ನ್ಯೂಸ್

ಫ್ಲೈಓವರ್​ ಜಾಯಿಂಟ್​ನಲ್ಲಿ ಬಿಚ್ಚಿಕೊಂಡ ಬೋಲ್ಟ್​-ನಟ್​: ಸಂಚಾರಕ್ಕೆ ಅಡಚಣೆ, ತಾತ್ಕಾಲಿಕ ದುರಸ್ತಿ..

ಬೆಂಗಳೂರು: ರಾಜಧಾನಿ ಬೆಂಗಳೂರಿನ ಕೆ.ಆರ್.ಮಾರುಕಟ್ಟೆ ಫ್ಲೈಓವರ್ ಜಾಯಿಂಟ್​ನಲ್ಲಿನ ಬೋಲ್ಟ್​-ನಟ್​ಗಳು ಬಿಚ್ಚಿಕೊಂಡಿದ್ದು, ಕೆಲಕಾಲ ಆತಂಕದ ವಾತಾವರಣ ಉಂಟಾಗಿತ್ತು. ಸದ್ಯಕ್ಕೆ ತಾತ್ಕಾಲಿಕ ದುರಸ್ತಿ ಕೈಗೊಳ್ಳಲಾಗಿದೆ.

ಕೃಷ್ಣರಾಜೇಂದ್ರ ಮಾರುಕಟ್ಟೆ ಮೇಲ್ಸೇತುವೆಯಲ್ಲಿನ ಜಾಯಿಂಟ್​ನಲ್ಲಿನ ಸುಮಾರು 1 ಮೀಟರ್​ ಉದಕ್ಕೆ ಅಳವಡಿಸಲಾಗಿರುವ ಬೋಲ್ಟ್​-ನಟ್​ಗಳು ಬಿಚ್ಚಿಕೊಂಡು ಸಡಿಲಗೊಂಡಿದ್ದು, ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾದಂಥ ಪ್ರಸಂಗ ಕಂಡುಬಂದಿತ್ತು.

ಟ್ರಾಫಿಕ್ ಡಿಸಿಪಿ ಕುಲದೀಪ್ ಕುಮಾರ್ ಜೈನ್, ಚೀಫ್ ಇಂಜಿನಿಯರ್​ ವಿನಾಯಕ್ ಸುಗೂರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತುರ್ತುಕ್ರಮ ಕೈಗೊಂಡಿದ್ದಾರೆ. ಮೆಕಾನಿಕಲ್ ಪ್ರಾಬ್ಲಮ್‌ನಿಂದ ಹೀಗಾಗಿದೆ, ತಾತ್ಕಾಲಿಕವಾಗಿ ದುರಸ್ತಿ ಮಾಡಿದ್ದೇವೆ, ನಾಳೆ ಕೆಲಸ ಸಂಪೂರ್ಣ ಮುಗಿದಿರುತ್ತದೆ. ಸದ್ಯಕ್ಕೆ ವಾಹನಗಳು ಸಂಚರಿಸುತ್ತಿವೆ, ಅಂಥ ತೊಂದರೆ ಏನಿಲ್ಲ ಎಂಬುದಾಗಿ ಚೀಫ್ ಇಂಜಿನಿಯರ್ ತಿಳಿಸಿದ್ದಾರೆ.