ದೆಹಲಿ: ಇಂದು ಬೆಳಗ್ಗೆ ದೆಹಲಿ ವಿಮಾನ ನಿಲ್ದಾಣದಿಂದ ದೆಹಲಿ-ಪುಣೆ ವಿಸ್ತಾರಾ ವಿಮಾನ ಟೇಕ್ ಆಫ್ ಆಗಬೇಕಿತ್ತು. ಆದರೆ ಅಷ್ಟರಲ್ಲೇ ಇಲ್ಲಿನ ಜಿಎಂಆರ್ ಗ್ರೂಪ್ ನಡೆಸುತ್ತಿರುವ ಕಾಲ್ ಸೆಂಟರ್‌ಗೆ ಬಾಂಬ್ ಬೆದರಿಕೆ ಕರೆ ಬಂದಿದೆ. ಶೀಘ್ರದಲ್ಲೇ, ಸೆಕ್ಯೂರಿಟಿ ಏಜೆನ್ಸಿಗಳು ತಪಾಸಣೆಗಾಗಿ ವಿಮಾನವನ್ನು ಪ್ರತ್ಯೇಕವಾಗಿ ಇರಿಸಿದ್ದಾರೆ. ಸದ್ಯ ವಿಮಾನದಲ್ಲಿ ಯಾವುದೇ ಅನುಮಾನಾಸ್ಪದ ವಸ್ತು ಕಂಡುಬಂದಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬೆಳಗ್ಗೆ 8:30ಕ್ಕೆ ವಿಮಾನ ಹೊರಡಬೇಕಿತ್ತು ಎಂದು ವರದಿಯಾಗಿದೆ.
UK-971 ದೆಹಲಿ-ಪುಣೆ ವಿಮಾನಕ್ಕೆ ಗುರುಗ್ರಾಮ್‌ನಲ್ಲಿರುವ GMR ಕಾಲ್ ಸೆಂಟರ್‌ಗೆ ಬಾಂಬ್ ಬೆದರಿಕೆ ಬಂದಿದೆ ಎಂದು ಸೆಕ್ಯೂರಿಟಿ ಏಜೆನ್ಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿಮಾನದಲ್ಲಿ 100ಕ್ಕೂ ಹೆಚ್ಚು ಪ್ರಯಾಣಿಕರಿದ್ದು, ಎಲ್ಲ ಪ್ರಯಾಣಿಕರ ಲಗೇಜ್‌ಗಳನ್ನು ಡಿ-ಬೋರ್ಡಿಂಗ್ ಮಾಡಲಾಗಿದೆ. ಪ್ರಯಾಣಿಕರು ಪ್ರಸ್ತುತ ಟರ್ಮಿನಲ್ ಕಟ್ಟಡದಲ್ಲಿದ್ದು, ಅವರಿಗೆ ಉಪಾಹಾರವನ್ನು ನೀಡಲಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ.
ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್‌ಒಪಿ) ಪ್ರಕಾರ, ಸೆಕ್ಯೂರಿಟಿ ಏಜೆನ್ಸಿಗಳು ಅನುಮತಿ ನೀಡುವವರೆಗೆ ವಿಮಾನ ಹಾರಾಟ ನಿಗದಿಪಡಿಸಲಾಗುವುದಿಲ್ಲ. ಸೆಕ್ಯೂರಿಟಿ ಏಜೆನ್ಸಿಗಳಿಂದ ಅಂತಿಮ ಅನುಮತಿ ದೊರೆತ ತಕ್ಷಣ ವಿಮಾನವು ಗಮ್ಯಸ್ಥಾನಕ್ಕೆ (ಪುಣೆ) ಹೊರಡಲಿದೆ.