ನ್ಯೂಸ್

ಕಿರುತೆರೆ ನಟಿ ಶಾಕಿಂಗ್ ಕಾಮೆಂಟ್ಸ್.. ಡೈರೆಕ್ಟರ್ ಜೊತೆ ರಾತ್ರಿ ಕಳೆದರೆ ಸೀರಿಯಲ್ ಆಫರ್..!

ಮುಂಬೈ: ಬೆಳ್ಳಿತೆರೆ ಅಥವಾ ಕಿರುತೆರೆ ಯಾವುದೇ ಆಗಿರಲಿ ನಟ, ನಟಿಯರು ವೃತ್ತಿಜೀವನದಲ್ಲಿ ಮೇಲೇರಲು ಸಾಕಷ್ಟು ಕಷ್ಟ- ನಷ್ಟ, ನೋವು -ನಲಿವು ಅನುಭವಿಸಿರುತ್ತಾರೆ. ಅದೇ ರೀತಿ ಇಲ್ಲೊಬ್ಬ ಕಿರುತೆರೆ ನಟಿ ತನ್ನ ಜೀವನದಲ್ಲಿ ಅನುಭವಿಸಿದ ನೋವು ಬಿಚ್ಚಿಟ್ಟಿದ್ದಾಳೆ. ಕಾಸ್ಟಿಂಗ್ ಕೌಚ್ ಬಗ್ಗೆ ಆಕೆ ಆಘಾತಕಾರಿ ಕಾಮೆಂಟ್‌ ಮಾಡಿದ್ದಾರೆ.

ಹಿಂದಿ ಪ್ರೇಕ್ಷಕರಿಗೆ ಮತ್ತು ಹಿಂದಿ ಧಾರಾವಾಹಿಗಳನ್ನು ನೋಡುವವರಿಗೆ ಕಿರುತೆರೆ ನಟಿ ದಿವ್ಯಾಂಕಾ ತ್ರಿಪಾಠಿ ಬಗ್ಗೆ ಪರಿಚಯ ಅಗತ್ಯವಿಲ್ಲ. ಬಾಲಿವುಡ್ ಕಿರುತೆರೆಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಈಕೆಯಾಗಿದ್ದಾಳೆ. ಆದರೆ ಈ ಯಶಸ್ಸು ದಿವ್ಯಾಂಕಾಗೆ ಸುಲಭವಾಗಿ ಸಿಕ್ಕಿರಲಿಲ್ಲ. ಅನೇಕ ಕಷ್ಟಗಳನ್ನು ಎದಿರಿಸಿದ್ದ ಆಕೆ ಇತ್ತೀಚಿನ ಸಂದರ್ಶನವೊಂದರಲ್ಲಿ ಆಕೆ ಅದನ್ನು ಹಂಚಿಕೊಂಡಿದ್ದಾಳೆ.

"ನನ್ನ ಜೀವನದಲ್ಲಿ ನಾನು ಅನೇಕ ಕಷ್ಟಗಳನ್ನು ಎದುರಿಸಿದ್ದೇನೆ. ನನ್ನ ವೃತ್ತಿಜೀವನದ ಆರಂಭದಲ್ಲಿ ನಾನು ಟೂತ್‌ಪೇಸ್ಟ್ ಬಾಕ್ಸ್‌ಗಳನ್ನು ಮಾರಾಟ ಮಾಡುತ್ತಿದ್ದೆ. ಒಂದು ಪೇಸ್ಟ್​ ಬಕ್ಸ್​ಗೆ ಒಂದು ರೂಪಾಯಿ ಕೊಡುತ್ತಿದ್ದರು. ಆ ಹಣ ತಿಂಗಳಿಗೆ 2 ಸಾವಿರ ರೂ. ಸಿಗುತ್ತಿತ್ತು ಎಂದಿದ್ದಾಳೆ.

ಇನ್ನು ದಿವ್ಯಾಂಕಾ ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಪ್ರಮುಖ ಕಾಮೆಂಟ್‌ಗಳನ್ನು ಮಾಡಿದ್ದಾರೆ. “ಧಾರಾವಾಹಿ ಅಥವಾ ಕಾರ್ಯಕ್ರಮ ಮುಗಿದ ನಂತರ ಕಲಾವಿದರಿಗೆ ನಿಜವಾದ ಕಷ್ಟ ಪ್ರಾರಂಭವಾಗುತ್ತವೆ. ಸರಿಯಾದ ಅವಕಾಶ, ಹಣ ಸಿಗಬೇಕಾದರೆ ತೊಂದರೆ ಎದುರಿಸಬೇಕಾಗುತ್ತದೆ. ನನಗೂ ಅಂತಹ ಕಷ್ಟದ ಅನುಭವವಾಗಿತ್ತು. ಪಾವತಿಸಬೇಕಾದ ಬಿಲ್‌ಗಳು ಮತ್ತು ಇಎಂಐಗಳನ್ನು ಮ್ಯಾನೇಜ್​ ಮಾಡುವುದು ನನಗೂ ಕಷ್ಟವಿತ್ತು. ಆಗ ನನಗೊಂದು ಸೀರಿಯಲ್​ನಲ್ಲಿ ನಟಿಸುವ ಅವಕಾಶ ಬಂದಿತ್ತು. ಒಳ್ಳೆಯ ಅವಕಾಶ ಬಂದಿದೆ ಎಂದುಕೊಂಡು ಹೋಗಿದ್ದೆ. ಅಲ್ಲಿ ಡೈರೆಕ್ಟರ್ ತನ್ನ ಜೊತೆ ಒಂದು ರಾತ್ರಿ ಕಳೆದರೆ ಮಾತ್ರ ಸೀರಿಯಲ್ ಆಫರ್ ಕೊಡುತ್ತೇನೆ ಎಂದು ಹೇಳಿದ್ದ. ಸ್ವಲ್ಪ ಹೊತ್ತು ನನಗೇನೂ ಅರ್ಥವಾಗಲಿಲ್ಲ. ನಾನು ಅಲ್ಲಿಂದ ಹೊರಟೆ.

ಇಂತಹ ವಿಷಯಗಳು ತುಂಬಾ ಸಾಮಾನ್ಯವೆಂದು ಉದ್ಯಮವು ನಿಮ್ಮನ್ನು ನಂಬುವಂತೆ ಮಾಡುತ್ತದೆ. ಅವರು ಹೇಳಿದಂತೆ ಮಾಡದಿದ್ದರೆ ನಿಮ್ಮ ವೃತ್ತಿಜೀವನವನ್ನು ಹಾಳು ಮಾಡುವುದಾಗಿ ಬೆದರಿಕೆ ಹಾಕುತ್ತಾರೆ. ಆದರೆ, ಭಯಪಡಬೇಡಿ. ಅಂತಹ ಜನರು ನಿಮ್ಮನ್ನು ಏನನ್ನೂ ಮಾಡಲು ಸಾಧ್ಯವಿಲ್ಲ. ನಿಮ್ಮ ಪ್ರತಿಭೆಯನ್ನು ನಂಬಿರಿ. ನಿಮಗೆ ಉತ್ತಮ ಅವಕಾಶಗಳು ಸಿಗಲಿವೆ. ಈ ರೀತಿ ಕಾಸ್ಟಿಂಗ್ ಕೌಚ್ ಮತ್ತು ಮೀಟೂ ಬಗ್ಗೆ ಯೋಚಿಸುವ ಬದಲು ಇಂತಹ ಘಟನೆಗಳು ನಡೆಯಲಿಲ್ಲ ಎಂದು ನಿರ್ಲಕ್ಷಿಸುವುದು ಒಳಿತು ಎಂದು ದಿವ್ಯಾಂಕಾ ಹೇಳಿದ್ದಾರೆ.