ನ್ಯೂಸ್

ಬಾಲಕನ ಪ್ರಾಣಕ್ಕೇ ಕುತ್ತು ತಂದ ವಿದೇಶಿ ಚಾಕೋಲೇಟ್..!

ತೆಲಂಗಾಣ: ವಿದೇಶಿ ಚಾಕೋಲೇಟ್​ಗಳ ಮೇಲೆ ಎಲ್ಲರಿಗೂ ಮೋಹ ಇದ್ದೇ ಇರುತ್ತದೆ. ಅದರಲ್ಲೂ ಸಣ್ಣ ಮಕ್ಕಳಿಗಂತೂ ವಿದೇಶಿ ಚಾಕೋಲೇಟ್ ಮೇಲೆ ಎಲ್ಲಿಲ್ಲದ ಕುತೂಹಲ. ಹೀಗಾಗಿ ಮಕ್ಕಳು ಇಷ್ಟಪಟ್ಟೇ ಚಾಕೋಲೇಟ್ ಸೇವಿಸುತ್ತಾರೆ. ಆದರೆ ಇಲ್ಲೊಬ್ಬ 8 ವರ್ಷದ, ವಿದೇಶಿ ಚಾಕೋಲೇಟ್ ಸೇವಿಸಿ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.

ರಾಜಸ್ಥಾನ ಮೂಲದ ಕಂಗಾರ್ ಸಿಂಗ್ ಎಂಬಾತನ ಕುಟುಂಬ 20 ವರ್ಷಗಳ ಹಿಂದೆ ವಾರಂಗಲ್​ ಪ್ರದೇಶಕ್ಕೆ ಬಂದು ನೆಲೆಸಿತ್ತು. ನಗರದಲ್ಲಿ ಎಲೆಕ್ಟ್ರಿಕ್ ಶಾಪ್ ನಡೆಸಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಇವರಿಗೆ ನಾಲ್ವರು ಮಕ್ಕಳು. ಇದೀಗ ಸಂದೀಪ್ ಸಿಂಗ್ ಎಂಬ ಬಾಲಕ ಚಾಕೋಲೇಟ್ ಸೇವಿಸಿ ಸಾವನ್ನಪ್ಪಿದ್ದಾನೆ.

ಇತ್ತೀಚೆಗೆ ಕಂಗಾರ್ ಸಿಂಗ್ ಆಸ್ಟ್ರೇಲಿಯಾಗೆ ತೆರಳಿದ್ದರು. ಇಲ್ಲಿಂದ ಹಿಂತಿರುಗುವ ವೇಳೆ ಚಾಕೋಲೇಟ್ ತಂದಿದ್ದರು. ಎರಡನೇ ತರಗತಿಯಲ್ಲಿ ಓದುತ್ತಿದ್ದ ಮಗ ಸ್ನೇಹಿತರಿಗೆಂದು ಚಾಕೋಲೇಟ್ ತೆಗೆದುಕೊಂಡು ಶಾಲೆಗೆ ಹೋಗಿದ್ದಾನೆ. ಈ ವೇಳೆ ಎಲ್ಲರಿಗೂ ಹಂಚಿ, ತರಗತಿಯಲ್ಲಿ ತಾನೂ ಚಾಕೋಲೇಟ್​​ ಸೇವಿಸಿದ್ದಾನೆ. ಈ ವೇಳೆ ಚಾಕೋಲೇಟ್ ಗಂಟಲಿನಲ್ಲಿ ಸಿಕ್ಕಿಹಾಕಿಕೊಂಡು, ಉಸಿರಾಟಕ್ಕೆ ತೊಂದರೆಯಾಗಿದೆ.

ಬಾಲಕನ ಗಂಟಲಿನಲ್ಲಿ ಚಾಕೋಲೇಟ್ ಸಿಕ್ಕಿ ಹಾಕಿಕೊಂಡಿರುವುದು ಅಧ್ಯಾಪಕಿಯ ಗಮನಕ್ಕೆ ಬರುತ್ತಿದ್ದಂತೆ ಕೂಡಲೇ ಹತ್ತಿರದ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಆದರೆ ಉಸಿರಾಟಕ್ಕೆ ತೊಂದರೆಯಾಗಿದ್ದರಿಂದ ಬಾಲಕನ ಪ್ರಾಣಕ್ಕೇ ಕುತ್ತು ತಂದಿದೆ. (ಏಜೆನ್ಸೀಸ್)