Bollywood: 2024 ಕಳೆದ 2025 ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದು, ಜನರು ಹೊಸ ವರ್ಷವನ್ನು ಭರ್ಜರಿ ಆಚರಣೆಯೊಂದಿಗೆ ಸ್ವಾಗತಿಸಿರುವುದು ವಿಶೇಷ. 2024ರಲ್ಲಿ ಸಿಹಿ-ಕಹಿ, ನೋವು-ನಲಿವು ಸೇರಿದಂತೆ ಹಲವು ವಿಷಯಗಳ ಝಲಕ್ ಹಾಕುತ ನೂತನ ವರ್ಷಕ್ಕೆ ಕಾಲಿಟ್ಟ ಜನತೆ, ಇದೀಗ ಹೊಸ ಬದುಕು, ಹೊಸ ಯೋಜನೆ, ಹೊಸ ಆಯಾ ಕಂಡುಕೊಳ್ಳಲು ಉತ್ಸಾಹದಿಂದ ಎದುರುನೋಡುತ್ತಿದ್ದರು. ಎಲ್ಲಾ ಕ್ಷೇತ್ರಗಳು ಈ ವರ್ಷ ದೊಡ್ಡ ಗೆಲುವಿನತ್ತ ಕಣ್ಣಿಟ್ಟಿರುವಾಗ ಬಾಲಿವುಡ್ ಮಾತ್ರ ಸರಣಿ ಸೋಲಿನಿಂದ ಕಂಗೆಟ್ಟಿರುವುದು ದುರಂತ.
ಇದನ್ನೂ ಓದಿ: ಫೆ. 28ರಿಂದ 3 ದಿನ ಹಂಪಿ ಉತ್ಸವ: ಸಿಎಂ ಒಪ್ಪಿಗೆ, ಸಿದ್ಧತೆಗೆ ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ | Hampi Utsava
ಸ್ಯಾಂಡಲ್ವುಡ್, ಟಾಲಿವುಡ್, ಕಾಲಿವುಡ್, ಮಾಲಿವುಡ್ ಸೇರಿದಂತೆ ಭಾರತೀಯ ಇತರೆ ಭಾಷೆಯ ಚಿತ್ರೋದ್ಯಮಗಳು ವರ್ಷ ಪೂರ ಹಲವು ಸಿನಿಮಾಗಳನ್ನು ಸಿನಿ ಮಾರುಕಟ್ಟೆಯಲ್ಲಿ ರಿಲೀಸ್ ಮಾಡಿ, ಬಹುತೇಕ ಚಿತ್ರಗಳಲ್ಲಿ ಯಶಸ್ಸು ಸಾಧಿಸಿದೆ. ಕೆಲವೇ ಕೆಲವು ಸಿನಿ ಇಂಡಸ್ಟ್ರಿಗಳು ಮಾತ್ರ 2024ರಲ್ಲಿ ತಾವು ಅಖಾಡಕ್ಕಿಳಿಸಿದ ಬಹುತೇಕ ಚಿತ್ರಗಳು ಸೋಲು ಕಂಡಿದ್ದರಿಂದ ಉದ್ಯಮದಲ್ಲಿ ಭಾರೀ ನಷ್ಟವನ್ನು ಅನುಭವಿಸಿದ್ದು, ಮುಂದಿನ ದಿನಗಳಲ್ಲಿ ಅಬ್ಬರಿಸುವ ಉತ್ಸಾಹವನ್ನೇ ಸದ್ಯ ಕಳೆದುಕೊಂಡಿದೆ.
ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವುದು ಬಾಲಿವುಡ್. ಅದು ಸ್ಟಾರ್ ಹಾಗೂ ದಿಗ್ಗಜ ನಟನ ಮೇಲೆಯೇ ಇಡೀ ಚಿತ್ರರಂಗದ ಭರವಸೆ ಮತ್ತು ವಿಶ್ವಾಸವಿರುವುದು ಇಲ್ಲಿ ಗಮನಿಸಬೇಕಾದ ವಿಷಯ. 2023 ಹಾಗೂ ಅದರ ಹಿಂದಿನ ವರ್ಷಗಳಲ್ಲಿ ಬಾಲಿವುಡ್ನ ಕಿಂಗ್ ಖಾನ್ ನಟ ಶಾರುಖ್ ಖಾನ್ ಅಭಿನಯದ 'ಪಠಾಣ್' ಮತ್ತು 'ಜವಾನ್' ಸಿನಿಮಾಗಳು ಜಾಗತಿಕ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಗಳಿಕೆ ಕಾಣುವ ಮೂಲಕ ಹೊಸ ದಾಖಲೆಯನ್ನೇ ನಿರ್ಮಿಸಿತು. ಈ ಚಿತ್ರಗಳು ಬಾಲಿವುಡ್ ಮೇಲಿನ ನಿರೀಕ್ಷೆಗಳನ್ನು ದುಪ್ಪಟ್ಟಾಗಿಸಿತ್ತು. ಆದರೆ, ಕಳೆದ ವರ್ಷ ಯಾವ ಚಿತ್ರಗಳು ಹಿಟ್ ಆಗದಿರುವುದು ಪ್ರೇಕ್ಷಕರಲ್ಲಿ ಗೊಂದಲ ಮೂಡಿಸಿದೆ.
ಕನ್ನಡ, ತಮಿಳು ಮತ್ತು ತೆಲುಗು ಚಿತ್ರಗಳ ಸದ್ದು-ಗದ್ದಲ ಬಿಟ್ಟರೆ ಬಾಲಿವುಡ್ ಚಿತ್ರಗಳಿಂದ ಬಾಕ್ಸ್ ಆಫೀಸ್ನಲ್ಲಿ ಅಂತಹ ಕಮಾಲ್ ಯಾವುದೂ ಇಲ್ಲ. ಇತ್ತೀಚೆಗಷ್ಟೇ ತೆರೆಕಂಡ ವರುಣ್ ಧವನ್ ನಟಿಸಿದ 'ಬೇಬಿ ಜಾನ್' ಚಿತ್ರಗಳಿಂದ ಹಿಡಿದು ಹಲವಾರು ಸಿನಿಮಾಗಳು 2024ರಲ್ಲಿ ಸೋಲು ಕಂಡಿದೆ. ಇದು ಹಿಂದಿ ಚಿತ್ರೋದ್ಯಮದ ಮೇಲೆ ಸದ್ಯ ಭಾರೀ ಒತ್ತಡ ಹೇರಿದೆ. ಶಾರುಖ್ ಖಾನ್ ಸಿನಿಮಾಗಳು ಗಮನಸೆಳೆದ ರೀತಿ ಇನ್ಯಾರ ಚಿತ್ರಗಳು ಸೆಳೆಯದೆ ಇರುವುದು ನಟನ ಮೇಲಿನ ನಿರೀಕ್ಷೆಗಳನ್ನು ಹೆಚ್ಚು ಮಾಡಿದೆ.
2025ರಲ್ಲಿ ಶಾರುಖ್ ಖಾನ್ ಅಭಿನಯದ ಯಾವುದಾದರೂ ಸಿನಿಮಾಗಳು ತೆರೆಗೆ ಬರಲಿವೆಯೇ ಎಂಬ ಪ್ರಶ್ನೆಗಳು ಕಾಡುತ್ತಿದೆ. ಆದರೆ, ವರದಿಗಳ ಪ್ರಕಾರ, ಈ ವರ್ಷವು ಶಾರುಖ್ ನಟನೆಯ ಯಾವ ಚಿತ್ರವು ತೆರೆಗೆ ಬರುವ ಸಾಧ್ಯತೆಯಿಲ್ಲ. ಆದರೆ, 'ಕಿಂಗ್ ದಿಸ್ ಇಯರ್' ಚಿತ್ರದ ಚಿತ್ರೀಕರಣವನ್ನು 2025ರಲ್ಲಿ ಶಾರುಖ್ ಕೈಗೊಳ್ಳಲಿದ್ದು, ನಂತರದಲ್ಲಿ 'ಪಠಾಣ್ 2' ಮತ್ತು 'ಟೈಗರ್ ವರ್ಸಸ್ ಪಠಾನ್' ಪ್ರಾಜೆಕ್ಟ್ಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ಸಿನಿ ಮೂಲಗಳು ಮಾಹಿತಿ ಹಂಚಿಕೊಂಡಿವೆ,(ಏಜೆನ್ಸೀಸ್).