ಮುಂಬೈ: ಬಾಲಿವುಡ್ ಚಿತ್ರರಂಗದ ಹಿರಿಯ ನಟ, ಶಾರೂಖ್ ಖಾನ್ ಅಭಿನಯದ ಬ್ಲಾಕ್ಬಸ್ಟರ್ ಚಕ್ ದೇ ಇಂಡಿಯಾ ಸಿನಿಮಾ ಖ್ಯಾತಿಯ ನಟ ರಿಯೋ ಕಪಾಡಿಯಾ ಅವರ ಇಂದು ವಿಧಿವಶರಾಗಿದ್ದಾರೆ.
'ಚಕ್ ದೇ ಇಂಡಿಯಾ' ಮತ್ತು 'ದಿಲ್ ಚಾಹ್ತಾ ಹೈ' ಚಿತ್ರದಲ್ಲಿನ ಪಾತ್ರಗಳಿಗೆ ಹೆಸುರುವಾಸಿಯಾದ ರಿಯೋ ಕಪಾಡಿಯಾ ಇಂದು ಕೊನೆಯುಸಿರೆಳೆದರು ಎಂದು ಅವರ ಆಪ್ತರಾದ ಫೈಸಲ್ ಮಲಿಕ್ ಸುದ್ದಿವಾಹಿನಿಗಳಿಗೆ ಮಾಹಿತಿ ತಿಳಿಸಿದ್ದಾರೆ.
ಇದನ್ನೂ ಓದಿ: VIDEO | ಕಡಿಮೆ ಟಿಪ್ ಕೊಟ್ಟರೆಂದು ಪಾರ್ಸೆಲ್ ಫುಡ್ ಮೇಲೆ ಉಗುಳಿದ ಡೆಲಿವರಿ ವ್ಯಕ್ತಿ; ವಿಡಿಯೋ ವೈರಲ್
'ದಿಲ್ ಚಾಹ್ತಾ ಹೈ', 'ಹ್ಯಾಪಿ ನ್ಯೂ ಇಯರ್' ಮತ್ತು 'ಮರ್ದಾನಿ' ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದ ರಿಯಾ ಅವರು ತಮ್ಮ 66 ವರ್ಷದಲ್ಲಿ ಇಹಲೋಕ ತ್ಯಜಿಸಿದ್ದಾರೆ. ಪತ್ನಿ ಮರಿಯಾ ಫರಾಹ್ ಮತ್ತು ತಮ್ಮ ಇಬ್ಬರು ಮಕ್ಕಳಾದ ಅಮನ್ ಹಾಗೂ ವೀರ್ ಅವರನ್ನು ಅಗಲಿದ್ದಾರೆ. ನಟನ ಅಗಲಿಕೆಗೆ ಚಿತ್ರರಂಗ ಮತ್ತು ಅಭಿಮಾನಿಗಳು ಕಂಬನಿ ಮಿಡಿದಿದೆ.