Bomb Threat: ದೆಹಲಿ ಹೈಕೋರ್ಟ್‌ಗೆ ಇಮೇಲ್ ಮೂಲಕ ಶುಕ್ರವಾರ ಬಾಂಬ್ ಬೆದರಿಕೆ ಬಂದಿದ್ದು, ವಿಚಾರಣೆಯನ್ನು ಸ್ಥಗಿತಗೊಳಿಸಿ ಆವರಣವನ್ನು ತೆರವುಗೊಳಿಸಲಾಗಿದೆ ಎಂದ ವರದಿಯಾಗಿದೆ.
ವಕೀಲ ಆರ್‌ಜಿ ಅರುಣ್ ಭಾರದ್ವಾಜ್ ಅವರಿಗೆ ವಿಜಯ್ ಶರ್ಮಾ ಎಂಬುವವರು ಕಳುಹಿಸಿರುವ ಬೆದರಿಕೆ ಪತ್ರದಲ್ಲಿ ನ್ಯಾಯಾಲಯದ ಸಂಕೀರ್ಣದಲ್ಲಿ ಸನ್ನಿಹಿತ ಸ್ಫೋಟಗಳ ಬಗ್ಗೆ ಎಚ್ಚರಿಕೆ ನೀಡಲಾಗಿದೆ ಎಂದು ವರದಿ ಉಲ್ಲೇಖಿಸಿದೆ.
ಎಚ್ಚರಿಕೆಯ ನಂತರ, ಭದ್ರತಾ ಸಿಬ್ಬಂದಿ ಜನರನ್ನು ಆವರಣದಿಂದ ಖಾಲಿ ಮಾಡುವಂತೆ ಕೇಳಿಕೊಂಡರು. ಯಾಧೀಶರು, ವಕೀಲರು ಮತ್ತು ಇತರ ಸಿಬ್ಬಂದಿಯನ್ನು ನ್ಯಾಯಾಲಯದ ಆವರಣದಿಂದ ಸ್ಥಳಾಂತರಿಸಲಾಯಿತು. ಇದೀಗ ಬಾಂಬ್ ಪತ್ತೆಗಾಗಿ ದೆಹಲಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ(ಏಜೆನ್ಸೀಸ್)