ನ್ಯೂಸ್

'ನಾನು- ಬಸವರಾಜ ಬೊಮ್ಮಾಯಿ ಬೀಗರು': ಶಾಮನೂರು ಶಿವಶಂಕರಪ್ಪ

ದಾವಣಗೆರೆ: ಶಾಸಕ ಡಾ. ಶಾಮನೂರು ಶಿವಶಂಕರಪ್ಪ(Shamanur Shivashankarapa) ಮತ್ತು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಸದ್ದಿಲ್ಲದೇ ಒಬ್ಬರನೊಬ್ಬರು ದಾವಣಗೆರೆಯಲ್ಲಿ ಭೇಟಿಯಾಗಿದ್ದಾರೆ.

ಬಸವರಾಜ ಬೊಮ್ಮಾಯಿ ಅವರೊಡನೆ ಕೆಲ ಕಾಲ ಮಾತುಕತೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಮನೂರು ಶಿವಶಂಕರಪ್ಪ ಅವರು, "ನಾನು ಬಸವರಾಜ ಬೊಮ್ಮಾಯಿ ಬೀಗರು. ಚುನಾವಣೆ ಬಳಿಕ ನಮ್ಮಿಬ್ಬರ ಭೇಟಿ ಆಗಿರಲಿಲ್ಲ. ನಿನ್ನೆ ದಾವಣಗೆರೆಗೆ ಅಥಣಿ ವೀರಣ್ಣನವರ ಮನೆಗೆ ಬಂದಿದ್ದರು. ಆ ಬಳಿಕ ಹೋಟೆಲ್​ವೊಂದರಲ್ಲಿ ಕುಳಿತು ಇಬ್ಬರೂ ಕೆಲ ಕಾಲ ಮಾತನಾಡಿದೆವು, ಅದನ್ನೇ ರಹಸ್ಯ ಭೇಟಿ ಎಂದರೆ ಅರ್ಥವೇನು?" ಎಂದು ಹೇಳಿದರು.

"ನೋಡಿ ನಾನು ಕಾಂಗ್ರೆಸ್, ಅವರು ಬಿಜೆಪಿ. ನಮ್ಮ ನಡುವೆ ರಾಜಕೀಯ ಮಾತುಕತೆ ಹೇಗೆ ಸಾಧ್ಯ? ಇಬ್ಬರು ಪರಸ್ಪರ ಶಾಲು ಹಾಕಿಕೊಂಡೆವು ಅಷ್ಟೇ! ಇದನ್ನು ಹೊರತುಪಡಿಸಿದರೆ ಬೇರೆ ಯಾವ ರಾಜಕಾರಣ ಚರ್ಚೆಯೂ ನಡೆದಿಲ್ಲ, ಅದನ್ನು ಮಾಧ್ಯಮದ ಮುಂದೆ ಹೇಳುವ ಅವಶ್ಯಕತೆ ಏನಿಲ್ಲ" ಎಂದು ಹೇಳಿದರು.