ಸಾಮಾಜಿಕ ಜಾಲತಾಣಗಳಲ್ಲಿ ಸದಾ ಒಂದಿಲ್ಲೊಂದು ವಿಷಯ ಟ್ರೆಂಡ್ ಆಗುತ್ತಲೇ ಇರುತ್ತದೆ. ಅದರಂತೆ ಸ್ವಿಮ್ಮಿಂಗ್ ಪೂಲ್ ದಡದಲ್ಲಿ ನಿಂತು ಬ್ಯಾಕ್ ಫ್ಲಿಪ್ ಮಾಡಲು ಹೋಗಿ ಬಾಲಕನೊಬ್ಬ ಯಡವಟ್ಟು ಮಾಡಿಕೊಂಡ ಘಟನೆ ನಡೆದಿದೆ.
ಈ ಬ್ಯಾಕ್ ಫ್ಲಿಪ್ ಹೆಚ್ಚಾಗಿ ವಿದೇಶಗಳಲ್ಲಿ ಟ್ರೆಂಡ್ ಆಗಿದೆ. ಒಬ್ಬೊಬ್ಬರಂತೆ ಅಥವಾ ಸರತಿ ಸಾಲಿನಲ್ಲಿ ಸ್ವಿಮ್ಮಿಂಗ್ಪೂಲ್ ಬಳಿ ನಿಂತು ಹಿಮ್ಮುಖವಾಗಿ ಕೊಳಕ್ಕೆ ಜಿಗಿಯುವ ಟ್ರೆಂಡ್ ಇದು. ಇಲ್ಲೊಬ್ಬ ಬಾಲಕ ಬ್ಯಾಕ್ ಫ್ಲಿಪ್ ಮಾಡಲು ಹೋಗಿ ಪೇಚಿಗೆ ಸಿಲುಕಿದ್ದಾನೆ.
ಸ್ವಿಮ್ಮಿಂಗ್ ಪೂಲ್ ದಡದಲ್ಲಿ ನಿಂತ ಬಾಲಕ ಹಿಮ್ಮುಖವಾಗಿ ನೀರಿಗೆ ಜಿಗಿದ್ದಿದ್ದಾನೆ. ಅಲ್ಲಿದ್ದವರು ಕೂಡ ಬಾಲಕನನ್ನು ಹುರಿದುಂಬಿಸಿದ್ದರು. ಈ ವೇಳೆ ಬಾಲಕ ಕೊಳಕ್ಕೆ ಬೀಳುವ ಬದಲು ಅದರ ನಡುವಿನ ಮರದ ಹಲಗೆಯ ತಡೆಗೋಡೆಯೊಳಗೆ ಬಿದ್ದು, ಮತ್ತೆ ಮೇಲೆ ಏಳಲಾಗದೇ ಪರದಾಡಿದ್ದಾನೆ. ನಂತರ ಅಲ್ಲೇ ಹತ್ತಿರದಲ್ಲಿ ನಿಂತು ಬಾಲಕನ ವಿಡಿಯೋ ಮಾಡುತ್ತಿದ್ದವರು ಕೊನೆಗೆ ಬಾಲಕನನ್ನು ಮೇಲೆತ್ತಲು ಸಹಾಯ ಮಾಡಿದ್ದಾರೆ.