಡ್ಡ ಕರುಳಿನಲ್ಲಿ ಸೇರಿರಬಹುದೆಂದು ನಾವು ಪರೀಕ್ಷಿಸಿದೆವು. ಆದರೆ, ವಸ್ತುವು ಪತ್ತೆಯಾಗದಿದ್ದಾಗ, ಮಲದಲ್ಲಿ ಸೇರಿರಬಹುದೆಂದು ಶಂಕಿಸಿ ಬಾಲಕನಿಗೆ ಮಲ ಬರುವಂತೆ ಲವಣವನ್ನು ಸೇರಿಸಿದೆವು. ಕೊನೆಯಲ್ಲಿ ಬಾಣವು ಮಲದಲ್ಲಿ ಪತ್ತೆಯಾಯಿತು ಎಂದು ವೈದ್ಯರೊಬ್ಬರು ತಿಳಿಸಿದ್ದಾರೆ.

ಒಂದು ವೇಳೆ ಬಾಣ ತುದಿ ದೊಡ್ಡ ಕರುಳನ್ನು ಸೀಳಿದ್ದರೆ ಬಾಲಕನ ಜೀವಕ್ಕೆ ಅಪಾಯ ಎದುರಾಗುತ್ತಿತ್ತು. ಆದರೆ, ಪ್ರಾಣಾಪಾಯದಿಂದ ಬಾಲಕ ಬದುಕುಳಿದಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. (ಏಜೆನ್ಸೀಸ್​)