ನವದೆಹಲಿ: ಹೌದು, ತತ್ಕಾಲ್ ಮತ್ತು ಇ-ಟಿಕೆಟ್ ಬುಕಿಂಗ್ ವೇಳೆ ನಡೆಯುತ್ತಿರುವ ಮೋಸ ಮತ್ತು ಮಧ್ಯವರ್ತಿಗಳ ಹಾವಳಿಗೆ ಬ್ರೇಕ್ ಹಾಕಲು ಐಆರ್ಸಿಟಿಸಿ ಮುಂದಾಗಿದೆ. ಈ ಕುರಿತು ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿರುವ ರೈಲ್ವೆ ಸಚಿವ ಪಿಯೂಶ್ ಗೊಯೆಲ್ ತತ್ಕಾಲ್ ಮತ್ತು ಇ-ಟಿಕೆಟ್ ಬುಕಿಂಗ್ ವೇಳೆ ಮಧ್ಯವರ್ತಿಗಳ ವಂಚನೆ ಹಾಗೂ ಇನ್ನಿತರ ಅಕ್ರಮಗಳ ನಿಯಂತ್ರಣಕ್ಕೆ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿರುವುದಾಗಿ ತಿಳಿಸಿದ್ದಾರೆ.
ಆನ್ಲೈನ್ನಲ್ಲಿ ಒಬ್ಬ ಯೂಸರ್ಗೆ ಕೇವಲ ಎರಡು ತತ್ಕಾಲ್ ಟಿಕೆಟ್ ಬುಕ್ ಮಾಡಬಹುದು. ಇದಕ್ಕೆ 10 ರಿಂದ 12 ಗಂಟೆಗಳ ಒಳಗೆ ಮಾತ್ರ ಬುಕಿಂಗ್ಗೆ ರೈಲ್ವೆ ಇಲಾಖೆ ಮಿತಿ ನಿಗದಿ ಪಡಿಸಿದೆ. ರಿಸರ್ವೇಶನ್ ಟಿಕೆಟ್ ಬುಕಿಂಗ್ ವೇಳೆ ಹಲವು ಬಗೆಯ ಅವ್ಯವಹಾರಗಳು ಕಂಡು ಬಂದ ಹಿನ್ನೆಲೆಯಲ್ಲಿ ಐಆರ್ಸಿಟಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಇ-ಟಿಕೆಟ್ ಮತ್ತು ತತ್ಕಾಲ್ ಟಿಕೆಟ್ ಬುಕಿಂಗ್ನಲ್ಲಿ ಮಧ್ಯವರ್ತಿಗಳ ಹಾವಳಿ ನಿಯಂತ್ರಣಕ್ಕಾಗಿ ಕೈಗೊಂಡಿರುವ ಕ್ರಮಗಳು ಈ ರೀತಿ ಇವೆ.
- ಒಬ್ಬ ಯೂಸರ್ಗೆ ಕೇವಲ 2 ತತ್ಕಾಲ್ ಟಿಕೆಟ್ ಬುಕಿಂಗ್ಗೆ ಮಾತ್ರ ಅವಕಾಶ, 10 ರಿಂದ 12 ಗಂಟೆ ಒಳಗೆ ಸಮಯದ ಮಿತಿ
- ತತ್ಕಾಲ್ ಟಿಕೆಟ್ ಬುಕಿಂಗ್ಗೆ ಭದ್ರತಾ ಪ್ರಶ್ನೆಗಳನ್ನು ಪರಿಚಯಿಸಿದೆ
- ಏಜೆಂಟ್ಗಳಿಗೆ ದಿನಕ್ಕೆ ಒಂದು ರೈಲಿಗೆ ಕೇವಲ ಒಂದು ತತ್ಕಾಲ್ ಟಿಕೆಟ್ಗೆ ನಿರ್ಬಂಧ
- ಒಬ್ಬ ವ್ಯಕ್ತಿ ತನ್ನ ಈ ಮೇಲ್ ಐಡಿ ಮತ್ತು ಮೊಬೈಲ್ ನಂಬರ್ ನೀಡಿ ಕೇವಲ ಒಂದೇ ಐಆರ್ಸಿಟಿಸಿ ಯೂಸರ್ ಐಡಿ ಕ್ರಿಯೇಟ್ ಮಾಡಲು ಅವಕಾಶ
- ಒಬ್ಬ ಯೂಸರ್ಗೆ ತಿಂಗಳಿಗೆ ಕೇವಲ 6 ಟಿಕೆಟ್ ಬುಕಿಂಗ್ ಮಿತಿ, ಐಆರ್ಸಿಟಿಸಿ ಯೂಸರ್ ಐಡಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿದ್ದು, ಪ್ರಯಾಣಿಕರ ಪಟ್ಟಿಯಲ್ಲಿ ಆ ಯೂಸರ್ ಇದ್ದರೆ 12 ಟಿಕೆಟ್ಗಳವರೆಗೆ ಬುಕ್ ಮಾಡಲು ಅವಕಾಶ
- ರಿಟರ್ನ್ ಹಾಗೂ ಮುಂದಿನ ಪ್ರಯಾಣದ ಅವಧಿ 8 ರಿಂದ 12 ಗಂಟೆ ಒಳಗಿದ್ದರೆ ಒಬ್ಬ ಯೂಸರ್ಗೆ ಕೇವಲ ಒಂದೇ ಟಿಕೆಟ್ ನಿರ್ಬಂಧವಿಲ್ಲ
- ಬುಕಿಂಗ್ ವೇಳೆ ನಡೆಯುವ ಮೋಸ ತಡೆಗಟ್ಟಲು ರಿಜಿಸ್ಟ್ರೇಷನ್, ಲಾಗಿನ್, ಮತ್ತು ಬುಕಿಂಗ್ ಪೇಜ್ನಲ್ಲಿ ಆಟೋಮೇಷನ್ ಸಾಫ್ಟ್ ವೇರ್, ಕ್ಯಾಪ್ಚ ಸೇರಿದಂತೆ ಮೂರು ವಿವಿಧ ಭದ್ರತಾ ಕ್ರಮ ಕೈಗೊಳ್ಳಲಾಗಿದೆ
- ಪ್ರಯಾಣಿಕರ ವಿವರಗಳ ಪರಿಶೀಲನೆಗಾಗಿ ಐಆರ್ಸಿಟಿಸಿಯಿಂದ ಕನಿಷ್ಠ ಸಮಯ ನಿಗದಿ, ಇ-ಟಿಕೆಟ್ ಬುಕಿಂಗ್ ಸಮಯದಲ್ಲಿ ಕ್ಯಾಪ್ಚ ಪ್ರದರ್ಶನ
- ಐಆರ್ಸಿಟಿಸಿಯ ಅಧಿಕೃತ ಏಜೆಂಟ್ಗಳಿಗೆ ತತ್ಕಾಲ್ ಮತ್ತು ಮುಂಗಡ ಕಾಯ್ದಿರಿಸುವಿಕೆ ಬುಕಿಂಗ್ ಓಪನ್ ಆದ ಮೊದಲು 15 ನಿಮಿಷಗಳು ಮಾತ್ರ ಟಿಕೆಟ್ ಬುಕಿಂಗ್ಗೆ ಅವಕಾಶ
- ಏಜೆಂಟ್ ಮತ್ತು ಏಜೆನ್ಸಿಗಳು ಬುಕಿಂಗ್ ವೇಳೆ ಅನಧಿಕೃತ ಹಣದಿಂದ ಟಿಕೆಟ್ ಸಂಗ್ರಹ ಮತ್ತು ಬೇರೆಯವರಿಗೆ ವರ್ಗಾವಣೆ ಮಾಡುವವರ ಮೇಲೆ ಆರ್ಪಿಎಫ್ನಿಂದ ನಿರಂತರ ದಾಳಿ
- ಇ-ಟಿಕೆಟ್ ವಂಚನೆ ಪ್ರಕರಣಗಳ ವಿರುದ್ಧ ಕ್ರಮ, ಐಆರ್ಸಿಟಿಸಿ ಐಡಿ ಬಳಸಿ ಪ್ರಶ್ನೆ ಆಧಾರಿತ ಅರ್ಜಿಗಳ ಪರಿಶೀಲನೆ (ಏಜೆನ್ಸೀಸ್)